ಬೆಂಗಳೂರು ಪೊಲೀಸರ ಕಾರ್ಯಾಚರಣೆ: 75ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸರಗಳ್ಳತನ, ಮನೆಗಳ್ಳರು ಲಾಕ್

| Updated By: ಆಯೇಷಾ ಬಾನು

Updated on: Oct 31, 2023 | 1:54 PM

ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಗಣೇಶ್, ರಘುನನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಬೆಳಗ್ಗೆ ಸಮಯದಲ್ಲಿ ಯಾರೂ ಇಲ್ಲದ ಮನೆಯನ್ನ ಹುಡುಕಿ ರಾತ್ರಿ ವೇಳೆ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಮಲ್ಲೇಶ್ವರಂ ಠಾಣೆ ಪೊಲೀಸರು ಮನೆಗಳ್ಳತನ, ದರೋಡೆ, ಸರಗಳ್ಳತನ ಸೇರಿ 75ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 26 ಲಕ್ಷ ಬೆಲೆ ಬಾಳುವ 503 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬೆಂಗಳೂರು ಪೊಲೀಸರ ಕಾರ್ಯಾಚರಣೆ: 75ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸರಗಳ್ಳತನ, ಮನೆಗಳ್ಳರು ಲಾಕ್
ಕಳ್ಳರಿಂದ ವಶಕ್ಕೆ ಪಡೆದ ಚಿನ್ನಾಭರಣ
Follow us on

ಬೆಂಗಳೂರು, ಅ.31: ನಗರದಲ್ಲಿ ಸರಗಳ್ಳತನ, ಮನೆಗಳ್ಳತನ ಹೆಚ್ಚಾಗಿದೆ. ಪುಟ್ಟೇನಹಳ್ಳಿ ಹಾಗೂ ಮಲ್ಲೇಶ್ವರಂನಲ್ಲಿ ಪೊಲೀಸರು ಖದೀಮರನ್ನು ಬಂಧಿಸಿದ್ದಾರೆ. ಸರಗಳ್ಳತನ (Chain Snatching) ಹಾಗೂ ಮನೆಗಳ್ಳತನ (Home Theft) ಮಾಡುತ್ತಿದ್ದ ಜಬೀವುದ್ದೀನ್ ಅಲಿಯಾಸ್​ ತಬ್ರೇಜ್, ಮೆಹತಾಬ್​ನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನ, ದರೋಡೆ, ಸರಗಳ್ಳತನ ಸೇರಿ 75ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 26 ಲಕ್ಷ ಬೆಲೆ ಬಾಳುವ 503 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕುಖ್ಯಾತ ಮನೆಗಳ್ಳರ ಬಂಧನ

ಇನ್ನು ಮತ್ತೊಂದೆಡೆ ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಗಣೇಶ್, ರಘುನನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಬೆಳಗ್ಗೆ ಸಮಯದಲ್ಲಿ ಯಾರೂ ಇಲ್ಲದ ಮನೆಯನ್ನ ಹುಡುಕಿ ರಾತ್ರಿ ವೇಳೆ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು. ಬಂಧಿತರ ಬಳಿ ಇದ್ದ 45 ಲಕ್ಷ ಮೌಲ್ಯದ 735 ಗ್ರಾಂ ಚಿನ್ನಾಭರಣ, 454 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Chikodi: ಚಿಕ್ಕೋಡಿಯಲ್ಲಿ ಬಡ ರೈತರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ನಿರ್ಮಿಸಿಕೊಡಲು ಒತ್ತಾಯ

ಸ್ಕಾರ್ಪಿಯೊ ಕಾರ್ ವ್ಯಕ್ತಿಯ ಮೇಲೆ ಹತ್ತಿಸಿ ಭೀಕರ ಕೊಲೆ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಗಿದೆ. ಕೇಸ್ ವಾಪಸ್ ತೆಗೆದುಕೊಂಡಿಲ್ಲ ಅಂತಾ ಆರೋಪಿಗಳು ಕೃತ್ಯ ಎಸಗಿದ್ದಾರೆ. ಕೊಲೆ ನಡೆದ 11 ದಿನಗಳ ಬಳಿಕ ಸತ್ಯಾಂಶ ಹೊರಬಿದ್ದಿದೆ. ಜೀವ ಉಳಿಸಿಕೊಳ್ಳಲು ವ್ಯಕ್ತಿಯೊಬ್ಬ ಓಡಿದರೂ ಬಿಡದೇ ಕಾರು ಹತ್ತಿಸಲಾಗಿದೆ. ಥೇಟ್ ಸಿನಿಮೀಯ ಸ್ಟ್ರೈಲ್​ನಲ್ಲಿ ಕೊಲೆ ಮಾಡಿದ್ದಾರೆ. ಹತ್ಯೆಯ ಬಳಿಕ ಅದೊಂದು ಅಪಘಾತ ಎನ್ನುವಂತೆ ಬಿಂಬಿಸಿದ್ದಾರೆ.

ಮೃತ ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡ್ತಿದ್ದ. ಅಸ್ಗರ್ ಬಳಿ ಕಾರೊಂದನ್ನು ಖರೀದಿಸಿದ್ದ ಆರೋಪಿಗಳು ಮತ್ತು ಅಸ್ಗರ್ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು. ಅಮ್ರಿನ್ ಮತ್ತು ಅವನ ಸ್ನೇಹಿತರ ವಿರುದ್ಧ ಅಸ್ಗರ್ ಕೇಸ್ ಕೊಟ್ಟಿದ್ದ. ಕೇಸ್ ವಾಪಸ್ ತೆಗೆದುಕೊಂಡಿಲ್ಲ ಅಂತಾ ಅಮ್ರಿನ್ ಮತ್ತು ಅವರ ಸ್ನೇಹಿತರು ಅಸ್ಗರ್​ನ ಉಸಿರು ನಿಲ್ಲಿಸಿದ್ದಾರೆ. ಅಸ್ಗರ್​ನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾರೆ. ಪ್ರಕರಣ ಸಂಬಂಧ ಪುಲಕೇಶಿನಗರ ಪೊಲೀಸರು ಆರೋಪಿ ಅಮ್ರಿನ್ ಸೇರಿದಂತೆ ಇಬ್ಬರನ್ನ ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ