AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಶಂಕಿತ ಉಗ್ರ ಜುನೈದ್​​ ಸಹಚರನ ಬಂಧನ; ಸಿನಿಮೀಯ ರೀತಿಯಲ್ಲಿ ​ಆರೋಪಿಯ​ನ್ನ ಲಾಕ್​ ಮಾಡಿದ ಪೊಲೀಸರು

ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಸಿಸಿಬಿ‌ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಸಿದ್ದರು. ಈ ಐವರಿಗೆ ಶಂಕಿತ ಉಗ್ರ ಜುನೈದ್​​ ವಿದೇಶದಿಂದ ಗ್ರೆನೇಡ್​​ ಕಳಿಸಿದ್ದನು. ಸದ್ಯ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈತನ ಸಹಚರ ಮೊಹಮ್ಮದ್ ಅರ್ಷದ್ ಖಾನ್​​​ನನ್ನು ಆರ್​​.ಟಿ ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಶಂಕಿತ ಉಗ್ರ ಜುನೈದ್​​ ಸಹಚರನ ಬಂಧನ; ಸಿನಿಮೀಯ ರೀತಿಯಲ್ಲಿ ​ಆರೋಪಿಯ​ನ್ನ ಲಾಕ್​ ಮಾಡಿದ ಪೊಲೀಸರು
ಬಂಧಿತ ಮೊಹಮ್ಮದ್ ಅರ್ಷದ್ ಖಾನ್ ನನ್ನು ಠಾಣೆಗೆ ಕರೆತರುತ್ತಿರುವ ಪೊಲೀಸರು
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 29, 2023 | 12:45 PM

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರ (Suspected Terrorist) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎ-2 ಆರೋಪಿಯಾಗಿರುವ ಜುನೈದ್ ​​ಸಹಚರನನ್ನು ಆರ್​. ಟಿ.ನಗರ ಪೊಲೀಸರು (Police) ಬಂಧಿಸಿದ್ದಾರೆ. ಜುನೈದ್​​ ಸಹಚರ ಮೊಹಮ್ಮದ್ ಅರ್ಷದ್ ಖಾನ್ ಬಂಧಿತ ಆರೋಪಿ. ಈ ಮೊಹಮ್ಮದ್ ಅರ್ಷದ್ ಖಾನ್ 2017 ರಲ್ಲಿ ನೂರ್ ಅಹಮ್ಮದ್ ಎಂಬಾತ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಪ್ರಕರಣದ ಆರೋಪಿಯಾಗಿದ್ದು, ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದನು.

ಈ ವೇಳೆ ಮೊಹಮ್ಮದ್ ಅರ್ಷದ್ ಖಾನ್ ಅಪ್ರಾಪ್ತನಾಗಿದ್ದು, ಸಾಕಷ್ಟು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಕೊಲೆ, ಕೊಲೆಯತ್ನ, ಕಳ್ಳತನ ಸೇರಿದಂತೆ 17 ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಅರ್ಷದ್ ಖಾನ್ ಬಂಧಿಸಲು ಆರ್.ಟಿ.ನಗರ ಪೊಲೀಸ್​ ಠಾಣೆಯ ಪಿಎಸ್ಐ ವಿನೋದ್ ನಾಯಕ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣ: ನಜಿರ್​​ಗೆ ಹಣ ತಲುಪಿಸುತ್ತಿದ್ದವ ಜನರಲ್ ಸ್ಟೋರ್ ಮಾಲೀಕ‌‌ !

ಈ ತಂಡಕ್ಕೆ ಆ. 27 ರ ಮುಂಜಾನೆ ಐದು ಗಂಟೆಗೆ ಅರ್ಷದ್ ಆರ್.ಟಿ.ನಗರದ ಮನೆಯೊಂದರಲ್ಲಿ ವಾಸವಾಗಿರುವ ಮಾಹಿತಿ ತಿಳಿದುಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅರ್ಷದ್ ಖಾನ್​​ ಮನೆಯನ್ನ ಸುತ್ತುವರೆದಿದ್ದಾರೆ. ನಂತರ ಆತನ ಮನೆ ಸುತ್ತಮುತ್ತಲಿನ ಸಿಸಿಟಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಪೊಲೀಸರಿಗೆ ಅರ್ಷದ್ ಮನೆಗೆ ಬಂದಿದ್ದಾನೆ ಎಂಬುದನ್ನ ಖಚಿತವಾಗಿದೆ.

ಅರ್ಷದ್ ಮನೆಯೊಳಗೆ ಇರುವುದು ಖಾತ್ರಿಯಾಗುತ್ತಿದ್ದಂತೆ ಪೊಲೀಸರು ಆಪರೇಷನ್ ಶುರು ಮಾಡಿಕೊಂಡಿದ್ದಾರೆ. ಮನೆ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡಿದ್ದ ಅರ್ಷದ್​ ಕತ್ತು ಕೊಯ್ದುಕೊಳ್ಳಲು ಮುಂದಾಗಿದ್ದಾನೆ. ಅಲ್ಲದೇ ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಮೇಲೆ ಹೋಗುತ್ತಿರುವಾಗ ಪೊಲೀಸರು ಆತನನ್ನು ಅಡ್ಡಗಟ್ಟಿ ‌ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆಗಸ್ಟ್​​. 27 ರಂದು ಮೊಹಮ್ಮದ್ ಹರ್ಷದ್ ಖಾನ್ ಎಂಬಾತನನ್ನ ಬಂಧಿಸಲಾಗಿದೆ. ಪೊಲೀಸರು ಬಂಧನಕ್ಕೆ ತೆರಳಿದ್ದಾಗ ಹಲ್ಲೆಗೆ ಮುಂದಾಗಿದ್ದನು. ಪೊಲೀಸರು ಬಂಧನಕ್ಕೆ ತೆರಳಿದ್ದಾಗ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡಿದ್ದನು. ಮೊಹಮ್ಮದ್ ಹರ್ಷದ್ 2017 ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದನು. ಈತನ ಮೇಲೆ 17 ಕೇಸ್​ಗಳಿವೆ.  2017 ರಲ್ಲಿ ನಡೆದ ಕೊಲೆ ಕೇಸ್​​ನಲ್ಲಿ ಜುನೈದ್ ಜೊತೆಗೆ ಈತನು ಇದ್ದನು. ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೆ ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ‌ ತಿಳಿದುಬಂದಿಲ್ಲ ಎಂದು  ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.

ಯಾರು ಈ ಶಂಕಿತ ಉಗ್ರ ಜುನೈದ್​​

ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಸಿಸಿಬಿ‌ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಸಿದ್ದರು. ಈ ಐವರಿಗೆ ಶಂಕಿತ ಉಗ್ರ ಜುನೈದ್​​ ವಿದೇಶದಿಂದ ಐವರಿಗೆ ಗ್ರೆನೇಡ್​​ ಕಳಿಸಿದ್ದನು. ಸದ್ಯ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಜುನೈದ್ ಅಹ್ಮದ್ ಪತ್ತೆಗೆ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:42 am, Tue, 29 August 23