ಬೊಲೆರೊ ಪಿಕ್ ಅಪ್ ಗೂಡ್ಸ್ ಕಾರಿಗೆ ಡಿಕ್ಕಿ, ಕಾರು ಚಾಲಕ ಸಾವು
ಜಮಖಂಡಿ ತಾಲ್ಲೂಕಿನ ಅಡಿಹುಡಿ ಗ್ರಾಮದ ಬಳಿ ಬೊಲೆರೊ ಪಿಕ್ ಅಪ್ ಗೂಡ್ಸ್ ಡಿಕ್ಕಿಯಾಗಿ ಕಾರು ಚಾಲಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸುಧೀರ್ ಸಿಂಧೆ(29) ಎಂದು ಗುರುತಿಸಲಾಗಿದೆ.
ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಅಡಿಹುಡಿ ಗ್ರಾಮದ ಬಳಿ ಬೊಲೆರೊ ಪಿಕ್ ಅಪ್ ಗೂಡ್ಸ್ ಡಿಕ್ಕಿಯಾಗಿ ಕಾರು ಚಾಲಕ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸುಧೀರ್ ಸಿಂಧೆ(29) ಎಂದು ಗುರುತಿಸಲಾಗಿದೆ. ಚಿಕ್ಕಲಕಿ ಗ್ರಾಮದಿಂದ ಅಥಣಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಾವಳಗಿ ಪೊಲೀಸರ ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.
ಕ್ಯಾಂಟರ್ಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು
ತುಮಕೂರು: ಕೊರಟಗೆರೆ ತಾಲೂಕಿನ ತಣ್ಣೆನಹಳ್ಳಿ ಬಳಿ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ರಾಜಣ್ಣ(42) ಎಂದು ಗುರುತಿಸಲಾಗಿದೆ. ಈ ಪ್ರಕರಣವು ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿ, ಹೊಸೂರು ಪೂಲ್ ಬಳಿ ಶವ ಪತ್ತೆ
ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದ ಪತ್ನಿ ಬಂಧನ ಮಾಡಲಾಗಿದೆ. ಕಟಕೋಳ ಠಾಣೆ ಪೊಲೀಸರಿಂದ ಪತ್ನಿ, ಆಕೆಯ ಪ್ರಿಯಕರ ಬಂಧನ ಮಾಡಲಾಗಿದೆ. ಹೊಸೂರು ಪೂಲ್ ಬಳಿ ಪಾಂಡಪ್ಪ ಜಟಕನ್ನವರ (35) ಶವ ಪತ್ತೆಯಾಗಿತ್ತು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಕಟಕೋಳ ಪೊಲೀಸರು. ಇತನ ಪತ್ನಿ ಲಕ್ಷ್ಮೀ ಕೃಷಿ ಉಪಕರಣದಿಂದ ಪಾಂಡಪ್ಪ ಜಟಕನ್ನವರ್‌ನ್ನ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರಿಯಕರ ರಮೇಶ್ ಬಡಿಗೇರ ಎಂಬಾತನ ಜೊತೆಗೂಡಿ ಕೃತ್ಯ ಮಾಡಿದ್ದಾಳೆ. ಬಳಿಕ ಪಾಂಡಪ್ಪನ ಬೈಕ್ ಮೇಲೆ ಶವ ಹೊತ್ತೊಯ್ದು ಬಿಸಾಕಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಹಗ್ಗದಿಂದ ಕಟ್ಟಿ ಕಿರುಸೇತುವೆ ಬಳಿ ಬೈಕ್ ಬಿಸಾಕಿ ಪರಾರಿಯಾಗಿದ್ದಾರೆ. ಕೊಲೆ ಮಾಡಿ ಅಪಘಾತವೆಂಬ ರೀತಿ ಬಿಂಬಿಸಲು ಯತ್ನ ಮಾಡಿದ್ದಾರೆ.
ತನಗೆ ಏನೂ ಗೊತ್ತೆ ಇಲ್ಲದ ರೀತಿ ಮನೆಗೆ ಹೋಗಿದ್ದ ಪತ್ನಿ ಲಕ್ಷ್ಮೀ. ಮಾರನೇ ದಿನ ಗಂಡ ಮನೆಗೆ ಮರಳಿಲ್ಲ ಎಂದು ನಾಟಕವಾಡಿದ್ದಾಳೆನ. ಪತ್ನಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಪ್ರಕರಣ ಸಂಬಂಧ ರಮೇಶ್ ಬಡಿಗೇರ (36), ಲಕ್ಷ್ಮಿ ಜಟಕನ್ನವರ ಬಂಧನವಾಗಿದೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಸೆರೆಯಾಯ್ತು ಭೀಕರ ಅಪಘಾತ ದೃಶ್ಯ, ಅತೀ ವೇಗವಾಗಿ ಬಂದು ಯುವತಿಗೆ ಡಿಕ್ಕಿ ಹೊಡೆದ ಕಾರ್
ಬೆಂಗಳೂರಿನಲ್ಲಿ ಸೆರೆಯಾಯ್ತು ಭೀಕರ ಅಪಘಾತ ದೃಶ್ಯ. ಯುವತಿ ರಸ್ತೆ ದಾಟುವಾಗ ಅತೀ ವೇಗದ ಬಂದು ಕಾರ್ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿಯಿಂದ ಡಿವೈಡರ್ ಮೇಲೆ ಹಾರಿ ಬಿದ್ದ ಯುವತಿ. ಕಾರ್ ಡಿಕ್ಕಿ ರಭಸಕ್ಕೆ ರಸ್ತೆ ದಾಟುತ್ತಿದ್ದ ಯುವತಿಗೆ ಗಾಯವಾಗಿದೆ. ಗಾಯಗೊಂಡ ಯುವತಿಯನ್ನು ಅಶ್ವಿನಿ (18) ಎಂದು ಹೇಳಲಾಗಿದೆ. ಈ ಘಟನೆಯು ಬಳ್ಳಾರಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆಯಾಗಿದೆ. ಗಾಯಗೊಂಡ ಅಶ್ವಿನಿಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರ್.ಟಿ.ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:15 am, Wed, 21 September 22