Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ಪವರ್ ಕಟ್, ಇಲ್ಲಿದೆ ವಿವರ

| Updated By: Ganapathi Sharma

Updated on: Jan 17, 2024 | 12:36 PM

ಬೆಂಗಳೂರು ಪವರ್ ಕಟ್: ಇಂದು (ಜನವರಿ 17) ಮತ್ತು ನಾಳೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಇರಲಿದೆ. ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದ್ದು, ಯಾವೆಲ್ಲ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ? ಎಷ್ಟು ಹೊತ್ತು ವಿದ್ಯುತ್ ಪೂರೈಕೆ ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

Bengaluru Power Cut: ಬೆಂಗಳೂರಿನ ಹಲವೆಡೆ ಇಂದು, ನಾಳೆ ಪವರ್ ಕಟ್, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜನವರಿ 17: ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಯ ಕಾರಣ ಬೆಂಗಳೂರಿನ ಹಲವೆಡೆ ಜನವರಿ 17 ಬುಧವಾರ ಮತ್ತು 18ರ ಗುರುವಾರ ಪವರ್ ಕಟ್ (Bengaluru Powe Cut) ಇರಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದ್ದು, ಯಾವೆಲ್ಲ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂಬ ವಿವರ ನೀಡಿದೆ.

ಜನವರಿ 17ರಂದು ಎಲ್ಲೆಲ್ಲಿ ಪವರ್ ಕಟ್?

ಇಂದು ಕೋರಮಂಗಲ 5ನೇ ಬ್ಲಾಕ್, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕಾಡುಗೋಡಿ, ಜೋಗಿ ಕಾಲೋನಿ, ಸ್ಥಾ ಜಾನ್ಸ್ ಸ್ಟಾಫ್ ಕ್ವಾರ್ಟರ್ಸ್, ಆಡುಗೋಡಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಜನವರಿ 18ರಂದು ಎಲ್ಲೆಲ್ಲಿ ಪವರ್ ಕಟ್?

ಜನವರಿ 18, ಗುರುವಾರ ನೇಕಾರರ ಕಾಲೋನಿ, ಗೊಟ್ಟಿಗೆರೆ, ಎಂಎಲ್‌ಎ ಲೇಔಟ್, ಭೋರಾ ಲೇಔಟ್, ಆಶ್ರಮ ರಸ್ತೆ, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 3ರ ವರೆಗೆ ಪವರ್ ಕಟ್ ಇರಲಿದೆ. ಬಿಟಿಎಂ ಐ ಸ್ಟೇಜ್, ಜೈ ಭೀಮ್ ನಗರ, ಕೋರಮಂಗಲ 2ನೇ ಬ್ಲಾಕ್, ತಾವೆರೆಕರೆ, ಎಸ್​ಜಿ ಪಾಳ್ಯ, ವಿಲ್ಸನ್ ಗಾರ್ಡನ್, ಜಸಿ ರಸ್ತೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೆಹೆಚ್​​ ರಸ್ತೆ, ಲಾಲ್​ಬಾಗ್ ರಸ್ತೆ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: ಲಾರಿ ಮುಷ್ಕರ; 2 ಲಕ್ಷ ಲಾರಿ ಸ್ಥಗಿತ, ಲಾರಿ ಸಂಘಟನೆಗಳ ಬೇಡಿಕೆಗಳೇನು?

ಬೆಂಗಳೂರು ನಗರದಾದ್ಯಂತ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಬೆಸ್ಕಾಂ ತ್ವರಿತಗತಿಯಲ್ಲಿ ನಡೆಸುತ್ತಿದೆ. ಅದೇ ರೀತಿ, ಅಪಾಯಕರ ಸ್ಥಿತಿಯಲ್ಲಿರುವ ತಂತಿಗಳ, ಕೇಬಲ್​ಗಳ ನಿರ್ವಹಣೆ ನಡೆಯುತ್ತಿದೆ. ಹೀಗಾಗಿ ದುರಸ್ತಿ ಕಾರ್ಯಾಚರಣೆ ವೇಳೆ ಪವರ್ ಕಟ್ ಅನಿವಾರ್ಯವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ