ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು (Bengaluru) ನಗರದಲ್ಲಿ ರೋಡ್ ರೇಜ್ (Road Rage) ಪ್ರಕರಣ ನಿಲ್ಲುತ್ತಿಲ್ಲ. ಕಾರು (Car) ಟಚ್ ಆಯ್ತು ಅಂತ ಇಬ್ಬರು ಚಾಲಕರ ಮಧ್ಯೆ ಗಲಾಟೆ ನಡೆದಿದೆ. ಸೆಪ್ಟಂಬರ್ 5 ರಂದು ವೈಟ್ ಪಿಲ್ಡ್ನ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಗಲಾಟೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನ ಸಿಟಿಜನ್ಸ್ ಮೂಮೆಂಟ್ಸ್, ಈಸ್ಟ್ ಬೆಂಗಳೂರು ಖಾತೆ ಟ್ವೀಟ್ ಮಾಡಿ, ಘಟನೆಯನ್ನು ವಿವರಿಸಿದೆ.
ಧನುಶ್ ಎಂಬುವರು ಶಾಂತಿನಿಕೇತನ ಅಥವಾ ಬಿಗ್ ಬಜಾರ್ ಸ್ಟಾಪ್ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಹೆಚ್ಚಿನ ಟ್ರಾಫಿಕ್ ನಡುವೆಯೇ ಧನುಶ್ ಅವರು ಎದುರಿಗಿದ್ದ ಕಾರನ್ನು ಓವರ್ ಟೆಕ್ ಮಾಡಲು ಮುಂದಾಗಿದ್ದಾರೆ. ಆದರೆ, ಕಾರು ಚಾಲಕ ಇವರಿಗೆ ದಾರಿ ಬಿಡಲಿಲ್ಲ. ಕೊನೆಗೆ ಧನುಶ್ ಕಾರನ್ನು ಅನ್ನು ಓವರ್ ಟೆಕ್ ಮಾಡಿ ಮುಂದೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಧನುಶ್ ಅವರನ್ನೇ ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಓವರ್ ಟೆಕ್ ಮಾಡಿ ಧನುಶ್ ಅವರನ್ನು ಅಡ್ಡ ಹಾಕಿದ್ದಾನೆ.
We received an extreme #RoadRage footage involving a cab driver dated 5 Aug 2024 from Whitefield. Why are people in #Bengaluru turning so intolerant? @BlrCityPolice @CPBlr
Incident as shared by the victim, @dhanushg2077:“On August 5th, 2024, I was involved in a horrifying road… pic.twitter.com/DfgxE8eA4M
— Citizens Movement, East Bengaluru (@east_bengaluru) September 9, 2024
ಕಾರಿನಿಂದ ಇಳಿದು ಧನುಶ್ ಅವರ ಬಳಿಗೆ ಬಂದು, ನಿನ್ನ ಕಾರು ನನ್ನ ಕಾರಿಗೆ ಟಚ್ ಆಗಿದೆ ಎಂದು ಜಗಳ ತೆಗೆದಿದ್ದಾನೆ. ಆಗ ಧನುಶ್ ಪೊಲೀಸ್ ಠಾಣೆಗೆ ಹೋಗೋಣ ನಡಿ ಎಂದಿದ್ದಾರೆ. ಧನುಶ್ ಅವರ ಮಾತು ಆಲಿಸದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ಕಾರಿನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ. ಬಳಿಕ ಧನುಶ್ ಅವರ ಕಾರಿನ ಕಿಟಕಿಯ ಮೂಲಕ ಒಳಗೆ ಕೈ ಹಾಕಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಧನುಶ್ ಪೆಪ್ಪರ್ ಸ್ಪ್ರೇನಿಂದ ಕಾರು ಚಾಲಕನಿಗೆ ಸ್ಪ್ರೇ ಮಾಡಿದ್ದಾರೆ.
ಇದನ್ನೂ ಓದಿ: ಎಸ್ಎಂವಿಟಿ ರೈಲು ನಿಲ್ದಾಣದಲ್ಲಿ ಹೊಸ ನಿಯಮ ಜಾರಿ, ಪ್ರಯಾಣಿಕರಿಗೆ ಸಂಕಷ್ಟ
ಬಳಿಕ, ಕಾರು ಚಾಲಕ ತನ್ನ ಕಾರಿನಲ್ಲಿದ್ದ ಸ್ಕ್ರೂ ಡೈವ್ ತಂದು ಕಿಟಕಿಯ ಗ್ಲಾಸಗೆ 3-4 ಬಾರಿ ಹೊಡೆದಿದ್ದಾನೆ. ಬಳಿಕ, ಸ್ಕ್ರೂ ಡೈವ್ ಮೂಲಕ ಕಾರಿನ ಬಾನೆಟ್, ಮಿರರ್ ಡ್ಯಾಮೇಜ್ ಮಾಡಿದ್ದಾನೆ. ಕೊನೆಗೆ ಧನುಶ್ ಮನೆಗೆ ಹೋಗಿ ತಮ್ಮ ಕಾರನ್ನು ಚೆಕ್ ಮಾಡಿದಾಗ, ಕಾರಿನ ಮೇಲೆ ಯಾವುದೇ ಸ್ಕ್ರ್ಯಾಚ್ ಇರಲಿಲ್ಲ. ಕಾರು ಚಾಲಕ ಬೇಕಂತಲೇ ಈ ರೀತಿ ಮಾಡಿದ್ದಾನೆ ಎಂದು ಎಕ್ಸ್ನ ಸಿಟಿಜನ್ಸ್ ಮೂಮೆಂಟ್ಸ್, ಈಸ್ಟ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ಘಟನೆಯ ಎಲ್ಲ ದೃಶ್ಯಗಳು ಧನುಶ್ ಅವರ ಕಾರಿನ ಡ್ಯಾಶ್ ಕ್ಯಾಮೆರದಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ