AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರಿಗೆ 43ನೇ ಸ್ಥಾನ: ಸರ್ಕಾರದ ವಿರುದ್ಧ ಮತ್ತೆ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್

45 ನಗರಗಳ ಪಟ್ಟಿಯಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. ಪ್ರತಿಬಾರಿ ಸ್ವಚ್ಛತಾ ವಿಚಾರದಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿದೆ. ಇದು ಅತಿದೊಡ್ಡ ನಾಚಿಕೆಗೇಡು ಎಂದು ಉದ್ಯಮಿ ಪೈ ಕಿಡಿಕಾರಿದ್ದಾರೆ.

ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರಿಗೆ 43ನೇ ಸ್ಥಾನ: ಸರ್ಕಾರದ ವಿರುದ್ಧ ಮತ್ತೆ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್
ಬೆಂಗಳೂರು ಮೆಜೆಸ್ಟಿಕ್ ಬಸ್​ ಸ್ಟ್ಯಾಂಡ್​ (ಸಂಗ್ರಹ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 03, 2022 | 3:20 PM

Share

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ (Cilicon City) ಐಟಿ ಹಬ್​ ಎಂದು ಕರೆಯಲ್ಪಡುವ ಬೆಂಗಳೂರು (Bengaluru) ಸ್ವಚ್ಛ ಸರ್ವೇಕ್ಷಣಾ 2022ರ ಸಮೀಕ್ಷೆಯ (Swachh Survekshan survey) ಪ್ರಕಾರ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ ಈ ವರ್ಷ 15ನೇ ರ‍್ಯಾಂಕಿಂಗ್ ನಷ್ಟು ಕುಸಿದಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿಅಂಶಗಳನ್ನು ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ 43 ನೇ ಸ್ಥಾನದಲ್ಲಿದೆ. ಈ ಕುರಿತಾಗಿ ಇನ್ಫೋಸಿಸ್​​ನ ಮಾಜಿ ನಿರ್ದೇಶಕ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಪ್ರಸ್ತುತ ಅಧ್ಯಕ್ಷ ಶ್ರೇಯಾಂಕ, ಇದು ದೊಡ್ಡ ಅವಮಾನ ಎಂದು ಬಣ್ಣಿಸುವುದರೊಂದಿಗೆ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಕಳೆದ ಬಾರಿ 10 ಸಾವಿರ ಜನರಿಂದ ಪ್ರತಿಕ್ರಿಯೆ ಪಡೆಯಲಾಗಿದ್ದು, ಈ ಬಾರಿ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು. ನಗರ ಪ್ರದೇಶದ ಸವಾಲುಗಳು ವಿಭಿನ್ನವಾಗಿರುವುದರಿಂದ ದೊಡ್ಡ ದೊಡ್ಡ ಸಿಟಿಗಳನ್ನು ಸಣ್ಣ ನಗರಗಳೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದು, ಕೇಂದ್ರದಿಂದ ನೇಮಿಸಲ್ಪಟ್ಟ ಸಲಹೆಗಾರರು ಮತ್ತು ಬಿಬಿಎಂಪಿ ನಡುವೆ ವಿವಾದವಿದ್ದು, ನಾವು ಈ ರ‍್ಯಾಂಕಿಂಗ್​​ವನ್ನು ವಿವರವಾಗಿ ಪರಿಶೀಲಿಸುತ್ತೇವೆ ಎಂದು ಹೇಳಿದರು. ಬಯಲು ಮುಕ್ತ ಶೌಚ ಗಮನಾರ್ಹ ಪ್ರಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮೈಸೂರು 8ನೇ ಸ್ವಚ್ಛ ನಗರವಾಗಿದೆ. ಹುಬ್ಬಳ್ಳಿ-ಧಾರವಾಡ 82ನೇ ಸ್ಥಾನದಲ್ಲಿದೆ. ಕಂಟೋನ್ಮೆಂಟ್‌ಗಳಲ್ಲಿ ಬೆಳಗಾವಿ ಕಂಟೋನ್ಮೆಂಟ್ 44ನೇ ಸ್ಥಾನದಲ್ಲಿದೆ.

ಇದೇ ವಿಚಾರವಾಗಿ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಕೇಂದ್ರದ ಸ್ಚಚ್ಛ ಸರ್ವೇಕ್ಷಣಾ ರ‍್ಯಾಂಕಿಂಗ್​ನಲ್ಲಿ ಬೆಂಗಳೂರು ನಗರ ಕಳಪೆ ಸಾಧನೆ ಮಾಡಿದೆ. 45 ನಗರಗಳ ಪಟ್ಟಿಯಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. ಪ್ರತಿಬಾರಿ ಸ್ವಚ್ಛತಾ ವಿಚಾರದಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡುತ್ತಿದೆ. ಇದು ಅತಿದೊಡ್ಡ ನಾಚಿಕೆಗೇಡು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರೋ ನಗರಗಳ ಸ್ವಚ್ಛತೆ ಆಧರಿಸಿ ರ‍್ಯಾಂಕಿಂಗ್​ ನೀಡಲಾಗುತ್ತದೆ. ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರು ಪ್ರತೀ ಬಾರಿ ಕಳಪೆ ಸಾಧನೆ ಹೊಂದುತ್ತಿದೆ. ನಮ್ಮ ಎಂಎಲ್​ಎ, ಎಂಪಿಗಳು ವಿಫಲವಾಗಿದ್ದಾರೆ. ಹೆಚ್ಚಿನ ಎಂಎಲ್ಎಗಳು ಭ್ರಷ್ಟರು ಎಂದು ಟ್ವೀಟ್​ನಲ್ಲೇ ಪೈ ಜಾಡಿಸಿದ್ದಾರೆ. ಸಿಎಂ ಬೊಮ್ಮಾಯಿ, CMO ಕರ್ನಾಟಕ, ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಬಿಎಲ್ ಸಂತೋಷ್, ಆರ್ ಕೆ ಮಿಶ್ರ, ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್​ಗೆ ಪೈ ಟ್ಯಾಗ್ ಮಾಡಿದ್ದಾರೆ.

ದೇಶದ ಏಕೈಕ ಗ್ಲೋಬಲ್ ಸಿಟಿ. ದೇಶದ ಅತಿ ಶ್ರೀಮಂತ ಸಿಟಿ, ಈಗ ಗಾರ್ಬೇಜ್ ಸಿಟಿಯಾಗಿದೆ. ಇದು ನಮಗೆಲ್ಲ ನಾಚಿಕೆಗೇಡು ಸಂಗತಿ. ನಮಗೆ ತುರ್ತು ಸುಧಾರಣೆ ಬೇಕೆಂದು ಆಗ್ರಹಿಸಿದರು. ಎರಡನೇ ಟ್ವೀಟ್​ನಲ್ಲಿ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿ, ಬಿಎಲ್ ಸಂತೋಷ್, ಫ್ರಧಾನಿ ಕಚೇರಿಗೂ ಟ್ಯಾಗ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:16 pm, Mon, 3 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ