ಅಶ್ಲೀಲ ವಿಡಿಯೋ ಕಳಿಸಿ ಹಿರಿಯ ಪೊಲೀಸ್ ಅಧಿಕಾರಿಗೇ ಬ್ಲ್ಯಾಕ್ ಮೇಲ್! ಆಮೇಲೇನಾಯ್ತು?

ಕಿಡಿಗೇಡಿಗಳು ಮುಂದೆ ಎಸಿಪಿ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಎಸಿಪಿ ಕುತೂಹಲದಿಂದ ವಿಡಿಯೋ ಕರೆ ಸ್ವೀಕರಿಸಿದಾಗ ಯುವತಿಯೊಬ್ಬಳು ಮಾತನಾಡಿದ್ದಳು. ಮತ್ತು ಆ ಯುವತಿ ನಗ್ನಳಾಗಿ ತನ್ನ ದೇಹ ಪ್ರದರ್ಶಿಸಿದ್ದಳು.

ಅಶ್ಲೀಲ ವಿಡಿಯೋ ಕಳಿಸಿ ಹಿರಿಯ ಪೊಲೀಸ್ ಅಧಿಕಾರಿಗೇ ಬ್ಲ್ಯಾಕ್ ಮೇಲ್! ಆಮೇಲೇನಾಯ್ತು?
ಅಶ್ಲೀಲ ವಿಡಿಯೋ ಕಳಿಸಿ ಹಿರಿಯ ಪೊಲೀಸ್ ಅಧಿಕಾರಿಗೇ ಬ್ಲ್ಯಾಕ್ ಮೇಲ್! ಆಮೇಲೇನಾಯ್ತು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 20, 2022 | 9:11 PM

ಬೆಂಗಳೂರು: ಅಶ್ಲೀಲ ವಿಡಿಯೋ ಕಳಿಸಿ ಪೊಲೀಸ್ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ವಂಚಕರಿಂದ ವಿಐಪಿ ಸೆಕ್ಯೂರಿಟಿ ಎಸಿಪಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಇದಾಗಿದೆ. ವಂಚಕರು ಮೊದಮೊದಲು ವಾಟ್ಸಪ್ ಮೂಲಕ ಹಾಯ್, ಹಲೋ ಅಂತ ಮೇಸೆಜ್ ಕಳಿಸಿದ್ದರು. ವಂಚಕರ ಆ ಮೊಬೈಲ್‌ ಸಂಖ್ಯೆಯಿದ್ದ ವಾಟ್ಸ್ಯಾಪ್‌ ಡಿಸ್​ಪ್ಲೇ ಇಮೇಜ್​ಗೆ ಹುಡುಗಿಯ ಫೋಟೋ ಹಾಕಲಾಗಿತ್ತು. ಡಿಪಿ ಪೋಟೋ ಎಸಿಪಿಗೆ ಸಂಬಂಧಿಯಾಗಿರುವ ಯುವತಿಯೊಬ್ಬರ ಮುಖಚರ್ಯೆಗೆ ಹೋಲುವಂತಿತ್ತು. ಹೀಗಾಗಿ ಯಾವುದೇ ಅನುಮಾನಪಡದೆ ಸಂತ್ರಸ್ತ ಎಸಿಪಿ, ವಾಟ್ಸ್ಯಾಪ್‌ ಸಂದೇಶಕ್ಕೆ ಪ್ರತಿಕ್ರಿಯಿಸಿಬಿಟ್ಟಿದ್ದಾರೆ.

‘ಹೊಸ ಸಿಮ್‌ ಕಾರ್ಡ್‌ ತೆಗೆದುಕೊಂಡಿದ್ದೀರಾ?’ ಎಂದು ತಮ್ಮ ಸಂಬಂಧಿ ಯುವತಿಯನ್ನು ಎಸಿಪಿ ಪ್ರಶ್ನಿಸಿದ್ದಾರೆ. ಅದಾದ ಮೆಲೆ ವಂಚಕರು ಎಸಿಪಿಯ ಮೊಬೈಲ್‌ಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಮುಂದೆ ಎಸಿಪಿ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಎಸಿಪಿ ಕುತೂಹಲದಿಂದ ವಿಡಿಯೋ ಕರೆ ಸ್ವೀಕರಿಸಿದಾಗ ಯುವತಿಯೊಬ್ಬಳು ಮಾತನಾಡಿದ್ದಳು. ಆ ಯುವತಿ ನಗ್ನಳಾಗಿ ತನ್ನ ದೇಹ ಪ್ರದರ್ಶಿಸಿದ್ದಳು. ಇದರಿಂದ ಗಾಬರಿಯಾದ ಎಸಿಪಿ ಕಾಲ್ ಕಟ್ ಮಾಡಿದ್ದಾರೆ.

ಇಷ್ಟೆಲ್ಲಾ ಆದ ಮೆಲೆ, ನಗ್ನ ಯುವತಿಯ ಜತೆ ವಿಡಿಯೋ ಕರೆಯಲ್ಲಿ ಸಂಭಾಷಣೆ ನಡೆಸಿರುವ ದೃಶ್ಯಾವಳಿಯನ್ನು ಚಿತ್ರೀಕರಿಸಿಕೊಂಡಿದ್ದೇವೆ. ಆ ವಿಡಿಯೋ ಫೇಸ್‌ಬುಕ್‌, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತೇವೆ ಎಂದು ಕಿರಾತಕರು ಬೆದರಿಕೆ ಹಾಕಿದ್ದಾರೆ. ಬಳಿಕ, ತಾವು ಪೊಲೀಸ್ ಎಂದೂ ಹೇಳಿಕೊಂಡು ಬೆದರಿಕೆ ಹಾಕಿದ್ದರು ಅದೇ ಕಿಡಿಗೇಡಿಗಳು! ಸೈಬರ್ ಖದೀಮರ ಕಿರುಕುಳ ತಾಳಲಾರದೇ ಕೊನೆಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ಬಾಧಿತ ಎಸಿಪಿ ದೂರು ನೀಡಿದ್ದಾರೆ. ಸೆಂಟ್ರಲ್ ಸಿಇಎನ್ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು:

ನೆಲಮಂಗಲ: ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಹಿಂಬದಿಯಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟಿದ್ದಾರೆ. ನಾಗಸಂದ್ರ ಮೆಟ್ರೋ ಸಮೀಪದ ನವಯುಗ ಟೋಲ್ ಬಳಿ‌ ಘಟನೆ ನಡೆದಿದೆ. ಚಿಕ್ಕಬಾಣವರ ನಿವಾಸಿ ಚೇತನ್ ಗೌಡ (25) ಮೃತ ದುರ್ದೈವಿ.

ಬೈಕ್ ಗಳ ನಡುವೆ ಡಿಕ್ಕಿಯಾದ ಬಳಿಕ ರಸ್ತೆ ಬಲ ಬದಿಗೆ ಬಿದ್ದ ಕಾರಣ ಸವಾರನ ಮೇಲೆ ಬಸ್ ಹರಿದಿದೆ. ಬಸ್ ಮಂಗಳೂರಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿತ್ತು. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:56 pm, Tue, 20 September 22