AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೆಲ್ಲೋ ಲೈನ್​​ನಲ್ಲಿ ಮೆಟ್ರೋ ಮಿಸ್ ಮಾಡಿಕೊಂಡಿದ್ದಕ್ಕೆ ಪ್ರಯಾಣಿಕನಿಗೆ 50 ರೂ. ದಂಡ!

ಆಗಸ್ಟ್​ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯೆಲ್ಲೋ ಮೆಟ್ರೋ ಮಾರ್ಗವನ್ನ ಲೋಕಾರ್ಪಣೆ ಮಾಡಿದ್ದರು. ಆ. 11 ಸಂಚಾರ ಆರಂಭಿಸಿದ್ದ ಯೆಲ್ಲೋ ಮೆಟ್ರೋಗೆ ಪ್ರಯಾಣಿಕರ ರೆಸ್ಪಾನ್ಸ್ ಕೂಡ ಚೆನ್ನಾಗಿತ್ತು. ಹೀಗಿರುವಾಗ ಇಂದು ಪ್ರಯಾಣಿಕರೊಬ್ಬರು ಮೆಟ್ರೋ ಮಿಸ್ ಮಾಡಿಕೊಂಡಿದ್ದಕ್ಕೆ 50 ರೂ. ದಂಡ ಪಾವತಿಸಬೇಕಾಗಿ ಬಂದಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಯೆಲ್ಲೋ ಲೈನ್​​ನಲ್ಲಿ ಮೆಟ್ರೋ ಮಿಸ್ ಮಾಡಿಕೊಂಡಿದ್ದಕ್ಕೆ ಪ್ರಯಾಣಿಕನಿಗೆ 50 ರೂ. ದಂಡ!
ಯೆಲ್ಲೋ ಲೈನ್ ಮೆಟ್ರೋ
ಕಿರಣ್​ ಸೂರ್ಯ
| Edited By: |

Updated on:Aug 13, 2025 | 2:05 PM

Share

ಬೆಂಗಳೂರು, ಆಗಸ್ಟ್​ 13: ಆ. 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿಯಾಗಿ ಹಳದಿ ಲೈನ್ ಮೆಟ್ರೋಗೆ (Yellow Line Metro) ಚಾಲನೆ ನೀಡಿದ್ದಾರೆ. ಮೊದಲ ದಿನವೇ ಪ್ರಯಾಣಿಕರಿಂದ ತುಂಬಿ ತುಳುಕಿತ್ತು. ಇದೀಗ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಹೀಗಿರುವಾಗ ಮೆಟ್ರೋ ರೈಡ್ ಮಾಡಲು ಬಂದ ಪ್ರಯಾಣಿಕರೊಬ್ಬರಿಗೆ ದಂಡದ (penalty) ಅನುಭವವಾಗಿದೆ. 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾದಿದ್ದಕ್ಕೆ 50 ರೂ. ದಂಡ ಪಾವತಿಸಬೇಕಾಗಿ ಬಂದಿದೆ.

ನಮ್ಮ ಮೆಟ್ರೋದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯುವಂತಿಲ್ಲ ಎಂಬ ನಿಯಮವಿದೆ. ಇದು ಕೆಲವರಿಗೆ ಗೊತ್ತಿದ್ದರೆ ಮತ್ತೆ ಕೆಲವರಿಗೆ ಗೊತ್ತಿಲ್ಲದೆ ದಂಡ ಕಟುತ್ತಾರೆ. ಇದೀಗ ಇಂತಹದೇ ಒಂದು ಘಟನೆ ನಡೆದಿದೆ. ಮೆಟ್ರೋ ಮಿಸ್​ ಮಾಡಿಕೊಂಡ ಪ್ರಯಾಣಿಕನಿಗೆ 50 ರೂ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಯೆಲ್ಲೋ ಲೈನ್ ಉದ್ಘಾಟನೆ ಬೆನ್ನಲ್ಲೇ ಮಿಲಿಯನ್ ದಾಟಿದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ!

ಇದನ್ನೂ ಓದಿ
Image
ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್!
Image
ರೈಲು ಬರುತ್ತಿದ್ದಂತೆ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ
Image
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
Image
ಬೆಂಗಳೂರಿನಲ್ಲಿ ಮೋದಿ ಹವಾ ಹೇಗಿತ್ತು? ಇಲ್ಲಿವೆ ಫೋಟೋಸ್​

ಸಿಲ್ಕ್ ಬೋರ್ಡ್ ಟು ಆರ್​.ವಿ ರಸ್ತೆಗೆ ಹೋಗುವ ಪ್ಲ್ಯಾನ್​​ನಲ್ಲಿದ್ದ ಪ್ರಯಾಣಿಕ, ಟಿಕೆಟ್ ಪಡೆದು ಒಳಗೆ ಹೋಗಿದ್ದಾರೆ. ರೈಲು ಬರುವವರೆಗೂ ಕಾದಿದ್ದಾರೆ. ಆದರೆ, ಜನ ಹೆಚ್ಚು ಇದ್ದಿದ್ದರಿಂದ ಬಂದ ರೈಲು ಹತ್ತಲು ಸಾಧ್ಯವಾಗಿಲ್ಲ. ಬಳಿಕ ಮುಂದಿನ ರೈಲಿಗಾಗಿ 25 ನಿಮಿಷ ಕಾಯಲು ಆಗಲ್ಲ ಅಂತ ವಾಪಸ್ ಬರಲು ತೀರ್ಮಾನಿಸಿದ್ದಾರೆ. ಆದರೆ, ಹೊರಗೆ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿದ್ದೀರಿ ಎಂದು ಬಿಎಂಆರ್​ಎಲ್​ ಸಿಬ್ಬಂದಿ 50 ರೂ. ದಂಡ ವಿಧಿಸಿದ್ದಾರೆ.

ಬಿಎಂಆರ್​ಎಲ್​ನ ಈ ನಿಯಮ ಮೊನ್ನೆಯಷ್ಟೇ ಉದ್ಘಾಟನೆ ಆಗಿರುವ ಹಳದಿ ಲೈನ್ ಮೆಟ್ರೋಗೂ ಅನ್ವಯಿಸಿರುವುದು ಪ್ರಯಾಣಕರಿಗೆ ಸದ್ಯ ಸಮಸ್ಯೆ ಉಂಟು ಮಾಡಿದೆ. ಏಕೆಂದರೆ ಹಳದಿ ಲೈನ್ ಮೆಟ್ರೋ ಹೊರತು ಪಡಿಸಿ ಬೇರೆಡೆ ಪೀಕ್ ಅವರ್​​ನಲ್ಲಿ ಮೂರು ನಿಮಿಷಕ್ಕೆ ಒಂದು ಹಾಗೂ ಉಳಿದಂತೆ 10 ನಿಮಿಷಕ್ಕೆ ಒಂದರಂತೆ ಮೆಟ್ರೋಗಳು ಸಂಚಾರ ಮಾಡುತ್ತಿವೆ. ಅಂತಹ ನಿಲ್ದಾಣಗಳಲ್ಲಿ ಹೆಚ್ಚು ಹೊತ್ತು ಕಳೆದರೆ ದಂಡ ವಿಧಿಸುವುದರಲ್ಲಿ ಒಂದು ಅರ್ಥವಿದೆ ಎನ್ನಬಹುದು. ಆದರೆ ಹಳದಿ ಲೈನ್ ಮೆಟ್ರೋದಲ್ಲಿ ಸದ್ಯ ಕೇವಲ ಮೂರು ರೈಲು ಸಂಚಾರ ಮಾಡುತ್ತಿದೆ. ಒಂದು ರೈಲು ಹೋಗಿ ಇನ್ನೊಂದು ರೈಲು ಬರುವುದಕ್ಕೆ 25 ನಿಮಿಷ ಬೇಕು. ಒಂದು ವೇಳೆ ರೈಲು ಮಿಸ್ ಮಾಡಿಕೊಂಡರೇ ಮುಂದಿನ ರೈಲು ಬರುವವರೆಗೂ ಪ್ರಯಾಣಿಕ ನಿಲ್ದಾಣದ ಒಳಗೆ ಕಾಯಬೇಕು. ಹೀಗಾಗಿ ಸದ್ಯ ಹಳದಿ ಲೈನ್​ನಲ್ಲಿ ಹೊಸ ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.

ನಾನು ಬಸ್​ನಲ್ಲೇ ಪ್ರಯಾಣ ಮಾಡುತ್ತೇವೆ ಎಂದ ಪ್ರಯಾಣಿಕ

ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಮೆಟ್ರೋ ಪ್ರಯಾಣಿಕ, ಹಳದಿ‌ ಮಾರ್ಗದಲ್ಲಿ ರೈಲು ಸಂಖ್ಯೆ ಹೆಚ್ಚಾಗುವರೆಗೂ ನಾನು ಬಸ್​ನಲ್ಲೇ ಪ್ರಯಾಣ ಮಾಡುತ್ತೇವೆ ಎಂದಿದ್ದಾರೆ. ಒಂದು ಮೆಟ್ರೋ ಮಿಸ್ ಆದರೆ 25 ನಿಮಿಷ ಕಾಯಬೇಕು, ಇಲ್ಲ ಹೊರಗೆ ಹೋಗುತ್ತೇವೆ ಅಂದರೆ 50 ರೂ ದಂಡ ಪಾವತಿಸಬೇಕು. ಒಂದು ಕಡೆ ಹಳದಿ ಲೈನ್​ನಲ್ಲಿ ಮೆಟ್ರೋ ರೈಲು ಅಭಾವವಿದ್ದರೆ, ಇನ್ನೊಂದೆಡೆ ಸಮಯದ ಜೊತೆ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 2:05 pm, Wed, 13 August 25

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ