ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಪವರ್ ಕಟ್ (Power Cut) ಇರಲಿದೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿರುವುದರಿಂದ ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಮತ್ತು ನಾಳೆ (ಬುಧವಾರ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿ ಪವರ್ ಕಟ್ ಇರಲಿದೆ. ಕನಕಪುರ, ರಾಮನಗರ ಮತ್ತು ತಿಪಟೂರು ಬೆಸ್ಕಾಂ ವಿಭಾಗಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ. ಕನಕಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಇಗ್ಗಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು, ಬೆಂಕಿಕೆರೆ, ಮಾದಾಪುರ, ಹೊನ್ನೆಬಾಗಿ, ಬೆನಕನಹಳ್ಳಿ, ಹೆಬ್ಬಲಗೆರೆ, ಎನ್‌ಎಸ್‌ಟಿ ಕಾವಲು, ಮಲ್ಲಾಡಿಹಳ್ಳಿ ಮತ್ತು ಹೊಸದುರ್ಗ ಸುತ್ತಮುತ್ತಲಿನ ಪ್ರದೇಶ, ಬಿದರಗದ್ದೆ, ಹೊಳೆಮಾದಾಪುರ, ಕಮ್ಮರಗಟ್ಟೆ, ಗೋವಿನಕೋವಿ, ಆವರಗೆ, ಆವರಗೆ, ಆನಗೋಡು, ಅತ್ತಿಗೆರೆ, ಮಾಯಕೊಂಡ, ಸರಸ್ವತಿ ಲೇಔಟ್, ಮಲೆಬೆನ್ನೂರು ಹೋಬಳಿ ಸುತ್ತಮುತ್ತಲಿನ ಪ್ರದೇಶಗಳು, ಹಿರಿಯೂರು, ನಗರ ಮತ್ತು ಗ್ರಾಮೀಣ ಪ್ರದೇಶಗಳಾದ ಆದಿವಾಳ, ಲಕ್ಕವನಹಳ್ಳಿ, ತೋಟಗಾರಿಕಾ ಕಾಲೇಜು, ಹಬೀಬ್ ಮತ್ತು ನಂದಾ ಫೀಡ್ಸ್ ಕಾರ್ಖಾನೆ ಪ್ರದೇಶದಲ್ಲಿ ಇಂದು ಪವರ್ ಕಟ್ ಇರಲಿದೆ.
ಇದನ್ನೂ ಓದಿ: Bengaluru Power Cut: ಈ ವೀಕೆಂಡ್ನಲ್ಲಿ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್
ಬುಧವಾರ ಕೆಂಗೇರಿಯ ಬೆಸ್ಕಾಂ ವಿಭಾಗದಲ್ಲಿ ಬಸವಾಪಟ್ಟಣ, ಹರಳಿಪುರ, ಹೊಸಳ್ಳಿ, ಹೊಸನಗರ, ಸಾಗರಪೇಟೆ, ಚಿರಡೋಣಿ, ಯಲ್ಲೋಡಹಳ್ಳಿ, ಮರಬನಹಳ್ಳಿ, ಸಂಗಳ್ಳಿ, ದಾಗಿನಕಟ್ಟೆ, ಸಿದ್ದೇಶ್ವರನಗರ, ಕಂಚುಗಾರನಹಳ್ಳಿ, ನಿಲೋಗಲ್, ಕಟ್ಟಿಗೆ, ಆರುಂಡಿ, ಜೀನಹಳ್ಳಿ, ತೀರ್ಥರಾಮೇಶ್ವರ, ಅರುಂಡಿ, ಜೀನಹಳ್ಳಿ, ತೀರ್ಥರಾಮೇಶ್ವರ, ಕೆ.ಹರಕಟ್ಟೆ ಕೊಲೊನೇಷನ್, ಪಲ್ಲವಗೆರೆ, ಜೆ ಸಿ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಚನ್ನಪಟ್ಟಣ, ಆದನೂರು, ಅರೇನಹಳ್ಳಿ, ಅಪರಸನಹಳ್ಳಿ, ಹೊಳಲ್ಕೆರೆ ಟೌನ್, ಮದೇರು, ಬೊಮ್ಮನಕಟ್ಟೆ, ಚಿತ್ರಹಳ್ಳಿ, ಮಲ್ಲಾಡಿಹಳ್ಳಿ, ಗುಂಡಿಮಡು, ಮಾಳೇನಹಳ್ಳಿ, ಪುನುಜೂರು, ಲೋಕದಹಾಳು, ಚೀರನಹಳ್ಳಿ ಮತ್ತು ರಾಮಗಿರಿ ರಸ್ತೆ, ಶಿವನಗಿರಿ ರಸ್ತೆ, ರಾಮಘಟ್ಟ, ಕೆಂಗುಂಟೆ, ಧೂಮಿ, ಕುಣಗಲಿ, ಹೊಳೆಮಳಲಿ, ಅಗ್ರಹಾರ, ಕುಂದಗೂರ, ಕೋಡಿಹಳ್ಳಿ, ಉಪ್ಪಳಗೆರೆ, ಶಿವಾಪುರ, ಪಿಟ್ಲಹಳ್ಳಿ, ಆಲೂರು, ಲಕ್ಷ್ಮೀಪುರ, ಆರಣಕಟ್ಟೆ, ರಾಂಪುರ ಠಾಣೆಗೆ ಸಂಬಂಧಪಟ್ಟ ಎಲ್ಲಾ ಪ್ರದೇಶಗಳು.