ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ಗುಂಡು ಹಾರಿಸಿ ಬಂಧಿಸಿದ ಬೆಂಗಳೂರು ಪೊಲೀಸರು

| Updated By: Skanda

Updated on: Aug 21, 2021 | 6:58 AM

ಸಂಜಯ್ ನಗರ ಪೊಲೀಸರ ಮೇಲೆ ರೌಡಿ ಶೀಟರ್​ ಅವಿನಾಶ್ ಎಂಬಾತ ಹಲ್ಲೆ ಮಾಡಿದ್ದ. ಪೊಲೀಸ್ ಸಿಬ್ಬಂದಿ ಸಂತೋಷ್ ಎಂಬುವವರ ಮೇಲೆ ಅಟ್ಯಾಕ್ ಮಾಡಿದ್ದ ಈತ ತನ್ನ ಗ್ಯಾಂಗ್​ ಜತೆ ಸೇರಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿ ಮೇಲೂ ಹಲ್ಲೆ ಎಸಗಿದ್ದ. ಈ ಕಾರಣದಿಂದಾಗಿ ಆತನ ಮೇಲೆ ಹಲ್ಲೆ ಮಾಡಿದ ಸಂಬಂಧ ಕೊಲೆ ಯತ್ನ ಕೇಸ್ ದಾಖಲಾಗಿತ್ತು.

ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ಗುಂಡು ಹಾರಿಸಿ ಬಂಧಿಸಿದ ಬೆಂಗಳೂರು ಪೊಲೀಸರು
ಬಂಧನಕ್ಕೊಳಗಾದ ರೌಡಿ ಶೀಟರ್​
Follow us on

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ನಿಯಮಾವಳಿಗಳನ್ನು ಸಡಿಲಿಸಿ ಅನ್​ಲಾಕ್​ ಘೋಷಿಸುತ್ತಿರುವಂತೆಯೇ ಬೆಂಗಳೂರಿನಲ್ಲಿ ಪುಂಡ ಪೋಕರಿಗಳ ಉಪಟಳವೂ ಹೆಚ್ಚಾದ್ದರಿಂದ ಕಳೆದ ಕೆಲ ತಿಂಗಳಿಂದ ಬೆಂಗಳೂರು ಪೊಲೀಸರು ಕಟ್ಟುನಿಟ್ಟಾದ ಕ್ರಮಗಳಿಗೆ ಮುಂದಾಗಿದ್ದು, ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇದೀಗ ರಾಜ್ಯ ರಾಜಧಾನಿಯಲ್ಲಿ ಪೊಲೀಸರ ಪಿಸ್ತೂಲು ಮತ್ತೆ ಸದ್ದು ಮಾಡಿದ್ದು, ರೌಡಿಶೀಟರ್ ಓರ್ವನ ಮೇಲೆ ಆರಕ್ಷಕರು ಫೈರಿಂಗ್ ಮಾಡಿದ್ದಾರೆ.

ಸಂಜಯ್ ನಗರ ಪೊಲೀಸರ ಮೇಲೆ ರೌಡಿ ಶೀಟರ್​ ಅವಿನಾಶ್ ಎಂಬಾತ ಹಲ್ಲೆ ಮಾಡಿದ್ದ. ಪೊಲೀಸ್ ಸಿಬ್ಬಂದಿ ಸಂತೋಷ್ ಎಂಬುವವರ ಮೇಲೆ ಅಟ್ಯಾಕ್ ಮಾಡಿದ್ದ ಈತ ತನ್ನ ಗ್ಯಾಂಗ್​ ಜತೆ ಸೇರಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿ ಮೇಲೂ ಹಲ್ಲೆ ಎಸಗಿದ್ದ. ಈ ಕಾರಣದಿಂದಾಗಿ ಆತನ ಮೇಲೆ ಹಲ್ಲೆ ಮಾಡಿದ ಸಂಬಂಧ ಕೊಲೆ ಯತ್ನ ಕೇಸ್ ದಾಖಲಾಗಿತ್ತು.

ಪ್ರಕರಣ ದಾಖಲಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಹೋಗಿದ್ದ ವೇಳೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸಂಜಯ್ ನಗರ ಇನ್ಸ್ಪೆಕ್ಟರ್ ಬಾಲ್ರಾಜ್ ಅವರಿಂದ ಅರೋಪಿಗೆ ಗುಂಡು ಹಾರಿಸಲಾಗಿದ್ದು, ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಇದನ್ನೂ ಓದಿ:
ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿಗಳು, ಪ್ರಶ್ನಿಸಿದ್ದಕ್ಕೆ ಸಬ್​​ಇನ್ಸ್​ಪೆಕ್ಟರ್​​ ಮೇಲೆ ಹಲ್ಲೆಗೆ ಯತ್ನ, ಮೂವರು ಎಸ್ಕೇಪ್ 

ಅಪರಾಧ ಸುದ್ದಿ: ಪೊಲೀಸರ ಸೋಗಿನಲ್ಲಿ ಸುಲಿಗೆ ತಲಘಟ್ಟಪುರದಲ್ಲಿ ಮೂವರ ಬಂಧನ, ಸವಣೂರಿನಲ್ಲಿ ರೌಡಿ ಶೀಟರ್ ಹತ್ಯೆ

(Bengaluru Police arrests notorious Rowdy sheeter by open fire)