ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್: ಆರೋಪಿ ಜೆಡಿಎಸ್​ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ

ಜೆಡಿಎಸ್​ ಮುಖಂಡ ಪ್ರಕಾಶ್ ಮುಧೋಳ (50) ಎಂಬಾತ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಳಿ ಇರುವ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ (Paramramarudh Swamiji) ಅವರಿಗೆ ಒಂದು ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಈ ಕುರಿತು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್ ಸುದ್ದಿಗೋಷ್ಠಿ ನಡೆಸಿ ಆರೋಪಿಯ ಕ್ರೈಂ ಡೈರಿ ಬಿಚ್ಚಿಟ್ಟಿದ್ದಾರೆ.

ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್: ಆರೋಪಿ ಜೆಡಿಎಸ್​ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ
ಸ್ವಾಮೀಜಿಗೆ ಕೋಟಿ ರೂ. ವಂಚನೆ ಕೇಸ್: ಆರೋಪಿ ಜೆಡಿಎಸ್​ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2024 | 4:07 PM

ಬಾಗಲಕೋಟೆ, ಅ.01: ಪರಮರಾಮಾರೂಢ ಸ್ವಾಮೀಜಿಗೆ ಕೋಟಿ ರೂ. ವಂಚನೆ ‌ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್(IGP Vikas Kumar)​ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ‘ಕಳೆದ‌ ಸೆಪ್ಟಂಬರ್ 27 ರಂದು ಪರಮರಾಮಾರೂಢ ಸ್ವಾಮೀಜಿ(Paramramarudh Swamiji) ಅವರು ಘಟನೆ ಸಂಬಂಧ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಆಧರಿಸಿ 308, 352, 204 ಸೆಕ್ಷನ್ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಜೆಡಿಎಸ್​ ಮುಖಂಡ ಪ್ರಕಾಶ್ ಮುಧೋಳ (50) ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ಜೆಡಿಎಸ್​ ಮುಖಂಡನ ಕ್ರೈಂ ಡೈರಿ ಬಿಚ್ಚಿಟ್ಟ ಐಜಿಪಿ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಮೂಲದವನಾದ ಆರೋಪಿ ಪ್ರಕಾಶ್ ಎಂಬಾತ  2024 ರಲ್ಲಿ ರಾಮದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎಲೆಕ್ಷನ್​ಗೆ ನಿಂತಿದ್ದ. ಇತನ ಮೇಲೆ ಈ ಹಿಂದೆ 3 ಕಳ್ಳತನ, 3 ಚೀಟಿಂಗ್, 3 ಸುಲಿಗೆ, 1 ಸಾರ್ವಜನಿಕ ಅಡೆತಡೆ ಸೇರಿದಂತೆ 12 ಕೇಸ್ ಇರುವುದು ಪತ್ತೆಯಾಗಿದೆ. ಈತ ಸೆಪ್ಟೆಂಬರ್ 12 ರಂದು ರಾಮಾರೂಢ ಮಠಕ್ಕೆ ಭೇಟಿ ನೀಡಿ, ಮೊದಲು ಪರಮರಾಮಾರೂಢ ಸ್ವಾಮೀಜಿ ಪರಿಚಯ ಮಾಡಿಕೊಳ್ಳುತ್ತಾನೆ. ಬಳಿಕ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ ವಿಚಾರಣೆ ಮಾಡಿ, ಎರಡು ತಾಸಿಗೂ ಅಧಿಕ ಕಾಲ ಸ್ವಾಮೀಜಿ ಹಾಗೂ ಮಠದಲ್ಲಿ ಕಳೆಯುತ್ತಾನೆ. ಆಗ ಅವರ ಪೋನ್ ನಂಬರ್​ ಪಡೆಯುತ್ತಾನೆ.

ಇದನ್ನೂ ಓದಿ:ಜೆಡಿಎಸ್ ಮುಖಂಡನಿಂದ ಬಾಗಲಕೋಟೆ ರಾಮಾರೂಢ ಮಠ ಸ್ವಾಮೀಜಿಗೆ 1 ಕೋಟಿ ರೂ. ವಂಚನೆ

ಸ್ವಾಮೀಜಿಗೆ ವಂಚನೆ ಎಸಗಲು ಶುರು

ನಂತರ ಮಾರನೇ ದಿನದಿಂದ ವಂಚನೆ ಎಸಗಲು ಕಾರ್ಯಪ್ರವೃತ್ತನಾದ ಆತ, ಸೆಪ್ಟೆಂಬರ್ 12, 14 ರಂದು ಕರೆ ಮಾಡುವುದಕ್ಕೆ ಶುರು ಮಾಡುತ್ತಾನೆ. ಎರಡು ದಿನ ಸ್ವಾಮೀಜಿಗೆ ಕಾಲ್​ ಕನೆಕ್ಟ್ ಆಗಲಿಲ್ಲ.‌‌ ನಂತರ ಕಲಾದಗಿ ಠಾಣೆಗೆ ಕರೆ‌ಮಾಡಿ ಅಲ್ಲಿಂದ ಹೈವೆ ಪೆಟ್ರೋಲ್ ಇನ್ ಚಾರ್ಜ್ ಅಧಿಕಾರಿ ನಂಬರ್​ ಪಡೆದು, ಅವರಿಗೆ ಬೆಂಗಳೂರು ಡಿಎಸ್​ಪಿ ಜೊತೆ ಮಾತಾಡಿದ್ದೀನಿ. ಒಂದು ಮುಖ್ಯವಾದ ಕೇಸ್ ಇದೆ, ಪರಮರಾಮಾರೂಢ ಸ್ವಾಮೀಜಿ ಜೊತೆ ಮಾತಾಡಬೇಕು. ಅಲ್ಲಿ ಹೋಗಿ ಪೋನ್ ನಂಬರ್​ ಕೊಡಿ ಎಂದು ಹೇಳುತ್ತಾನೆ. ಆಗ ಸ್ವಾಮೀಜಿಗೆ ನಿಮ್ಮ ಬಗ್ಗೆ ನಮಗೆ ದೂರು ಬಂದಿದೆ ಎಂದು ಬೆದರಿಕೆ ಹಾಕುತ್ತಾನೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ಮಾನವ ಸರಪಳಿ ಕಾರ್ಯಕ್ರಮ ಇರುತ್ತದೆ. ಅದೇ ದಿನಡಿಎಸ್​ಪಿ, ಎಡಿಜಿಪಿ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿ ರೂ. ಬೇಡಿಕೆ ಇಡುತ್ತಾನೆ. ಸ್ವಾಮೀಜಿ ಮಠದ ಮರ್ಯಾದೆ ಹಾಗೂ ಜೀವಭಯದಿಂದ ಸೆಪ್ಟೆಂಬರ್ 15 ರ ಸಂಜೆ 61 ಲಕ್ಷ ಅರೇಂಜ್ ಮಾಡುತ್ತಾರೆ. ನಂತರ ಸೆಪ್ಟೆಂಬರ್ 16 ರಂದು ಬೆಂಗಳೂರಿಗೆ ಹೋಗಿ 61 ಲಕ್ಷ ಹ್ಯಾಂಡ್ ಒವರ್ ಮಾಡುತ್ತಾರೆ. ಸೆಪ್ಟೆಂಬರ್ 17 ಕ್ಕೆ ಸ್ವಾಮೀಜಿ ಕಡೆಯಿಂದ ವಕಾಲತ್ ನಾಮಾ ಸೈನ್ ಪಡೆಯುತ್ತಾರೆ. ಖಾಲಿ ಪೇಪರ್, ಎರಡು ಖಾಲಿ ಚೆಕ್ ಮೇಲೆ‌ ಸಹಿ ಪಡೆದಿದ್ದಾರೆ. ಕ್ರೈಮ್ ಕವರ್ ಮಾಡೋದಕ್ಕೆ ಇದೆಲ್ಲ ಮಾಡುತ್ತಾರೆ.

ಇದನ್ನೂ ಓದಿ:ಬುದ್ದಿವಂತ ಸಿನಿಮಾದಂತೆ ಮಹಿಳೆಯರಿಗೆ ವಂಚನೆ; ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ

ನಂತರ ಉಳಿದ ಹಣಕ್ಕೆ ಕರೆ ಮಾಡುವುದಕ್ಕೆ ಶುರು ಮಾಡುತ್ತಾನೆ. ಸೆಪ್ಟೆಂಬರ್ 20 ರಂದು ಹುಬ್ಬಳ್ಳಿಯಲ್ಲಿ ಉಳಿದ 35 ಲಕ್ಷ ರೂ. ಹ್ಯಾಂಡ್ ಒವರ್ ಮಾಡಿದ್ದಾರೆ. ಕೋಟಿ ಕೊಟ್ಟ ಮೇಲೆ ಮತ್ತೆ ಹಣಕ್ಕೆ ಬೇಡಿಕೆ ಶುರು ಮಾಡುತ್ತಾನೆ. ಆಗ ಸ್ವಾಮೀಜಿ ಹಾಗೂ ಆತನ ಭಕ್ತರು ದುಡ್ಡು ಪಡೆಯಲು ತಂದಿದ್ದ ವಾಹನ ‌ನಂಬರ್​ ಚೆಕ್‌ ಮಾಡಿದ್ದಾರೆ. ಆಗ ಅದು ಪ್ರಕಾಶ್ ‌ಮುಧೋಳ ಎಂಬಾತನದ್ದು ಎಂದು ತೋರಿಸಿದೆ. ಇದಾದ ಬಳಿಕ ಸಂಶಯ ಬಂದು ಸೆಪ್ಟೆಂಬರ್ 27 ರಂದು ಸಿಎನ್ ಠಾಣೆಗೆ ದೂರು ಕೊಡುತ್ತಾರೆ.

ಎಸ್ ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಮೂರು ತಂಡ; ಆರೋಪಿ ಬಂಧನ

ಬಾಗಲಕೋಟೆ ಎಸ್​ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡ ರೆಡಿ ಮಾಡಲಾಗುತ್ತದೆ. ತಕ್ಷಣ ಕ್ರಮ ಕೈಗೊಂಡು ಒಂದೇ ದಿನದಲ್ಲಿ ಪ್ರಕಾಶ್ ಮುಧೋಳ ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು ಮೂವರು ಭಾಗಿಯಾಗಿದ್ದಾರೆ. ಆರೋಪಿಯಿಂದ ಈಗಾಗಲೇ 87, 19, 500 ರೂ. ಹಣ, ಇನ್ನೋವಾ, ಔರಾ ಕಾರು ಜಪ್ತಿ ಮಾಡಲಾಗಿದೆ. ಜೊತೆಗೆ ಪೊಲೀಸ್ ವಾಹನ ರೀತಿ ಕಾರು ಸಿದ್ದಪಡಿಸಿದ್ದ ವಾಹನದಲ್ಲಿ ವಾಕಿಟಾಕಿ, ಸೈರನ್, ಪೊಲೀಸ್ ವರ್ಲ್ಡ್ ಚಾನಲ್ ಲೊಗೊ, ಮೂರು ಮೊಬೈಲ್, ಎರಡು ಚೆಕ್, ನಾಲ್ಕು ಬಾಂಡ್ ವಶಕ್ಕೆ ಪಡೆಯಲಾಗಿದೆ.

ಇನ್ನು ಆರೋಪಿ ಸ್ವಾಮೀಜಿಗೆ ಏನೆಂದು ಬೆದರಿಕೆ ಹಾಕಿದ್ದ, ಇದರಲ್ಲಿ ಇನ್ನೂ ಯಾರ್ಯಾರ ಪಾತ್ರ ಇದೆ ಎಂಬ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್​ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ