ಬೆಂಗಳೂರಿನಲ್ಲಿ 51 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ: ಆತಂಕ ವ್ಯಕ್ತಪಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ
ಬೆಂಗಳೂರು ಮಹಾನಗರದಲ್ಲಿ ಆಗಸ್ಟ್ 30, 31 ರಲ್ಲಿ ತುಂಬಾ ಮಳೆ ಬಂದಿದ್ದು, ನಿನ್ನೆ ತುಂಬಾ ಮಳೆ ಬಂದಿದ್ದು ಮಹಾದೇವಪುರ ಭಾಗದಲ್ಲಿ ತುಂಬಾ ಹಾನಿಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರು (Bengaluru) ಮಹಾನಗರದಲ್ಲಿ ಆಗಸ್ಟ್ 30, 31 ರಲ್ಲಿ ತುಂಬಾ ಮಳೆ ಬಂದಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಮಹಾದೇವಪುರ ಭಾಗದಲ್ಲಿ ತುಂಬಾ ಹಾನಿಯಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ (BBMP Commissioner) ತುಷಾರ್ ಗಿರಿನಾಥ್ ಹೇಳಿದ್ದಾರೆ. ನಗರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಅವರು 1971 ರಿಂದ ಇದೂವರೆಗೂ ನಿನ್ನೆ ಸುರಿದ ಮಳೆಯೇ ದಾಖಲೆ ಸೃಷ್ಠಿಯಿಸಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ 313 ಎಂಎಂ ಮಳೆ ಬರುತ್ತೆ, ಆದರೆ ಈ ಬಾರಿ 709 ಎಂಎಂ ಮಳೆ ಬಂದಿದೆ ಎಂದು ತಿಳಿಸಿದರು.
51 ವರ್ಷದಲ್ಲಿ ದಾಖಲೆಯ ಮಳೆಯಾಗಿದೆ. ಮಹಾದೇವಪುರದಲ್ಲಿ 28 ಕಡೆ ಮಳೆ ನೀರು ನುಗ್ಗಿದೆ. ಬೊಮ್ಮನಹಳ್ಳಿಯಲ್ಲಿ 9 ಕಡೆ ಹಾನಿಯಾಗಿದೆ. ಬೆಳ್ಳಂದೂರು ಕೆರೆ ತುಂಬಿದೆ, ವಿಭೂತಿಪುರ ಕೆರೆ ತುಂಬಿದೆ, ಬೇಗೂರು ಕೆರೆ ತುಂಬುತ್ತಿದೆ. ಔಟರ್ ರಿಂಗ್ ರೋಡ್ ನಲ್ಲಿ ಈಗಲೂ ನೀರು ಇದೆ. ಸಾವಳಕೆರೆ ನೀರು ಡೈವರ್ಟ್ ಮಾಡಿದರೂ ಬರ್ತಾಯಿದೆ ಎಂದರು.
75 ವರ್ಷಗಳಲ್ಲಿ ಈ ರೀತಿ ನೆರೆ ಬಂದಿದೆ – ಸಿಎಂ ಬೊಮ್ಮಾಯಿ
ಮಂಡ್ಯ: ನಿನ್ನೆ ರಾತ್ರಿ (ಆ 4) ನದಿ ಪ್ರವಾಹದಿಂದ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಎಂ ಬೊಮ್ಮಾಯಿ ಟಿ.ಕೆ.ಹಳ್ಳಿ ಜಲಮಂಡಳಿ ಘಟಕ ಪರಿಶೀಲಿಸಿ ಮಾತನಾಡಿದ ಅವರು ನಿನ್ನೆ ರಾತ್ರಿ ಮಳೆಯಿಂದ ಟಿ.ಕೆ.ಹಳ್ಳಿ ವ್ಯಾಪ್ತಿಯಲ್ಲಿ ಹಾನಿಯಾಗಿದೆ. ಟಿ.ಕೆ.ಹಳ್ಳಿಯ ನೀರಿನ ಘಟಕಕ್ಕೆ ಮಳೆಯ ನೀರು ನುಗ್ಗಿದೆ ಎಂದು ಹೇಳಿದರು.
ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕೆಲಸ ಆಗುತ್ತಿದೆ. ಬೆಂಗಳೂರಿನ ಜನರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಜಲಮಂಡಳಿ ಘಟಕದಿಂದ ನೀರು ಹೊರ ಹಾಕುವ ಕೆಲಸ ಆಗುತ್ತಿದೆ. ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳಿಗೆ ನಾನು ಸೂಚಿಸಿದ್ದೇನೆ. ಮುಂದೆ ಈ ರೀತಿ ಆಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಾಳೆ, ನಾಡಿದ್ದು ಮಳೆಯಾದರೆ ಯಾವ ಕ್ರಮ ಆಗಬೇಕೆಂದು ಸರ್ವೆ ಮಾಡಲಾಗುತ್ತದೆ. 75 ವರ್ಷದಿಂದ ಬರದಿರುವ ನೀರು ಇಲ್ಲಿಗೆ ಬಂದಿದೆ. ಇದುವರೆಗೂ ಬರದಂತಹ ಪ್ರವಾಹ ಈ ಬಾರಿ ಬಂದಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Mon, 5 September 22