ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶಾಲೆಗಳಿಗೆ ಬಾಂಬ್ (Bomb) ಇಟ್ಟಿರುವುದಾಗಿ ಬೆದರಿಕೆ ಮೇಲ್ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಗೊಂದು ಅನುಮಾನ ಮೂಡಿದೆ. ವಿಪಿಎನ್ (VPN) ಬಳಸಿ ಮೇಲ್ ಮಾಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಪಿಎನ್ ಪ್ರೊವೈಡರ್ಗೆ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ. ಸಂಜೆಯೊಳಗೆ ಮಾಹಿತಿ ಪೊಲೀಸರ ಕೈಸೇರುವ ಸಾಧ್ಯತೆಯಿದೆ. ಇನ್ನು ಬೇರೆ ಬೇರೆ ದೇಶಗಳ ಐಡಿ ಬಳಸಿರುವ ಬಗ್ಗೆಯೂ ಶಂಕೆ ಮೂಡಿದೆ. ಸದ್ಯ ಪೊಲೀಸರು ಗೂಗಲ್ನಿಂದ ಕೆಲ ಮಾಹಿತಿ ಪಡೆದಿದ್ದಾರೆ.
ಬೆದರಿಕೆ ಇ-ಮೇಲ್ಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇ-ಮೇಲ್ ರಿಜಿಸ್ಟ್ರೇಷನ್ ಮಾಹಿತಿ, ಲಾಗಿನ್ IP ಮಾಹಿತಿ, ಇ-ಮೇಲ್ ಡ್ರಾಫ್ಟ್, ಇ-ಮೇಲ್ ಇನ್ ಬಾಕ್ಸ್ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸರ್ವರ್ ಪ್ರೊ ವೈಡರ್ ಬಳಿ ಪೊಲೀಸರು 11 ಪ್ರಶ್ನೆ ಕೇಳಿದ್ದು, ಗೂಗಲ್ ಪೊಲೀಸ್ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಮೇಲ್ ಐಪಿ (IP) ಅಡ್ರೆಸ್ ಕೊಟ್ಟಿದೆ. ದಕ್ಷಿಣ ಕೊರಿಯಾ, ಮೊರಾಕೋ, ಜೋರ್ಡನ್ ಐಪಿ ಅಡ್ರೆಸ್ಗಳನ್ನು ನೀಡಿರುವ ಬಗ್ಗೆ ಮಾಹಿತಿ ಇದೆ. ಬೇರೆ ಬೇರೆ ದೇಶಗಳ ಐಪಿ ಮೂಲಕ ಮೇಲ್ ಬಂದಿರೋದು ಪತ್ತೆಯಾಗಿದ್ದು, ಸೈಬರ್ ಕ್ರೈಮ್ ಪೊಲೀಸರ ನೆರವಿನಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಇ-ಮೇಲ್ ಆಧರಿಸಿ ಪೊಲೀಸರು ಶಾಲೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅನಾಮಿಕ ಹೆಸರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ಇನ್ನು ಮೊದಲಿಗೆ ನಗರದ ಆರು ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಅಂತ ಮೇಲ್ ಬಂದಿತ್ತು. ನಂತರ ಶಾಲೆಗಳ ಸಂಖ್ಯೆ ಒಟ್ಟು 17ಕ್ಕೆ ಏರಿಕೆಯಾಗಿದೆ. ಏಪ್ರಿಲ್ 9ಕ್ಕೆ ಹೊಸ ಮೂರು ಶಾಲೆಗಳಿಗೆ ಇ-ಮೇಲ್ ಮಾಡಿರೋದು ಪತ್ತೆಯಾಗಿತ್ತು.
ಇದನ್ನೂ ಓದಿ
ಏಕರೂಪದ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು -RSS ಮುಖಂಡ ಹನುಮಂತ ಮಳಲಿ
Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ನಾಳೆ ಪವರ್ ಕಟ್; ನಿರ್ವಹಣಾ ಕಾಮಗಾರಿ ಆರಂಭಿಸಿದ ಬೆಸ್ಕಾಂ
Published On - 10:09 am, Tue, 12 April 22