Bengaluru Rain: ಬೆಂಗಳೂರಿನ ಹಲವೆಡೆ ಮಳೆ ಆರಂಭ; ಸಂಚಾರ ವ್ಯತ್ಯಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2024 | 5:57 PM

ಹಲವು ತಿಂಗಳಿನಿಂದ ಬಿಸಿಲಿನಿಂದ ಬೆಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಸಂಜೆಯಾಗುತ್ತಿದ್ದಂತೆಯೇ ವರುಣ ತಂಪೆರೆಯುತ್ತಿದ್ದಾನೆ. ಹೌದು. ಕಳೆದ ಐದಾರು ದಿನಗಳಿಂದ ಸೂರ್ಯ ಮುಳುಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇನ್ನು ಮಳೆಯಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸಂಚಾರ ವ್ಯತ್ಯಯವಾಗಿದೆ.

Bengaluru Rain: ಬೆಂಗಳೂರಿನ ಹಲವೆಡೆ ಮಳೆ ಆರಂಭ; ಸಂಚಾರ ವ್ಯತ್ಯಯ
ಬೆಂಗಳೂರಿನಲ್ಲಿ ಮಳೆ
Follow us on

ಬೆಂಗಳೂರು, ಮೇ.10: ಬಿಸಿಲಿಗೆ ಕಂಗಾಲಾಗಿದ್ದ ಬೆಂಗಳೂರಿಗರಿಗೆ ಕಳೆದ ಐದಾರು ದಿನಗಳಿಂದ ಸಂಜೆಯಾಗುತ್ತಿದ್ದಂತೆ ವರುಣನ (Rain) ದರ್ಶನವಾಗುತ್ತಿದೆ. ಅದರಂತೆ ಇಂದು(ಮೇ.10) ಕೂಡ ನಗರದ ಪೀಣ್ಯ, ದಾಸರಹಳ್ಳಿ, ಮಲ್ಲಸಂದ್ರ, ಮಾಕಳಿ, ಚಿಕ್ಕಬಿದರಕಲ್ಲು ಸೇರಿದಂತೆ ಹಲವೆಡೆ ಮಳೆ ಆರಂಭವಾಗಿದೆ. ಉಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆಗಳಿವೆ.

ಸಂಚಾರ ವ್ಯತ್ಯಯ

ಇನ್ನು ಮಳೆಯಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸಂಚಾರ ವ್ಯತ್ಯಯವಾಗಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂದಗತಿಯಲ್ಲಿ ವಾಹನಗಳು ಸಂಚಾರ ನಡೆಸುತ್ತಿವೆ. ಈ ಹಿನ್ನಲೆ 8ನೇ ಮೈಲಿ ನವಯುಗ ಟೋಲ್​ನಿಂದ ಮಾದವಾರವರೆಗೆ ಫುಲ್​ ಟ್ರಾಫಿಕ್ ಜಾಮ್​ ಉಂಟಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ, ಜಾಗ್ರತೆಯಿಂದ ಇರಲು ಕೆಲ ಸಲಹೆ ಕೊಟ್ಟ ಹವಾಮಾನ ಇಲಾಖೆ

ಮಳೆ ಹಿನ್ನಲೆ ಬೇರೆಡೆಗೆ ಡೈವರ್ಟ್ ಆಗಿತ್ತು 17ಕ್ಕೂ ಹೆಚ್ಚು ವಿಮಾನಗಳು

ಇನ್ನು ನಿನ್ನೆ(ಮೇ 09)ರ ರಾತ್ರಿ 9:35 ರಿಂದ 10:29ರ ವರೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಈ ಹಿನ್ನಲೆ ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ 13 ದೇಶಿ, 3 ಅಂತರಾಷ್ಟ್ರೀಯ ವಿಮಾನಗಳು ಮತ್ತು ಒಂದು ಕಾರ್ಗೋ ವಿಮಾನವನ್ನು ಚೈನ್ನೈ ಕಡೆಗೆ ಡೈವರ್ಟ್ ಮಾಡಲಾಯಿತು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Fri, 10 May 24