ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಅಬ್ಬರ (Bengaluru Rains) ಪೂರ್ತಿಯಾಗಿ ಕಡಿಮೆಯಾಗಿಲ್ಲ. ಹೀಗಾಗಿ, ವಿದ್ಯುತ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಗಳು ನಡೆಯುವ ಕಾರಣದಿಂದ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಇಂದಿನಿಂದ (ಸೆ. 21) ಸೆ. 23ರವರೆಗೆ ವಿದ್ಯುತ್ ಪೂರೈಕೆಯಲ್ಲಿ (Bangalore Power Cut) ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ಇಂದು ಜಯನಗರ, ಆರ್ಆರ್ ನಗರದ ಸುತ್ತಮುತ್ತ ಪವರ್ ಕಟ್ ಇರಲಿದೆ.
ಇಂದು ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ಸರ್ಕಲ್, ವಿದ್ಯಾಪೀಠ ಸರ್ಕಲ್, ಪ್ರಮೋದ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಅವಲಹಳ್ಳಿ, ಬಿಎಸ್ ಕೆ 3ನೇ ಹಂತ, ಜಿ ಎನ್ ಕೆರೆ, ಬುಕ್ಕಸಾಗರ, ನಾಗತಿಹಳ್ಳಿ, ಮೆಣಸಿನೋಡು, ಶಿವನಗರ, ಜೆಎಸ್ ಪುರ, ಸಿ ಬಿ ಗೆರೆ ಸುತ್ತಮುತ್ತಲಿನ ಪ್ರದೇಶಗಳು, ಸೋಮೇನಹಳ್ಳಿ, ಶ್ರೀರಾಂಪುರ, ನೇರಲಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರ್ಗ, ಬೆಳಗೂರು, ಕೋಡಿಹಳ್ಳಿ, ಕಲ್ಕೆರೆ, ತೊಣಚೇನಹಳ್ಳಿ, ಗವಿರಂಗಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಚಿಲ್ಲಹಳ್ಳಿ, ವಿ ಕೆ ಗುಡ್ಡ, ಹೂವಿನಹೊಳೆಹರಿಯಬ್ಬೆ, ಶ್ರವಣಗೆರೆ, ದೇವಾಪುರ, ಅರಳೀಕೆರೆ, ಹೊವ್ವರಚಿಲ್ಲಹಳ್ಳಿ, ಯಲಗೊಂಡನಹಳ್ಳಿ, ಅಬ್ಬಿನ್ನಹೊಳೆ, ಬೇತೂರು, ಬೇತೂರು ಪಾಳ್ಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಂಜೆಯವರೆಗೆ ಪವರ್ ಕಟ್
ಸೆಪ್ಟಂಬರ್ 23ರಂದು ಕೆಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ 5 ಗಂಟೆಯವರೆಗೆ ಪವರ್ ಕಟ್ ಇರಲಿದೆ. ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, KAIDB 1ನೇ ಹಂತ, KAIDB 2ನೇ ಹಂತ, ISRO ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.