ಕಿತ್ತಾಟಕ್ಕೆ ಬ್ರೇಕ್: ಟೋಯಿಂಗ್ ಶಾಕ್‌ ನಡುವೆ ವಾಹನ ಸವಾರರಿಗೆ ಗುಡ್​​ ನ್ಯೂಸ್

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರವಾಗಿ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅಂತೆಯೇ ಟೋಯಿಂಗ್ ವ್ಯವಸ್ಥೆಯನ್ನು ಮರು ಜಾರಿಗೊಳಿಸಲಿದ್ದೇವೆ ಎಂದು ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.ಇದರೊಂದಿಗೆ ಬೆಂಗಳೂರು ನಗರದಲ್ಲಿ ಸ್ಥಗಿತವಾಗಿದ್ದ ಟೋಯಿಂಗ್​ ಮತ್ತೆ ಆರಂಭವಾಗಲಿದೆ. ಇದರ ನಡುವೆ ವಾಹನ ಸವಾರರಿಗೆ ಒಂದು ಗುಡ್ ನ್ಯೂಸ್ ಕೊಡಲಾಗಿದೆ.

ಕಿತ್ತಾಟಕ್ಕೆ ಬ್ರೇಕ್: ಟೋಯಿಂಗ್ ಶಾಕ್‌ ನಡುವೆ ವಾಹನ ಸವಾರರಿಗೆ ಗುಡ್​​ ನ್ಯೂಸ್
Towing Vehicle

Updated on: May 31, 2025 | 11:39 AM

ಬೆಂಗಳೂರು, (ಮೇ 31): ಹಲವು ವರ್ಷಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಮತ್ತೆ ವಾಹನಗಳ ಟೋಯಿಂಗ್‌ ಆರಂಭವಾಗಲಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಟೋಯಿಂಗ್​ ಮತ್ತೆ ಪುನಾರಂಭವಾಗಲಿದೆ. ಈ ಬಗ್ಗೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅಧಿಕೃತವಾಗಿ ಹೇಳಿದ್ದಾರೆ. ಈ ಟೋಯಿಂಗ್ ಶಾಕ್‌ ನಡುವೆ ವಾಹನ ಸವಾರರಿಗೆ ಗುಡ್​​ ನ್ಯೂಸ್ ನಿಡಲಾಗಿದೆ. ಟೋಯಿಂಗ್ ಮಾಡಿದರೂ ವಾಹನ ಸವಾರರಿಗಿಲ್ಲ ಹೆಚ್ಚುವರಿ ಚಾರ್ಜ್ ಹಾಕದಿರಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.

ನೋ ಪಾರ್ಕಿಂಗ್ ಫೈನ್ ಬಿಟ್ಟು ಹೆಚ್ಚುವರಿ ಟೋಯಿಂಗ್ ಚಾರ್ಜ್ ಎಂದು 800 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೆಚ್ಚುವರಿ ಶುಲ್ಕದಿಂದಲೇ ಟೋಯಿಂಗ್ ಸಿಬ್ಬಂದಿ ಜತೆ ಗಲಾಟೆಗಳು ಆಗಿವೆ. ಈ ಸಂಬಂಧ ದೊಡ್ಡ ರಂಪಾಟಗಳೇ ನಡೆದಿವೆ.  ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಗಲಾಟೆಗೆ ಬ್ರೇಕ್ ಹಾಕುವ ಸಲುವಾಗಿ ಟೋಯಿಂಗ್ ಶುಲ್ಕ ವಿಧಿಸದಿರಲು ನಿರ್ಧರಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್​ ಆರಂಭ: ಗೃಹ ಸಚಿವ ಅಧಿಕೃತ ಘೋಷಣೆ

ಪೊಲೀಸರಿಂದಲೇ ಟೋಯಿಂಗ್ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ರ್ಈಗಾಗಲೇ ಹೇಳಿದ್ದಾರೆ. ಹೀಗಾಗಿ ಖಾಸಗಿಯವರಿಗೆ ಟೋಯಿಂಗ್ ಹೊಣೆ ನೀಡದಿರಲು ತೀರ್ಮಾನವಾಗಿದ್ದು, ಕೇವಲ ನೋ ಪಾರ್ಕಿಂಗ್​ ನಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಅದರ ದಂಡ ಮಾತ್ರ ಕಟ್ಟಬೇಕು. ಹೆಚ್ಚುವರಿ ಟೋಯಿಂಗ್ ಚಾರ್ಜ್ ಕಟ್ಟುವಂತಿಲ್ಲ.

ಇನ್ನು ಬೆಂಗಳೂರಿನ‌ ಎಲ್ಲಾ‌ ಕಡೆ ಟೋಯಿಂಗ್ ಮಾಡಲು ವಾಹನ‌ಗಳ ಕೊರತೆ ಎದುರಾಗಿದೆ. ಸದ್ಯ ಸರ್ಕಾರದ ಬಳಿ ಇರುವುದು ಕೇವಲ 3 ಟೋಯಿಂಗ್ ವಾಹನಗಳಷ್ಟೇ ಇವೆ. ಹೀಗಾಗಿ ಆ ಮೂರು ವಾಹನಗಳಲ್ಲೇ ಟೋಯಿಂಗ್ ಮರು ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ವಾಹನಗಳ ಕೊರತೆಯಿಂದಾಗಿ ಮೊದಲು ಟೋಯಿಂಗ್‌ಗೆ ಬಾಡಿಗೆ ವಾಹನಗಳನ್ನ ಬಳಸಲಾಗುತ್ತಿತ್ತು. ಈಗ ಪೊಲೀಸ್ ವಾಹನಗಳನ್ ಬಳಸಲಾಗುತ್ತದೆ. ಮತ್ತು ಪೊಲೀಸ್, ಗೃಹ ರಕ್ಷಕದಳದ ಸಿಬ್ಬಂದಿಗಳನ್ನ ಬಳಸಿ ಟೋಯಿಂಗ್‌ ನಿರ್ವಹಣೆ ಮಾಡಲಾಗುವುದು ಎಂದು ಗೃಹ ಸಚಿವರು ಈಗಾಗಲೇ ಹೇಳಿದ್ದಾರೆ.

ಬೆಂಗಳೂರಿನಲ್ಲಿ 1 ಕೋಟಿ 30 ಲಕ್ಷ ವಾಹನಗಳಿವೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಮಳೆ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹೆಬ್ಬಾಳ, ಸಿಲ್ಕ್ ಬೋರ್ಡ್ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒಂದು ವರದಿ ಸಿದ್ಧಪಡಿಸಿ ಒಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:30 am, Sat, 31 May 25