Auto Rickshaw Offences: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಪ್ರಯಾಣಕ್ಕೆ ಹೆಚ್ಚಿನ ದರ ಕೇಳಿದರೆ ಏನು ಮಾಡಬೇಕು? ವಿವರ ಇಲ್ಲಿದೆ

ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಪ್ರಯಾಣಕ್ಕೆ ಹೆಚ್ಚಿನ ದರ ಕೇಳಿದರೆ ಏನು ಮಾಡಬೇಕು? ಇಂತಹ ದುಬಾರಿ ಪ್ರಯಾಣ ದರಗಳ ಬಗ್ಗೆ ಸಂಚಾರಿ ಪೊಲೀಸ್​ ಅಧಿಕಾರಿಗಳಿಗೆ ತಿಳಿಸಬಹುದು ಎಂಬುದೇ ಅನೇಕರಿಗೆ ತಿಳಿದಿಲ್ಲ!

Auto Rickshaw Offences: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಪ್ರಯಾಣಕ್ಕೆ ಹೆಚ್ಚಿನ ದರ ಕೇಳಿದರೆ ಏನು ಮಾಡಬೇಕು? ವಿವರ ಇಲ್ಲಿದೆ
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರು ಪ್ರಯಾಣಕ್ಕೆ ಹೆಚ್ಚಿನ ದರ ಕೇಳಿದರೆ ಏನು ಮಾಡಬೇಕು? ವಿವರ ಇಲ್ಲಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 03, 2022 | 3:13 PM

ಬೆಂಗಳೂರಿನಲ್ಲಿ ಆಟೋ ಡ್ರೈವರ್‌ಗಳು (auto drivers) ಕಡಿಮೆ ಪ್ರಯಾಣಕ್ಕಾಗಿ (short rides) ಪ್ರಯಾಣಿಕರಿಂದ ಹೆಚ್ಚು ಹೆಚ್ಚು ದರಗಳನ್ನು ಕೇಳಿದಾಗ ಅನ್ಯಮಾರ್ಗ ಕಾಣದೆ ನೀವು ಆಗಾಗ್ಗೆ ಅವರೊಂದಿಗೆ ವಾಗ್ವಾದಕ್ಕೆ (argument) ಇಳಿಯುತ್ತೀರಿ. ಬಹುತೇಕ ವೇಳೆ, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪುವ ಆತುರದಲ್ಲಿರುವಾಗ ಯಾವುದೇ ಆಯ್ಕೆಯಿಲ್ಲದೆ ಹೆಚ್ಚು ದುಡ್ಡು ತೆತ್ತು ಬಿಟ್ಟು ಬಿಡುತ್ತಾರೆ. ಆದರೆ ಇದನ್ನು ತಪ್ಪಿಸಬಹುದು.ಇದಕ್ಕೆ ಹೌದಾ ಎಂದು ನೀವು ಆಶ್ಚರ್ಯಪಡಬೇಕಾಗಿಲ್ಲ! ಏಕೆಂದರೆ ಅಂತಹ ವ್ಯವಸ್ಥೆಯೊಂದು ಬೆಂಗಳೂರು ಸಂಚಾರಿ ಪೊಲೀಸರು (Bengaluru Police) ಅಂದಿನಿಂದಲೂ ಕೊಡಮಾಡುತ್ತಾ ಬಂದಿದ್ದಾರೆ. ಇಂತಹ ಅಧಿಕ ದರಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.

ಅಂತಹ ಆಟೋ ಚಾಲಕರ ಬಗ್ಗೆ ತಮಗೆ ವರದಿ ಮಾಡಲು/ ದೂರು ನೀಡಲು (Auto Rickshaw Offences) ಬೆಂಗಳೂರು ಪೊಲೀಸರು ಮಾರ್ಗದರ್ಶಿಯಪೊಂದನ್ನು ಟ್ವೀಟ್ ಮಾಡಿದ್ದಾರೆ. ಅಂತಹ ಪ್ರಕರಣ ವರದಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ. ಹೆಚ್ಚಿನ ದರಕ್ಕೆ ಬೇಡಿಕೆಯಿಡುವ ಆಟೋ ಚಾಲಕನ ಬಗ್ಗೆ ಬಳಕೆದಾರರು ದೂರು ನೀಡಬಹುದು ಎಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿನ ಪೋಸ್ಟ್ ಕೆಳಗಿನಂತೆ ಪೋಸ್ಟ್ ಮಾಡಿ, ಪ್ರಯಾಣಿಕರ ​ನೆರವಿಗೆ ಬಂದಿದ್ದಾರೆ:

ದೂರುಗಳನ್ನು ಸಲ್ಲಿಸಲು ನೀವು ನಮ್ಮ ಸ್ವಯಂಚಾಲಿತ IVRS ಗೆ ಕರೆ ಮಾಡಬಹುದು. ದಯವಿಟ್ಟು 080-2286 8550/ 2286 8444 ಗೆ ಕರೆ ಮಾಡಿ ಮತ್ತು ಆಟೋ ರಿಕ್ಷಾದ ನೋಂದಣಿ ಸಂಖ್ಯೆ, ಸ್ಥಳ, ಸಮಯ ಮತ್ತು ದಿನಾಂಕವನ್ನು ನಮೂದಿಸಿ. ಆಟೋ ಅಪರಾಧಗಳ ವಿರುದ್ಧ ದೂರುಗಳನ್ನು ಬುಕ್ ಮಾಡಲು ದಯವಿಟ್ಟು ನಮ್ಮ IVRS ಅನ್ನು ಬಳಸಿ. ಅಷ್ಟೇ ಅಲ್ಲ ಆಟೋ ಚಾಲಕರು ತಮ್ಮ ಕರ್ತವ್ಯದ ಸಮಯದಲ್ಲಿ ಪ್ರಯಾಣಿಉಕರು ಕೇಳುವ ಸ್ಥಳಕ್ಕೆ ಬರಲು ನಿರಾಕರಿಸಿದರೆ ಸಹ ದೂರು ದಾಖಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, IVRS ದೂರುಗಳನ್ನು ದಾಖಲಿಸದೆಯೇ, ಪ್ರಯಾಣಿಕರು ಸುಮ್ಮನೆ ದೂರು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಹಾಗೆ ಮಾಡುವ ಮೊದಲು ಪೊಲೀಸರಿಗೆ ದೂರು ಸಲ್ಲಿಸುವುದು ಸಮಂಜಸವಾದೀತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಆಟೋ ಮೀಟರ್ ದರವನ್ನು ಹೆಚ್ಚಿಸಿತ್ತು. ಮೊದಲ ಎರಡು ಕಿಲೋಮೀಟರ್‌ಗಳಿಗೆ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಮತ್ತು ಪ್ರತಿ ಕಿಲೋಮೀಟರ್‌ಗೆ ಮೂಲ ಬೆಲೆಯನ್ನು ₹ 13 ರಿಂದ 15 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ