Bengaluru Power Cut: ಬೆಂಗಳೂರಿನ ಜಯನಗರ, ಜೆಪಿ ನಗರ, ಹೆಚ್​ಎಸ್​ಆರ್​ ಲೇಔಟ್ ಸೇರಿ ಹಲವೆಡೆ ಇಂದು ಪವರ್ ಕಟ್

| Updated By: ಸುಷ್ಮಾ ಚಕ್ರೆ

Updated on: Oct 15, 2022 | 9:33 AM

ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್, ಸುಬ್ರಹ್ಮಣ್ಯಪುರ, ಸೋಮನಹಳ್ಳಿ, ಹೂಡಿ, ಶಿವಾಜಿನಗರ ವಿಭಾಗ, ಎಸ್‌ಆರ್‌ಎಸ್ ಪೀಣ್ಯ, ಯರ್ರಂಡನಹಳ್ಳಿ, ಬಿಡದಿ ಸೇರಿ ಹಲವೆಡೆ ಪವರ್ ಕಟ್ ಇರಲಿದೆ.

Bengaluru Power Cut: ಬೆಂಗಳೂರಿನ ಜಯನಗರ, ಜೆಪಿ ನಗರ, ಹೆಚ್​ಎಸ್​ಆರ್​ ಲೇಔಟ್ ಸೇರಿ ಹಲವೆಡೆ ಇಂದು ಪವರ್ ಕಟ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರಿನ (Bangalore Power Cut) ಕೆಲವು ಭಾಗಗಳಲ್ಲಿ ಇಂದು ಪವರ್ ಕಟ್ ಇರಲಿದೆ. ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಎರಡೂ ನಗರದಾದ್ಯಂತ ಕೆಲವು ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೆ ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಮಾಹಿತಿ ನೀಡಿದೆ.

ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ. ಇಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್, ಸುಬ್ರಹ್ಮಣ್ಯಪುರ, ಸೋಮನಹಳ್ಳಿ, ಹೂಡಿ, ಶಿವಾಜಿನಗರ ವಿಭಾಗ, ಎಸ್‌ಆರ್‌ಎಸ್ ಪೀಣ್ಯ, ಯರ್ರಂಡನಹಳ್ಳಿ, ಬಿಡದಿಯಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bengaluru Power Cut: ಈ ವೀಕೆಂಡ್​ನಲ್ಲಿ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್

KIADB 1ನೇ ಹಂತದ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ ಫೇಸ್-1, ನೀಲಾದ್ರಿ ರಸ್ತೆ, ಹೆಬ್ಬಗೋಡಿ, ವೀರಸಂದ್ರ, ಗೋಲಹಳ್ಳಿ, ಹುಲಿಮಂಗಲ ಸ್ಟೇಷನ್ ಫೀಡಿಂಗ್ ಏರಿಯಾಗಳು, ಶಾಕಾಂಬರಿ ನಗರ, ಪೈಪ್ ಲೈನ್ ರಸ್ತೆ, ರಾಘವೇಂದ್ರ ಸ್ವಾಮಿ ನಗರ 1ನೇ ಹಂತ, ಜೆಪಿ ನಗರ 14ನೇ ಕ್ರಾಸ್, ಸಲಾರ್ಪುರಿಯ ಆಪ್ಟ್, ನಾಗಾರ್ಜುನ ಆಪ್ಟ್, ಪುಟ್ಟೇನಹಳ್ಳಿ ಪ್ರದೇಶ, ಜಯನಗರ 8ನೇ ಬ್ಲಾಕ್, ಜಯನಗರ 5ನೇ ಬ್ಲಾಕ್, ಜಯನಗರ 7ನೇ ಬ್ಲಾಕ್, ಐಟಿ ಲೇಔಟ್, ಎಸ್​ಬಿಐ ಕಾಲೋನಿ, ಆರ್ ವಿ ಡೆಂಟಲ್ ಕಾಲೇಜು ಸುತ್ತಮುತ್ತ, ಎಲ್ ಐ ಸಿ ಕಾಲೋನಿ , ವೆಂಕಟಾದ್ರಿ ಲೇಔಟ್, ಜೆ ಪಿ ನಗರ 5ನೇ ಹಂತ, ಸಾಯಿ ನರ್ಸರಿ ರಸ್ತೆ, ಜೆಪಿ ನಗರ 6ನೇ ಹಂತ, ಆದರ್ಶ ರೆಸಿಡೆನ್ಸಿ ಆಪ್ಟ್, ಆದರ್ಶ ಗಾರ್ಡನ್, ಸಿಂಧೂರ ಕನ್ವೆನ್ಶನ್ ಹಾಲ್ ಮತ್ತು ಸುತ್ತಮುತ್ತ, ಜೆಪಿ ನಗರ ಮೆಟ್ರೋ ಇಂದಿರಾ ಆಸ್ಪತ್ರೆ, ನಟ ಸುದೀಪ್ ಮನೆ ಸುತ್ತಮುತ್ತ, ನಂದಿನಿ ಹೋಟೆಲ್ ಸಿಗ್ನಲ್ ಜಂಕ್ಷನ್, ಗ್ರೀನ್ ಸಿಟಿ ಆಸ್ಪತ್ರೆ, ಸೆಂಟ್ರಲ್ ಮಾಲ್, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ರಸ್ತೆ, ಡಿಎಸ್ ಪಾಳ್ಯ, ವೈಷ್ಣವಿ ಟೆರೇಸ್ ಆಪ್ಟ್, ಮಾರೇನಹಳ್ಳಿ, ಮಂಜುನಾಥ್ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ, ಬನ್ನೇರುಘಟ್ಟ ರಸ್ತೆ, ಡಾಲರ್ಸ್ ಲೇಔಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್, ಬನ್ನೇರುಘಟ್ಟ ರಸ್ತೆ, ರೋಸ್ ಗಾರ್ಡನ್, ಸಾರಕ್ಕಿ ಗಾರ್ಡನ್, ಜೆ ಪಿ ನಗರ 1 ನೇ ಹಂತ, ಸಾರಕ್ಕಿ ಗೇಟ್, ಸಂಗಮ್ ಸರ್ಕಲ್ 47 ನೇ ಕ್ರಾಸ್, ಮಂತ್ರಿ ಅಪಾರ್ಟ್‌ಮೆಂಟ್, ತಲಘಟ್ಟಪುರ, ರಘುವನಗಲ್ಲಿ, ನಗರ, ಬಾಲಾಜಿ ಲೇಔಟ್, ರಾಯಲ್ ಫಾರ್ಮ್, ಪ್ರೆಸ್ಟೀಜ್ ಶಾಂತಿನಿಕೇಯನ್ ಮಸ್, ರಿಲಯನ್ಸ್ ಕಮ್ಯುನಿಕೇಷನ್, ಮ್ಯಾಗ್ನಾ ವೇರ್‌ಹೌಸ್, ವೈಟ್‌ಫೀಲ್ಡ್ ಏರಿಯಾ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಬೈಯಪ್ಪನ ಹಳ್ಳಿ, ನಾಗೇನ ಪಾಳ್ಯ, ಲಿಂಗರಾಜ್ ಪುರಂ, ಹಲಸೂರು, ಜೀವನ ಹಳ್ಳಿ, ಆರ್ ಕೆ ರಸ್ತೆ, ಕೋಲ್ಸ್ ರಸ್ತೆ ಟ್ಯಾನರಿ ರಸ್ತೆ, ಐಟಿಸಿ, ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ, ಬಿ ವಿ ಕೆ ಅಯ್ಯಂಗಾರ್ ರಸ್ತೆ, ಆರ್ ಟಿ ಸ್ಟ್ರೀಟ್, ಸಿ ಟಿ ಸ್ಟ್ರೀಟ್, ಚಿಕ್ಕಪೇಟೆ, ಟೌನ್ ಹಾಲ್, ಜೆ ಸಿ ರಸ್ತೆ, ಮಿನರ್ವ ವೃತ್ತ, ಕೆ ಜಿ ರಸ್ತೆ, ಗಾಂಧಿ ನಗರ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋರಿ ಪಾಳ್ಯ, ಬಿನ್ನಿ ಪೆಟ್, ನ್ಯೂ ತರಗು ಪೇಟೆ, ಚಾಮರಾಜಪೇಟೆ, ಆಮ್ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರಂ, ದಂತ ಕಾಲೇಜು, ಎಸ್‌ಜೆ ಪಾರ್ಕ್, ದಾಸರಹಳ್ಳಿ, ಚೊಕ್ಕಸಂದ್ರ, ವಿಜಯಲಕ್ಷ್ಮಿ ಲೇಔಟ್, ಶ್ರೀ ಲೇಔಟ್, ಮಂಜುನಾಥನಗರ, ಸಿಡೇದಹಳ್ಳಿ , ಅಂಚೆಪಾಳ್ಯ, 66/11ಕೆವಿ ದೊಮ್ಮಸಂದ್ರ ಸಬ್ ಸ್ಟೇಷನ್ ಸುತ್ತಮುತ್ತಲಿನ ಪ್ರದೇಶಗಳು, ಬಸವೇಶ್ವರ, ತ್ರಿಶೂಲ, ಜಯನಗರ, ಎಜುಕೋಳ, ಮಗನಗರ ಪಾಲಿಕೆ, ದುರ್ಗಾಂಭಿಕಾ, ಚಿಟ್ಟನಹಳ್ಳಿ, ಕಕ್ಕರಗೊಲ್ಲ, ಅವರಗೊಲ್ಲ, ದೇವರಹಟ್ಟಿ, ಶಿವಳ್ಳಿ, ವಿಜಯನಗರ, ಯರಗುಂಟಾ, ಸೇಂಟ್ 1, ಶಿವಳ್ಳಿ, ವಿಜಯನಗರದಲ್ಲಿ ಪವರ್ ಕಟ್ ಇರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ