ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ಗೆ ಕೇಂದ್ರ ಸರ್ಕಾರ ಸಿದ್ದತೆ: 9 ಕಂಪನಿಗಳಿಂದ ಟೆಂಡರ್ ಸಲ್ಲಿಕೆ

ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಟೆಂಡರ್‌ ಆಹ್ವಾನಿಸಿದೆ. ಇದರಿಂದ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಒಂಬತ್ತು ಕಂಪನಿಗಳು ಟೆಂಡರ್​ನಲ್ಲಿ ಭಾಗಿಯಾಗಿವೆ. ಜನವರಿ ವೇಳೆಗೆ ಟೆಂಡರ್ ಫೈನಲ್ ಆಗುವ ಸಾಧ್ಯತೆಗಳಿವೆ.

ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ ಗೆ ಕೇಂದ್ರ ಸರ್ಕಾರ ಸಿದ್ದತೆ: 9 ಕಂಪನಿಗಳಿಂದ ಟೆಂಡರ್ ಸಲ್ಲಿಕೆ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ (ಪ್ರಾತಿನಿಧಿಕ ಚಿತ್ರ)
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Nov 10, 2024 | 9:24 PM

ಬೆಂಗಳೂರು, ನವೆಂಬರ್​ 10: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ರೀತಿಯಲ್ಲಿ ಬೆಂಗಳೂರು ಮಂಗಳೂರು ಎಕ್ಸ್ ಪ್ರೆಸ್ ವೇ (Bengaluru-Mangaluru Expressway) ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು, ಯೋಜನೆ ಕಾರ್ಯರೂಪಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಟೆಂಡರ್ ಕರೆಯಲಾಗಿದೆ.

ಸಮಯ ಉಳಿತಾಯ

ಬೆಂಗಳೂರು ಟು ಮಂಗಳೂರು ಹೋಗಬೇಕು ಅಂದರೆ ಸುಮಾರು 350 ಕಿಮೀ, ಕನಿಷ್ಟ ಆರರಿಂದ ಏಳು ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು ಟು ಮಂಗಳೂರು ಎಕ್ಸ್ ಪ್ರೆಸ್ ವೇ ಕಾರಿಡಾರ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದ ಮೂರೂವರೆ ಗಂಟೆಯಿಂದ ನಾಲ್ಕು ಗಂಟೆಯೊಳಗೆ ಬೆಂಗಳೂರಿನಿಂದ-ಮಂಗಳೂರು ತಲುಪಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇಯಲ್ಲಿ ಮತ್ತೊಂದು ಕಂಟಕ: ಪ್ರಯಾಣಿಕರಿಗೆ ಪ್ರಾಣ ಭಯ

ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಒಂಬತ್ತು ಕಂಪನಿಗಳು ಟೆಂಡರ್​ನಲ್ಲಿ ಭಾಗಿಯಾಗಿವೆ. ಜನವರಿ ವೇಳೆಗೆ ಟೆಂಡರ್ ಫೈನಲ್ ಆಗುವ ಸಾಧ್ಯತೆಗಳಿವೆ. ಇದರಿಂದ ಬೆಂಗಳೂರಿನಿಂದ ವಿದೇಶಕ್ಕೆ ಸಾಗಿಸುವ ಸಾಮಾಗ್ರಿಗಳನ್ನು ಸಾಗಿಸಲು ಸಹಾಯ ಆಗುತ್ತದೆ ಮತ್ತು ವಿದೇಶದಿಂದ ಭಾರತಕ್ಕೆ ಬರುವ ಇಂಧನ, ಗ್ಯಾಸ್, ಮೈನ್ಸ್ ಮಂಗಳೂರು ಬಂದರಿನ ಮೂಲಕ ಬೆಂಗಳೂರಿಗೆ ತರಲು ಸಹಾಯ ಆಗುತ್ತದೆ ಎಂದು ಟ್ರಾಫಿಕ್ ಎಕ್ಸ್ಪರ್ಟ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಒಂಬತ್ತು ಕಂಪನಿಗಳು ಟೆಂಡರ್ ಸಲ್ಲಿಕೆ

ಇನ್ನೂ ಡಿಪಿಆರ್ ರೆಡಿ ಮಾಡಲು ಒಂಬತ್ತು ಕಂಪನಿಗಳು ಟೆಂಡರ್ ಸಲ್ಲಿಸಿವೆ. ಈ ಹೈ ಸ್ಪೀಡ್ ಕಾರಿಡಾರ್ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ತಲುಪಲಿವೆ. ನಾಲ್ಕು ಅಥವಾ ಆರು ಲೈನ್ ರೋಡ್ ಮಾಡಲು ಪ್ಲಾನ್ ಮಾಡಲಾಗ್ತಿದೆ. ಈ ಎಕ್ಸ್‌ಪ್ರೆಸ್ ವೇ 335 ಕಿಮೀ ವಿಸ್ತೀರ್ಣ ಇರಲಿದೆ. ಟೆಂಡರ್ ಪಡೆದುಕೊಳ್ಳುವ ಕಂಪನಿಗೆ ಡಿಪಿಆರ್ ವರದಿ ಸಲ್ಲಿಸಲು 540 ದಿನಗಳ ಕಾಲ ಅವಕಾಶ ನೀಡಲಾಗುತ್ತದೆ.

2028 ರಲ್ಲಿ ಈ ಹೈ ಸ್ಪೀಡ್ ಕಾರಿಡಾರ್ ಯೋಜನೆಯ ಕೆಲಸ ಆರಂಭವಾಗಲಿದೆ ಅಂತ ಹೇಳಲಾಗುತ್ತಿದೆ. ಇದು ಅಷ್ಟು ಸುಲಭದ ಕೆಲಸವಲ್ಲ, ಕಾರಣ ಈ ಎಕ್ಸ್‌ಪ್ರೆಸ್ ವೇ ಮಾಡಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ, ಅದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಬಹುದು. ಆದರೆ ಇದರಿಂದ ನಮ್ಮ ಖಾಸಗಿ ಬಸ್ ಗಳ ನಿರ್ವಹಣೆ ಮತ್ತು ಡಿಸೇಲ್ ಉಳಿತಾಯ ಆಗಲಿದೆ ಎಂದು ಖಾಸಗಿ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು-ದರ್ಬಾಂಗ ಎಕ್ಸ್​ಪ್ರೆಸ್ ರೈಲು ಅಪಘಾತ: ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ಸೋಮಣ್ಣ

ಒಟ್ಟಿನಲ್ಲಿ ಬೆಂಗಳೂರು ಟು ಮಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್ ಓಪನ್ ಆದ್ರೆ, ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುತ್ತದೆ. ಪ್ರವಾಸೋದ್ಯಮವು ಬೆಳೆಯುತ್ತದೆ ಆದರೆ ಪರಿಸರವಾದಿಗಳು ಸುಮ್ಮನೆ ಇರ್ತಾರ ಅನ್ನೋದೆ ಯಕ್ಷ ಪ್ರಶ್ನೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್