ಏಕರೂಪದ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು -RSS ಮುಖಂಡ ಹನುಮಂತ ಮಳಲಿ
ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ. ಸಿನಿಮಾ ನಟಿಯರಿಗೆ ಹಿಜಾಬ್ ತೊಡಿಸುವುದಕ್ಕೆ ಗಂಡಸ್ತನ ಇಲ್ವಾ? ನಟ ಶಾರುಖ್ ಮಗಳಿಗೆ ಹಿಜಾಬ್ ತೋಡಿಸಲು ಗಂಡಸ್ತನ ಇಲ್ವಾ? ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ಹೊರಗಿಡುತ್ತೀರಾ. ಹಿಜಾಬ್ನಿಂದ ಹಿಂದೂಗಳು ಎಚ್ಚರ ಆಗಿದ್ದಾರೆ ಎಂದು RSS ಮುಖಂಡ ಹನುಮಂತ ಮಳಲಿ ಪ್ರಶ್ನಿಸಿದ್ದಾರೆ.
ಯಾದಗಿರಿ: ರಾಜ್ಯದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಒಂದಲ್ಲಾ ಒಂದು ವಿವಾದದಿಂದ ಹಿಂದೂ ಮುಸ್ಲಿಂ ನಡುವೆ ಸಂಘರ್ಷಗಳು ನಡೆಯುತ್ತಿವೆ. ಇದರ ನಡುವೆ ಬಹುತೇಕ ಕಡೆ ರಾಮನವಮಿ, ರಂಜಾನ್ ಇಫ್ತಿಯಾರ್ ಕೂಟಗಳಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯ ಮೆರೆಯುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಕೆಲವರು ಮತ್ತೆ ಮತ್ತೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಂತಿದೆ. ಸದ್ಯ ಯಾದಗಿರಿಯಲ್ಲಿ RSS ಮುಖಂಡ ಹನುಮಂತ ಮಳಲಿ ಹಿಜಾಬ್ ಪ್ರಕರಣ ಸಂಬಂಧ ಆಕ್ರೋಶ ಹೊರ ಹಾಕಿದ್ದಾರೆ.
ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ. ಸಿನಿಮಾ ನಟಿಯರಿಗೆ ಹಿಜಾಬ್ ತೊಡಿಸುವುದಕ್ಕೆ ಗಂಡಸ್ತನ ಇಲ್ವಾ? ನಟ ಶಾರುಖ್ ಮಗಳಿಗೆ ಹಿಜಾಬ್ ತೋಡಿಸಲು ಗಂಡಸ್ತನ ಇಲ್ವಾ? ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ಹೊರಗಿಡುತ್ತೀರಾ. ಹಿಜಾಬ್ನಿಂದ ಹಿಂದೂಗಳು ಎಚ್ಚರ ಆಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಾಬ್ನಿಂದಾಗಿ ಹಿಂದೂಗಳು ಎಚ್ಚರ ಆಗಿದ್ದಾರೆ. ಹಿಜಾಬನ್ನು ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕಿಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಎಂದಿದ್ದಾರೆ. ಇನ್ನು ವ್ಯಾಪಾರಕ್ಕೆ ಮುಸಲ್ಮಾನರಿಗೆ ನಿರ್ಬಂಧ ವಿಚಾರವನ್ನು RSS ಮುಖಂಡ ಹನುಮಂತ ಮಳಲಿ ಸಮರ್ಥಿಸಿಕೊಂಡಿದ್ದಾರೆ.
ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ನೀವೆ(ಮುಸಲ್ಮಾನರೇ) ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಮೊದಲು ಹೇಳಿಕೊಟ್ಟಿದ್ದು ನೀವೆ, ಈಗ ಹಿಂದೂಗಳು ಮಾಡ್ತಿದ್ದಾರೆ.
ಈ ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಎರಡು ಮಕ್ಕಳು ಇದ್ದವರು ಮೂರು ಮಕ್ಕಳನ್ನು ಮಾಡಿ. ಮೂರು ಇದ್ದವರು ನಾಲ್ಕು ಮಕ್ಕಳನ್ನು ಮಾಡಿ. ಮಕ್ಕಳಲು ಹೆರಲು ಆಗದಿರುವವರು ಮತಾಂತರ ಮಾಡ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ಮುಂದೆ ನಡೆಯಲ್ಲ. ನಮ್ಮ ಹುಡುಗರು ಮನಸ್ಸು ಮಾಡಿದ್ರೆ, ನಮ್ಮ ಹುಡುಗರಿಗೆ ಒಂದೇ ವಾರಕ್ಕೆ ಸಾಕಾಗಲ್ಲ. ಮದುವೆಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ ಎಂದು ಸೈದಾಪುರದಲ್ಲಿ RSS ಮುಖಂಡ ಹಣಮಂತ ಮಳಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಹೊಗೆಯೇಳುತ್ತಿದೆ ಎಂದು ಭಯಗೊಂಡು ಇಳಿದ ಪ್ರಯಾಣಿಕರಿಗೆ ಮತ್ತೊಂದು ಟ್ರೇನ್ ಡಿಕ್ಕಿ; ಐವರ ದುರ್ಮರಣ