ಮಳೆಗೆ ಬೆಂಗಳೂರು ತತ್ತರ; ಕರಿಯಮ್ಮ ಅಗ್ರಹಾರ ಬಳಿ ರಸ್ತೆ ಜಲಾವೃತ, ವಾಹನಗಳಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರ ರಕ್ಷಣೆ

ಕೆ.ಆರ್.ಸರ್ಕಲ್ ಅಂಡರ್ ಪಾಸ್ ಮಾದರಿಯ ರಸ್ತೆಗೆ ರಾಜಕಾಲುವೆ ನೀರು ನುಗ್ಗಿದ್ದು 50 ಮೀಟರ್​ ಉದ್ದದ ರಸ್ತೆ ಜಲಾವೃತಗೊಂಡಿತ್ತು. ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಏರಿಕೆಯಾಗಿತ್ತು. 15ಕ್ಕೂ ಹೆಚ್ಚು ವಾಹನ, 50ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿಕೊಂಡಿದ್ದರು.

ಮಳೆಗೆ ಬೆಂಗಳೂರು ತತ್ತರ; ಕರಿಯಮ್ಮ ಅಗ್ರಹಾರ ಬಳಿ ರಸ್ತೆ ಜಲಾವೃತ, ವಾಹನಗಳಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರ ರಕ್ಷಣೆ
ಕರಿಯಮ್ಮ ಅಗ್ರಹಾರ ಬಳಿಯ ರಸ್ತೆಯಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಜನರ ರಕ್ಷಣೆ
Follow us
Jagadisha B
| Updated By: ಆಯೇಷಾ ಬಾನು

Updated on:Oct 10, 2023 | 7:33 AM

ಬೆಂಗಳೂರು, ಅ.10: ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ (Bengaluru Rain). ಈ ಪರಿಣಾಮ ಅನೇಕ ಸಮಸ್ಯೆಗಳು ಕೂಡ ಎದುರಾಗಿವೆ (Rain Effect). ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್​ ಜಾಮ್​ ಆಗಿದ್ದು ಸುಮಾರು 4-5 ಕಿಲೋ ಮೀಟರ್​ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಇನ್ನು ಬೆಂಗಳೂರಿನ ಅಂಡರ್ ಪಾಸ್​ ರಸ್ತೆಗಳು ಮಳೆಗೆ ಮೃತ್ಯುಕೂಪವಾಗಿದೆ (Bengaluru Underpass). ಭಾರಿ ಮಳೆಯಿಂದ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಬಳಿಯ ರಸ್ತೆ ಜಲಾವೃತವಾಗಿದ್ದು ಸುಮಾರು 15ಕ್ಕೂ ಹೆಚ್ಚು ವಾಹನಗಳು ಮತ್ತು ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನ ಸಿಲುಕಿಕೊಂಡ ಘಟನೆ ನಡೆದಿದೆ.

ಕೆ.ಆರ್.ಸರ್ಕಲ್ ಅಂಡರ್ ಪಾಸ್​ನಲ್ಲಿ ನೀರು ನಿಂತು ದುರಂತವೊಂದು ಸಂಭವಿಸಿತ್ತು. ಅದೇ ಮಾದರಿಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗ್ಗಿದ್ದು 50 ಮೀಟರ್​ ಉದ್ದದ ರಸ್ತೆ ಜಲಾವೃತಗೊಂಡಿತ್ತು. ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಏರಿಕೆಯಾಗಿತ್ತು. 15ಕ್ಕೂ ಹೆಚ್ಚು ವಾಹನ, 50ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿಕೊಂಡಿದ್ದರು. ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಿಂದ ವಾಹನಗಳು ಹೊರಬರಲಾಗದೆ ಪರದಾಡುತ್ತಿದ್ದವು. ಕ್ಷಣ ಕ್ಷಣಕ್ಕೂ ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು. 50ಕ್ಕೂ ಹೆಚ್ಚು ಜನ ಮಳೆ ನೀರಿನಲ್ಲಿ ಸಿಲುಕಿ ಕೆಲಹೊತ್ತು ನರಕ ಅನುಭವಿಸಿದರು. ಸದ್ಯ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗರ್ಭಿಣಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ನೀರಲ್ಲಿ ಸಿಲುಕಿದ್ದವರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಿದ್ದಾರೆ.

ವಾಹನಗಳಲ್ಲಿದ್ದ 50ಕ್ಕೂ ಹೆಚ್ಚು ಜನರನ್ನು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿದರು. ಕೊಂಚ ಯಾಮಾರಿದ್ರೂ ಅಂಡರ್ ಪಾಸ್ ಜನರ ಜೀವಕ್ಕೆ ಕಂಠಕವಾಗುತ್ತಿತ್ತಿ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ​ ಭಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ: Bengaluru Rain: ಸಂಜೆಯಾಗುತ್ತಲೇ ಬೆಂಗಳೂರಿನಲ್ಲಿ ಮಳೆ ಆರಂಭ, ರಸ್ತೆಗಳು ಜಲಾವೃತ

ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

ನೀರಿನಲ್ಲಿ ಸಿಲುಕಿಕೊಂಡವರ ರಕ್ಷಣೆ ಮಾಡಿದವರಲ್ಲೊಬ್ಬರಾದ ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, ಮಾಹಿತಿ ಬಂದ ಕೂಡಲೇ ನಾವು ಸ್ಥಳಕ್ಕೆ ಬಂದೆವು. ಬಿಬಿಎಂಪಿಗೆ ಸಹ ಕೂಡಲೇ ಮಾಹಿತಿ ನೀಡಿದೆವು. ಓರ್ವ ಗರ್ಭಿಣಿ ಸೇರಿ 15 ಜನ ನೀರಿನಲ್ಲಿ ಸಿಲುಕಿದ್ದರು. ಎಲ್ಲರನ್ನೂ ಕರೆದುಕೊಂಡು ಹೊರಗೆ ಬಂದೆವು. ಟ್ಯಾಕ್ಸಿ ಡ್ರೈವರ್ ಗಳು ಹೊರಗೆ ಬರೊಲ್ಲ ಅಂತಿದ್ರು. ಮಳೆ ಬರುತ್ತಲೆ ಇತ್ತು. ನೀರು ಹೆಚ್ಚುತಿತ್ತು. ಕೂಡಲೇ ಸಂಚಾರಿ ಪೊಲೀಸರಿಗೆ ಟ್ಯಾಕ್ಸಿ ಡ್ರೈವರ್ ಗಳ ಬಗ್ಗೆ ತಿಳಿಸಿದೆವು. ನಂತರ ಪೊಲೀಸರು ಬಂದು ಅವರನ್ನು ಹೊರಗೆ ಬರಲು ಹೇಳಿದ ಬಳಿಕ ಅವರನ್ನು ಕರೆತಂದೆವು. ನಿರಂತರ ಮಳೆ ಬರುತ್ತಲೇ ಇತ್ತು. ಪೊಲೀಸರ ಸಹಾಯದೊಂದಿಗೆ ನಾವು ಟ್ರ್ಯಾಕ್ಟರ್ ಮುಖಾಂತರ ರಕ್ಷಣೆ ಮಾಡಿದೆವು ಎಂದರು.

ಇಲ್ಲಿ ಇವತ್ತು ಆದ ಘಟನೆ ಇದು ಇವತ್ತಿನ ಸಮಸ್ಯೆ ಅಲ್ಲ. ಈ ಹಿಂದೆ ಸಹ ಒಂದೆರಡು ಬಾರಿ ಆಗಿತ್ತು. ಆಗ ಒಂದಿಷ್ಟು ಕೆಲಸ ಅಂತ ಮಾಡಿ ನೀರು ಹೊಗಲು ವ್ಯವಸ್ಥೆ ಮಾಡಿದ್ರು. ಆದ್ರೆ ಸಂದರ್ಭಕ್ಕೆ ತಕ್ಕಂತೆ ಮಾಡುತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರಬೇಕು ಎಂದು ಬಸವರಾಜ್ ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:59 am, Tue, 10 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್