ಬೆಂಗಳೂರು: ಬೇರೆಯವರ ಜಾಗವನ್ನು ಆಸೆ ಪಟ್ಟಿದ್ದ ರೌಡಿಶೀಟರ್ನ (Rowdy Sheeter) ಬಂಧಿಸಲಾಗಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸರು ರೌಡಿಶೀಟರ್ ಪರಮೇಶ್ ಎಂಬುವವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪರಮೇಶ್ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ದೊಮ್ಮಸಂದ್ರದಲ್ಲಿ ಕೆ.ಎಂ.ಕೆ ಕಂಪನಿ ಸಿಬ್ಬಂದಿಗೆ ಧಮ್ಕಿ ಹಾಕಿದ್ದ. ರಸ್ತೆ ಕಾಮಗಾರಿಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದ. ಜೆಸಿಬಿ ಸಮೇತ ಬಂದು ಪರಮೇಶ್ ಮತ್ತು ಆತನ ತಂಡ ಬೆದರಿಕೆ ಹಾಕಿದ್ದರು. ನಮ್ಮ ಅನುಮತಿ ಇಲ್ಲದೆ ಇಲ್ಲಿ ಏಕೆ ಕೆಲಸ ಮಾಡುತ್ತಿದ್ದೀರಾ? ಕಾಮಗಾರಿ ನಿಲ್ಲಿಸಿ ಎಂದು ಸೈಟ್ ಇಂಜಿನಿಯರ್ಗೆ ಧಮ್ಕಿ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ.
ಪರಮೇಶ್ ಸೈಟ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ, ಕೆಲಸ ನಿಲ್ಲಿಸದಿದ್ದರೆ ಜೀವಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ ಕಾಮಗಾರಿಗೆ ಹಾಕಲಾಗಿದ್ದ ಜಲ್ಲಿಕಲ್ಲು ಮತ್ತು ರಸ್ತೆಯನ್ನು ನಾಶ ಮಾಡಿದ್ದಾರೆ. ಇಲ್ಲಿ ಕಾಮಗಾರಿ ಮಾಡಲು ಬಿಡಲ್ಲ ಎಂದು ಅವಾಜ್ ಹಾಕಿದ ಆರೋಪಿ, ತನಗೆ ಸಂಬಂಧವೇ ಇಲ್ಲದ ಜಾಗಕ್ಕೆ ಹೋಗಿ ದಾಂಧಲೆ ನಡೆಸಿದ್ದಾನೆ. ಪರಮೇಶ್ ಗೂಂಡಾವರ್ತನೆಯ ದೃಶ್ಯ ಟಿವಿ9ಗೆ ಲಭ್ಯವಾಗಿದ್ದು, ಈ ಘಟನೆ ಸೆ.3 ರಂದು ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.
ಕಾಡುಗೋಡಿ ಪೊಲೀಸರಿಗೆ ಜುನೈದ್ ರೆಹಮಾನ್ ಎಂಬುವವರು ದೂರು ನೀಡಿದ್ದು, ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಲವು ಕಡೆ ಕಿರಿಕ್ ಮಾಡುತ್ತಾನೆ. ಪರಮೇಶ್ ವಿರುದ್ಧ ಹೊಸಕೋಟೆ, ಕಾಡುಗೋಡಿ, ವೈಟ್ ಫೀಲ್ಡ್ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ. ಆರ್ಟಿಐನಲ್ಲಿ ಮಾಹಿತಿ ಪಡೆದುಕೊಂಡು ತನಗೆ ಸಂಬಂಧವೇ ಇಲ್ಲದ ಜಾಗಕ್ಕೆ ಬಂದು ನೀಡಿ ಧಮ್ಕಿ ಹಾಕುತ್ತಾನಂತೆ. ಜೊತೆಗೆ ಮಾಲೀಕರನ್ನ ಬೆದರಿಸಿ ಹಣ ಪಡೆಯುತ್ತಾನಂತೆ.
2015ರಲ್ಲಿ ಹೊಸಕೋಟೆ ಠಾಣೆಯಲ್ಲಿ ಪರಮೇಶ್ ವಿರುದ್ಧ ರೌಡಿಶೀಟರ್ ಓಪನ್ ಆಗಿತ್ತು. ಸೆ.3 ರಂದು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿ ಹೋಬಳಿಯ ಕೆ.ದೊಮ್ಮಸಂದ್ರದಲ್ಲಿ ಕೆ.ಎಂ.ಕೆ ಕಂಪನಿಗೆ ಸೇರಿದ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಸರ್ವೆ ನಂಬರ್ 62 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಜೆಸಿಬಿ ಸಮೇತ ಬಂದ ಆರೋಪಿ ಪರಮೇಶ್ ಮತ್ತು ಆತನ ತಂಡ ನಮ್ಮ ಅನುಮತಿ ಇಲ್ಲದೇ ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದೀರಾ? ಕಾಮಗಾರಿ ನಿಲ್ಲಿಸಿ ಎಂದು ಧಮ್ಕಿ ಹಾಕುತ್ತಾರೆ. ಅಲ್ಲದೇ ಸೈಟ್ ಇಂಜಿನಿಯರ್ನ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲಸ ನಿಲ್ಲಿಸಬೇಕು ಇಲ್ಲದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತ ಬೆದರಿಕೆ ಹಾಕಿರುವುದು ತಿಳಿದುಬಂದಿದೆ.
ಇದನ್ನೂ ಓದಿ
ಪಿಪಿಇ ಕಿಟ್ ಧರಿಸಿದ ಸಿಬ್ಬಂದಿಯನ್ನು ನೋಡಿ ದೆವ್ವ ಎಂದು ಹೆದರಿ ಕಿರುಚಾಡಿದ ರೋಗಿ; ಅಕ್ಕಪಕ್ಕದವರೆಲ್ಲಾ ಗಾಬರಿ
(Bengaluru Police arrested Rowdy Sheeter who threatened the engineer)