ಬೆಂಗಳೂರು, ನವೆಂಬರ್ 11: ಬೆಂಗಳೂರಿನ (Bengaluru) ಕೆಲವು ನಗರಗಳಲ್ಲಿ ಇಂದು (ನ.11) ಪೂರ್ವನಿಯೋಜಿತ ವಿದ್ಯುತ್ ವ್ಯತ್ಯಯವಾಗಲಿದೆ. ದುರಸ್ತಿ ಮತ್ತು ನಿರ್ವಹಣೆಯ ಕಾರಣಕ್ಕೆ ವಿದ್ಯತ್ ಕಡಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿ ನೀಡಿದೆ. ವಿದ್ಯುತ್ ಕಡಿತ ಪ್ರದೇಶ ಹಾಗೂ ಸಮಯದ ವಿವರವನ್ನು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಲೈನ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಸಲುವಾಗಿ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ ಎಂದು ಬೆಸ್ಕಾಂ ಮನವಿ ಮಾಡಿದೆ.
ರಾಜಾಜಿನಗರದ ಚಂದ್ರಾ ಲೇಔಟ್ 80ft ರಸ್ತೆ, ಪಾಲಿಕೆ ಸೌಧ, ಜೋತಿ ನಗರ, ಆದಾಯ ತೆರಿಗೆ ಲೇಔಟ್ ಚಂದ್ರಾ ಲೇಔಟ್ 1ನೇ ಮತ್ತು 2ನೇ ಹಂತ. ಬಸವೇಶ್ವರ ಬಡಾವಣೆ, Khb ಕಾಲೋನಿ 1 ನೇ ಹಂತ, ಶಾರದ ಕಾಲೋನಿ, ಶಕ್ತಿಗಣಪತಿನಗರ. ಮ್ಯಾಕ್ಸ್ಮುಲ್ಲರ್ ಶಾಲೆ, ಇಂಜಿ. ಸಂಘ, ಬೆಮಿ ಲೇಔಟ್‌ನ ಭಾಗ, ಶಿವನಗರ, ಮಹಾಗಣಪತಿ ನಗರ, ವೆರ್. ತಿಮ್ಮಯ್ಯ ರಸ್ತೆ ಮೋದಿ ಮುಖ್ಯರಸ್ತೆ, ಸತ್ಯನಾರಾಯಣ ಲೇಔಟ್, ವಾಟರ್ ಟ್ಯಾಂಕ್ ಹತ್ತಿರ, ಅಂಚೆ ಕಛೇರಿ, ಶಂಕರಮಠ ವೃತ್ತದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1:30ರವರೆಗೆ ವಿದ್ಯುತ್ ಕಡಿತವಾಗಲಿದೆ.
ಕೋರಮಂಗಲದ ಗುರಪ್ಪ ರೆಡ್ಡಿ ಲೇಔಟ್, ಪಾಳ್ಯ ಸುತ್ತಮುತ್ತ, ಪಾಣತ್ತೂರು, ಜೆರ್ ಲೇಔಟ್, ಭೋಗನಹಳ್ಳಿ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕರೆಂಟ್ ಕಟ್ ಆಗಲಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrlRE9 ಸಂಪರ್ಕಿಸಿ. pic.twitter.com/dQg2qfZd87
— Namma BESCOM | ನಮ್ಮ ಬೆಸ್ಕಾಂ (@NammaBESCOM) November 10, 2024
ಬೆಂಗಳೂರು ಗ್ರಾಮಾಂತರದ ನೆಲಮಂಗಲ, ದೇವನಹಳ್ಳಿ, ವಿಜಯಪುರ, ದಾಬಾಸ್‌ಪೇಟೆ Sompura Kiadb ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ