ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ನಾಗರಿಕ ಒಕ್ಕೂಟದಿಂದ ಮತ್ತೊಂದು ಪತ್ರ
ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗಾಗಿ ಅನುಮತಿ ನೀಡುವಂತೆ ಕೋರಿ ಚಾಮರಾಜಪೇಟೆ ನಾಗರಿಕ ಒಕ್ಕೂಟದಿಂದ ಬೆಂಗಳೂರು ನಗರ ಡಿಸಿಗೆ ಮತ್ತೊಂದು ಪತ್ರ ಬರೆಯಲಾಗಿದೆ.
ಚಾಮರಾಜಪೇಟೆ: ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ(Kannada Rajyotsava) ಆಚರಣೆಗೆ ಸಿದ್ದತೆಗಳು ಜೋರಾಗಿವೆ. ಚಾಮರಾಜಪೇಟೆ ಮೈದಾನದಲ್ಲಿ(Chamarajpet Maidan) ಕಳೆದ ಬಾರಿ ಧ್ವಜ ಹಾರಿಸಲು, ಗಣೇಶ ಕೂರಿಸಲು ಶುರುವಾಗಿದ್ದ ಗಲಾಟೆ ಈಗ ಮತ್ತೆ ಶುರುವಾಗಿದೆ. ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗಾಗಿ ಅನುಮತಿ ನೀಡುವಂತೆ ಕೋರಿ ಚಾಮರಾಜಪೇಟೆ ನಾಗರಿಕ ಒಕ್ಕೂಟದಿಂದ ಮತ್ತೊಂದು ಪತ್ರ ಬರೆಯಲಾಗಿದೆ.
ಚಾಮರಾಜಪೇಟೆ ನಾಗರಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ರುಕ್ಮಾಂಗದ ಅವರು ಇಂದು ಬೆಂಗಳೂರು ನಗರ ಡಿಸಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ನ.1ರಿಂದ 30ರವರೆಗೆ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿ. ರಾಜ್ಯೋತ್ಸವ ಹಿನ್ನೆಲೆ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಬೇಕು ಎಂದು ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಸಾಲಿನಲ್ಲಿ ಬಾರದ ಜಿಪಂ ನೌಕರನಿಗೆ ಕುಟುಂಬದ ಎದುರೇ ಉಪ ವಿಭಾಗಾಧಿಕಾರಿಯಿಂದ ಕಪಾಳ ಮೋಕ್ಷ
ಕೂಡ ಕೋರ್ಟ್ ಆದೇಶದ ಪ್ರಕಾರ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಕ್ಕೆ ಅನುಮತಿ ಇದೆ. ಹೀಗಾಗಿ ಸರ್ಕಾರವು ರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿ ಮೇಲ್ಮನವಿ ಸಲ್ಲಿಸಬೇಕಿದೆ ಎಂದು ಕೆಲ ದಿನಗಳ ಹಿಂದೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಆಗ್ರಹಿಸಿದ್ದರು.
ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಕಂದಾಯ ಸಚಿವ ಆರ್.ಅಶೋಕ್ ಜೊತೆ ಮಾತನಾಡಿದ್ದೇವೆ. ರಾಜ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ನಿಂದ ಆಚರಿಸಲು ಸಲಹೆ ನೀಡಿದ್ದಾರೆ. ನಾಗರಿಕರ ಒಕ್ಕೂಟಕ್ಕೂ ಈ ಸಲಹೆಯು ಸಮ್ಮತವಾದುದಾಗಿದೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆಗೂ ಚರ್ಚಿಸಿದ್ದೇವೆ. ನಾಡಹಬ್ಬದ ರೀತಿ ಆಚರಣೆಗೆ ಸರ್ಕಾರ ಸಲಹೆ ನೀಡಬಹುದು. ಕಂದಾಯ ಇಲಾಖೆಯೇ ಕೋರ್ಟ್ ಮೊರೆ ಹೋಗಿ ಅನುಮತಿ ಕೇಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದರು. ಸದ್ಯ ಈಗ ಎರಡನೇ ಬಾರಿಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ನಾಗರಿಕ ಒಕ್ಕೂಟ ಪಟ್ಟು: ಕೋರ್ಟ್ಗೆ ಸರ್ಕಾರದಿಂದ ಮೇಲ್ಮನವಿ ಸಾಧ್ಯತೆ