ಬೆಂಗಳೂರು, ಅಕ್ಟೋಬರ್ 10; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ ನೇರಳೆ ಮಾರ್ಗ(Bengaluru Purple Line Metro) ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದ್ದು, ಈ ಭಾಗದ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಿದೆ. ಅಲ್ಲದೇ ಟ್ರಾಫಿಕ್ ಜಂಜಾಟಕ್ಕೆ ಗುಡ್ಬೈ ಹೇಳಿದ್ದಾರೆ. ಇನ್ನು ಈ ಮೆಟ್ರೋ ನಿಲ್ದಾಣಗಳನ್ನು ಪ್ರಯಾಣಿಕರು ತಲುಪಲು ಬಿಎಂಟಿಸಿ ಫೀಡರ್ ಬಸ್ (Metro feeder buses) ವ್ಯವಸ್ಥೆ ಮಾಡಿದೆ. ಹೌದು…ಒಟ್ಟು 37 ಫೀಡರ್ ಬಸ್ಗಳಿಗೆ ಇಂದು (ಅಕ್ಟೋಬರ್ 11) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ, ಕೆಆರ್ ಪುರ ನಿಲ್ದಾಣಕ್ಕೆ 37 ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆ ಮಾಡಿದ್ದೇವೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರವನ್ನು ಆರಂಭವಾಗಿದೆ. ಇದೀಗ ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಿದೆ ಎಂದರು.
ಇದನ್ನೂ ಓದಿ: Namma Metro: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ
ವಿವಿಧ ಪ್ರದೇಶಗಳಿಂದ 37 ಹೊಸ ಬಿಎಂಟಿಸಿ ಬಸ್‌ಗಳು ಕೆಆರ್ ಪುರ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಇತರೆ ಪ್ರದೇಶಗಳಿಂದ ಕೆಆರ್ ಪುರದ ಮೆಟ್ರೋ ನಿಲ್ದಾಣ ಸಂಪರ್ಕಿಸಲು ಮೆಟ್ರೋ ಫೀಡರ್ ಬಸ್ ಸಂಚರಿಸಲಿವೆ. ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ 22 ಬಸ್‌ಗಳು ಸಂಚಾರಿಸಲಿವೆ. ವೊಲ್ವೋ ಬಸ್ ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗದಲ್ಲಿ ಹೊರ ವರ್ತುಲ ರಸ್ತೆ, ಮಾರತ್‌ಹಳ್ಳಿ, ಇಬ್ಬಲೂರು ಮೂಲಕ ಈ ಬಸ್ಸುಗಳು ಸಂಚಾರ ಮಾಡಲಿವೆ ಎಂದು ವಿವರಿಸಿದರು.
06:40, 0650, 0700, 0710, 0720, 0730, 0740, 0750, 0800, 0805, 0810, 0815, 0820, 0825, 0830, 0835, 0840, 0845, 0850, 0855, 0900, 0905, 0910, 0915, 0920, 0925, 0930, 0935, 0940, 0950, 1000, 1015, 1025, 1035, 1050, 1100, 1110, 1115, 1120, 1130, 1135, 1140, 1150, 1155, 1200, 1215, 1235, 1300, 1315, 1325, 1345, 1355, 1400, 1405, 1415, 1420, 14:25, 1430, 1435, 1440, 1450, 1455, 1500, 1505, 1510, 1520, 1525, 1535, 1545, 1555, 1605, 1620, 1630, 1640, 1650, 1655, 1705, 1710, 1720, 1725, 1735, 1745, 1755, 1805, 1820, 1830, 1840, 1850, 1900, 1910, 1920, 1930, 1940, 1950, 2000, 2010, 2020, 2030, 2040, 2050, 2100, 2110, 2120, 2130,2140, 2150, 2200.
0540, 0550, 0600, 0610, 0620, 0630, 0640, 0650, 0700, 0710, 0720, 0730, 0740, 0745, 0750, 0800, 0805, 0810, 0820, 0825, 0835, 0840, 0855, 0905, 0915, 0925, 0935, 0950, 0955, 1000, 1005, 1010, 1015, 1020, 1025, 1030, 1035, 1040, 1045, 1050, 1055, 1100, 1110, 1120, 1130,1140, 1150, 1200, 1210, 1220, 1230, 1240, 1245, 1250, 1300, 1310, 1315, 1320, 1335, 1350, 1400, 1420, 1425, 1435, 1500, 1510, 1520, 1530, 1540, 1545, 1555, 1600, 1605, 1615, 1625, 1635, 1645, 1650, 1655, 1700, 1705, 1710, 1715, 1720, 1725, 1730, 1735, 1740, 1745, 1750, 1755, 1805, 1815, 1825, 1840, 1855, 1910, 1925, 1935, 1945, 1955, 2005, 2015, 2025, 2035, 2045, 2055.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Wed, 11 October 23