AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಿಗೆ ಮತ್ತೊಂದು ಶಾಕ್​​: ಇನ್ಮುಂದೆ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಬೇಕಾದರೆ ಶುಲ್ಕ ಪಾವತಿಸಬೇಕು

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಬಿಡಿ, ಹೆಬ್ಬಾಳ, ಯಲಹಂಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊಸ ಪಾರ್ಕಿಂಗ್ ಶುಲ್ಕವನ್ನು ಜಾರಿಗೊಳಿಸಿದೆ. ಅನಿಯಮಿತ ವಾಹನ ನಿಲುಗಡೆಯನ್ನು ತಡೆಯಲು ಮತ್ತು ಸಂಚಾರ ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಗಂಟೆ, ದಿನ ಮತ್ತು ಮಾಸಿಕ ಶುಲ್ಕ ನಿಗದಿಪಡಿಸಲಾಗಿದ್ದು, ಇದು ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಹೊರೆಯಾಗಿದೆ.

ಬೆಂಗಳೂರಿಗರಿಗೆ ಮತ್ತೊಂದು ಶಾಕ್​​: ಇನ್ಮುಂದೆ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಬೇಕಾದರೆ ಶುಲ್ಕ ಪಾವತಿಸಬೇಕು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 05, 2026 | 12:34 PM

Share

ಬೆಂಗಳೂರು, ಜ.5: ಬೆಂಗಳೂರಿಗರಿಗೆ ಮತ್ತೊಂದು ಶಾಕ್ (Bengaluru parking fees)​​ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ, ಸಿಕ್ಕ ಸಿಕ್ಕ ಕಡೆ ವಾಹನ ನಿಲುಗಡೆ ಮಾಡುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನರಿಗೆ ಶುಲ್ಕ ವಿಧಿಸುವ ಮೂಲಕ ಬೆಂಗಳೂರು ಜನರಿಗೆ ಪಾರ್ಕಿಂಗ್​​​​​ ರೂಲ್ಸ್​​​ ಮಾಡುವ ನಿಯಮವನ್ನು ಹೇಳಿಕೊಡುವ ಕೆಲಸವನ್ನು ಮಾಡುತ್ತಿದೆ.  ಇನ್ಮುಂದೆ ಸಿಬಿಡಿ, ಹೆಬ್ಬಾಳ ಮತ್ತು ಯಲಹಂಕದಂತಹ ಪ್ರದೇಶಗಳಲ್ಲಿನ ಬೀದಿಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಲಿದೆ. ವಿವಿಧ ವಾಹನಗಳ ಪಾರ್ಕಿಂಗ್ ಶುಲ್ಕಗಳು ನಿಗದಿ ಮಾಡಿದೆ. ಅವುಗಳು ಈ ಕೆಳಂಗಿನಂತಿದೆ.

ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್‌ಗೆ ಗಂಟೆಗೆ 30 ರೂ. ಶುಲ್ಕ ವಿಧಿಸಲಾಗಿದೆ. ದ್ವಿಚಕ್ರ ವಾಹನ ಮಾಲೀಕರು ಗಂಟೆಗೆ 15 ರೂ. ಪಾವತಿಸಬೇಕಾಗುತ್ತದೆ. ದೈನಂದಿನ ಪಾಸ್‌ಗೂ ಅರ್ಜಿ ಸಲ್ಲಿಸಬಹುದು, ಇದು ನಾಲ್ಕು ಚಕ್ರದ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ 150 ಮತ್ತು 75 ರೂ. ಎಂದು ನಿಗದಿ ಮಾಡಿದೆ. ಮಾಸಿಕ ಪಾಸ್‌ಗಳಿಗೆ, ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ 3,000 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 1,500 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ 2,000 ಫಾಲೋವರ್ಸ್‌ ಗಳಿಸಿದ ಮಹಿಳೆ: ಕೇಕ್​​ ಕಟ್​​ ಮಾಡಿ ಸಂಭ್ರಮಿಸಿದ ಬಾಸ್

ಎಕ್ಸ್​​​​ ವೈರಲ್​ ಪೋಸ್ಟ್​ ಇಲ್ಲಿದೆ ನೋಡಿ:

ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡುವ ಪ್ರದೇಶಗಳು:

ಹೆಬ್ಬಾಳ ವಿಭಾಗದ ಟ್ಯಾಂಕ್ ಬಂಡ್ ರಸ್ತೆ, ತರಳಬಾಳು ರಸ್ತೆ ಮತ್ತು ಭೂಪಸಂದ್ರ ಮುಖ್ಯ ರಸ್ತೆ. ಯಲಹಂಕ ಹೊಸ ಪಟ್ಟಣದ ವಾರ್ಡ್ ಸಂಖ್ಯೆ 05 ರಲ್ಲಿ 1 ನೇ ಎ, 13 ನೇ ಎ ಮುಖ್ಯ ರಸ್ತೆಗಳು ಮತ್ತು 3 ನೇ ಬಿ, 16 ನೇ ಬಿ, 15 ನೇ ಎ ಅಡ್ಡ ರಸ್ತೆಗಳು ಮತ್ತು ಸಂದೀಪ್ ಉನ್ನಿಕೃಷ್ಣ ರಸ್ತೆ ಹಾಗೂ ಇತರ ಪ್ರದೇಶಗಳಿಗೂ ಇದನ್ನು ಮುಂದುವರಿಸಲಾಗುವುದು. ಈ ಮೂಲಕ ಸಿಕ್ಕ ಸಿಕ್ಕ ಕಡೆ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಈಗಾಗಲೇ ಜನರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಕಿರುವ ತೆರಿಗೆ ಹೈರಾಣಾಗಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ