ಡ್ರಂಕ್ ಡ್ರೈವ್: ಬೆಂಗಳೂರಿನ 118 ಶಾಲಾ ಬಸ್ ಚಾಲಕರ ವಿರುದ್ಧ ಕೇಸ್​, ಪರವಾನಗಿ ರದ್ದು

|

Updated on: Nov 11, 2024 | 12:45 PM

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಅಂತ ಸಂಚಾರಿ ಪೊಲೀಸರು ಎಷ್ಟೇ ಸೂಚನೆ ನೀಡಿದರೂ, ಜನ ಸೂಚನೆ ಪಾಲಿಸದೆ ಎಣ್ಣೆ ಮತ್ತಿನಲ್ಲಿ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಹೀಗಾಗಿ, ಬೆಂಗಳೂರು ನಗರ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ನಿತ್ಯ ನೂರಾರು ವಾಹನ ಸವರಾರರನ್ನು ತಪಾಸಣೆ ನಡೆಸುತ್ತಿದ್ದಾರೆ.

ಡ್ರಂಕ್ ಡ್ರೈವ್: ಬೆಂಗಳೂರಿನ 118 ಶಾಲಾ ಬಸ್ ಚಾಲಕರ ವಿರುದ್ಧ ಕೇಸ್​, ಪರವಾನಗಿ ರದ್ದು
ಪೊಲೀಸರ ತಪಾಸಣೆ
Follow us on

ಬೆಂಗಳೂರು, ನವೆಂಬರ್​​​ 11: ಬೆಂಗಳೂರಿನಲ್ಲಿ (Bengaluru) ಕಳೆದ 10 ತಿಂಗಳ ಅವಧಿಯಲ್ಲಿ 118 ಶಾಲಾ ವಾಹನ ಚಾಲಕರ ವಿರುದ್ಧ ಡ್ರಂಕ್​ & ಡ್ರೈವ್ (Drunk & Drive)​ ಕೇಸ್ ದಾಖಲಾಗಿದೆ. ಈ ಎಲ್ಲ ಚಾಲಕರ ವಾಹನ ಚಾಲನೆ ಪರವಾನಿಗಿ (ಲೈಸನ್ಸ್​) ರದ್ದುಪಡಿಸಲಾಗಿದೆ. ಜನವರಿಯಲ್ಲಿ 16​, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್​ನಲ್ಲಿ 26, ಸೆಪ್ಟೆಂಬರ್​ನಲ್ಲಿ 22, ನವೆಂಬರ್​ನಲ್ಲಿ 24 ಪ್ರಕರಣ ದಾಖಲಾಗಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ತಿಳಿಸಿದ್ದಾರೆ.

ಕಳೆದ 10 ತಿಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ನಿಯಮ ಮೀರಿ ಬಸ್​ನಲ್ಲಿ ಹೆಚ್ಚುವರಿ ಶಾಲಾ ಮಕ್ಕಳ ಸಾಗಾಟ ಮಾಡಿದ್ದು ಕೂಡ ತಿಳಿದು ಬಂದಿದೆ. ಈ ಕುರಿತು ಪ್ರಕರಣ ​ದಾಖಲಾಗಿದೆ.

ಕಾಂಟ್ರ್ಯಾಕ್ಟ್ ಶಾಲಾ ವಾಹನಗಳ ಚಾಲಕರಿಂದಲೇ ಹೆಚ್ಚು ರೂಲ್ಸ್​ ಬ್ರೇಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀರು ಆಯಾ ಶಾಲಾ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.

ಇದನ್ನೂ ಓದಿ: ಶಿವಾಜಿನಗರದ ಈ ರಸ್ತೆಗಳಲ್ಲಿ 30 ದಿನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಇಲ್ಲಿದೆ

1 ವಾರದಲ್ಲಿ 794 ಕೇಸ್​

ಬೆಂಗಳೂರು ನಗರ ಸಂಚಾರಿ ಪೊಲೀಸರು ನವೆಂಬರ್​ 4 ರಿಂದ 10ರವರೆಗೆ ಮದ್ಯಪಾನಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರುಗಳ ವಿರುದ್ಧ ಮತ್ತು ಅತಿವೇಗ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಗರದ 50 ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದಾರೆ.

  • ಪರಿಶೀಲಿಸಲಾದ ವಿವಿಧ ಮಾದರಿಯ ವಾಹನಗಳ ಸಂಖ್ಯೆ:- 53680
  • ದಾಖಲಿಸಿದ ಒಟ್ಟು ಪ್ರಕರಣಗಳ ಸಂಖ್ಯೆ:- 794
  • ಅತಿವೇಗದಿಂದ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಚರಣೆಯಲ್ಲಿ ದಾಖಲು ಮಾಡಿರುವ ಪ್ರಕರಣಗಳ ಸಂಖ್ಯೆ:- 205
  • ಸಂಗ್ರಹಿಸಿ ದಂಡದ ಮೊತ್ತ: 218000 ರೂ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:26 pm, Mon, 11 November 24