Bengaluru Power Cut: ಇಂದು ಸೋಮವಾರವೂ ಬೆಂಗಳೂರಿನಲ್ಲಿ ಪವರ್ ಕಟ್; ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ ಗೊತ್ತಾ?
Power cut in Bangalore: ಇಂದು ಸೋಮವಾರವೂ ಬೆಂಗಳೂರಿನ ಕೆಲವು ಏರಿಯಾಗಳು ಪವರ್ ಕಟ್ ಎದುರಿಸಲಿದೆ. ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ ಎಂಬ ಮಾಹಿತಿ ಈ ಕೆಳಗಿನಂತಿದೆ ತಿಳಿಯಿರಿ.
ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಇಂದು ಸೋಮವಾರ ನವೆಂಬರ್ 22 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತಿಳಿಸಿದೆ. ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿ ನಿರ್ವಹಣೆ ಮತ್ತು ಇತರ ಕೆಲಸಗಳಿಂದ ನಿನ್ನೆ ಭಾನುವಾರ ವಿದ್ಯುತ್ ವ್ಯತ್ಯಯ (Power Cut) ಉಂಟಾಗಿತ್ತು. ಏತನ್ಮಧ್ಯೆ, ಇಂದು ಸೋಮವಾರವೂ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ವರ್ಕ್ ಫ್ರಂ ಹೋಮ್ನಲ್ಲಿರುವರಿಗೆ (Work From Home) ವಿದ್ಯುತ್ ಕಡಿತ ದೊಡ್ಡ ತಲೆನೋವಾಗಿರುವುದರಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ.
ನವೆಂಬರ್ 22ರಂದು ವಿದ್ಯುತ್ ಕಡಿತ ಬೆಂಗಳೂರಿನ ದಕ್ಷಿಣ ವಯಲದಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 5:30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಡಿಯೂರು, ಸೋಮೇಶ್ವರ ನಗರ, ಗೋಕುಲಂ ಅಪಾರ್ಟ್ಮೆಂಟ್ಗಳು ಪವರ್ ಕಟ್ ಎದುರಿಸುವ ಸಾಧ್ಯತೆಗಳಿವೆ.
ಇನ್ನು, ಪಶ್ಚಿಮ ವಲಯದ ಪ್ರದೇಶಗಳು ಸಹ ಬೆಳಿಗ್ಗೆ 10:30ರ ನಂತರ ಸಂಜೆ 5:30ರವರೆಗೆ ವಿದ್ಯುತ್ ಕಡಿತ ಎದುರಿಸಬೇಕಾಗುತ್ತದೆ. ವಿಜಯನಗರ, ಹೊಸಹಳ್ಳಿ, ಹಂಪಿನಗರ, ಕಯಾನ್ ಲೇಔಟ್, ಸೆಂಟ್ರಲ್ ಎಕ್ಸೀಸ್, ಎಮ್ಸಿ ಲೇಔಟ್, ಸಿಇಎಸ್ ಲೇಔಟ್, ಬಾಪೂಜಿ ಲೇಔಟ್, ಜಿಕೆಡಬ್ಲ್ಯೂ ಲೇಔಟ್, ಸೆಕ್ರೆಟರಿಯೇಟ್ ಲೇಔಟ್, ಮಾರೇನ ಹಳ್ಳಿ, ವಿಡಿಯಾ ಲೇಔಟ್, ಅತ್ತಿಗುಪ್ಪೆ, ಬಸವೇಶ್ವರ ಲೇಔಟ್, ಬಿಎಚ್ಇಎಲ್, ಕೆನರಾ ಬ್ಯಾಂಕ್ ಕಾಲೊನಿ, ಅನುಭವ ನಗರ, ಮಾರುತಿ ನಗರ, ನಾಗರಭಾವಿ ಮುಖ್ಯರಸ್ತೆ, ಮೈಕೊ ಲೇಔಟ್, ಬಿಸಿಸಿ ಲೇಔಟ್, ಪ್ರಶಾಂತ ನಗರ, ಗಂಗೊಡನ ಹಳ್ಳಿ, ಸಂಪಿಗೆ ನಗರ, ಸಂಪಿಗೆ ನಗರ ಹೆಚ್ವಿಆರ್ ಲೇಔಟ್, ಟೀಚರ್ಸ್ ಲೇಔಟ್, ಪಂಚಶೀಲ ನಗರಗಳು ಇಂದು ವಿದ್ಯುತ್ ಕಡಿತ ಎದುರಿಸುವ ಸಾಧ್ಯತೆಗಳಿವೆ.
ಇನ್ನು, ಉತ್ತರ ವಲಯದಲ್ಲಿ ಜಿಕೆವಿಕೆ ಲೇಔಟ್, ಯಶೋದಾನಗರ, ವೆಂಕಟ್ ವಿಂಗ್ ರಾಯಲ್, ಬಾಗಳೂರು ಮುಖ್ಯರಸ್ತೆ, ದ್ವಾರಕಾ ನಗರ, ಬಿಇಎಲ್ ಸೌತ್ ಕಾಲೊನಿ, ಕಲಾನಗರ, ಕಮ್ಮಗೊಂಡನಹಳ್ಳಿ, ಪಾರ್ವತಮ್ಮ ಲೇಔಟ್, ಕೆನರಾ ಬ್ಯಾಂಕ್ ಲೇಔಟ್ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಪವರ್ ಕಟ್ ಇರುತ್ತದೆ.
ಇನ್ನು ಪೂರ್ವ ವಲಯದಲ್ಲಿ ಅಮ್ಮ ಭಗವಾನ್ ಟೆಂಪಲ್, ಡಬಲ್ ರೋಡ್, ದೊಮ್ಮಲೂರು ಸುತ್ತಲಿನ ಪ್ರದೇಶ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಬಿಬಿಎಂಪಿ ಕಚೇರಿ ಮತ್ತು ಎನ್ಆರ್ಐ ಲೇಔಟ್ ಸೇರಿದಂತೆ ಕೆಲವು ಏರಿಯಾಗಳಲ್ಲಿ ಬೆಳಿಗ್ಗೆ 10ರಿಂದ 4 ವರೆಗೆ ವಿದ್ಯುತ್ ಕಡಿತ ಉಂಟಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ:
Bengaluru Power Cut: ಬೆಂಗಳೂರಿನಲ್ಲಿ ನವೆಂಬರ್ 19 ರಿಂದ 21 ರವರೆಗೆ ಪವರ್ ಕಟ್; ಇಲ್ಲಿದೆ ಫುಲ್ ಡಿಟೇಲ್ಸ್
Published On - 10:38 am, Mon, 22 November 21