ಎಷ್ಟೋ ಜನರಿಗೆ ತಾವು ಇಷ್ಟಪಟ್ಟು ಮಾಡಿಕೊಂಡು ಬರುವ ಹವ್ಯಾಸವೇ ಕೆಲವೊಮ್ಮೆ ವೃತ್ತಿಯಾಗಿಬಿಡುತ್ತದೆ. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸತ್ತವರು ಏನಾದರೂ ಹೊಸತನ್ನು ಮಾಡಬೇಕೆಂದು ದಿಟ್ಟ ನಿರ್ಧಾರ ಮಾಡುತ್ತಾರೆ. ಈ ರೀತಿ ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡುವವರಿಗೆ ಕೊಂಚ ಹೆಚ್ಚೇ ಧೈರ್ಯ ಬೇಕು. ಬೆಂಗಳೂರಿನ (Bangalore News) ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ (MNC) ಕೆಲಸ ಮಾಡುವ ಉದ್ಯೋಗಿಗಳಿಗೆ ಸ್ವಲ್ಪ ಸಮಯವಾದ ನಂತರ ಈ ಐಟಿ ಕೆಲಸ ಸಾಕಪ್ಪಾ ಸಾಕು ಎನಿಸಿಬಿಡುವುದುಂಟು. ಹೀಗೆ ಸಾಕಷ್ಟು ಜನರಿಗೆ ಅನಿಸಿದರೂ ಅವರು ಆ ಕಂಫರ್ಟ್ ಜೋನ್ನಿಂದ, ಉತ್ತಮ ಸಂಬಳದಿಂದ ದೂರ ಸರಿಯಲು ಕೊಂಚ ಹಿಂದೇಟು ಹಾಕುತ್ತಾರೆ. ಆದರೆ, ಕೆಲವರು ದುಡ್ಡಿಗಿಂತಲೂ ನೆಮ್ಮದಿ ಮುಖ್ಯ ಎಂದು ಗಟ್ಟಿ ನಿರ್ಧಾರ ಮಾಡಿದವರಿದ್ದಾರೆ.
ಜೀವನದ ಸಣ್ಣ ಸಂತೋಷಗಳನ್ನು ಬದಿಯಲ್ಲಿ ಹುಡುಕಲು ನಿರ್ಧರಿಸಿದ ಹಲವು ಘಟನೆಗಳ ಉದಾಹರಣೆಗಳು ಇಂಟರ್ನೆಟ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಬೆಂಗಳೂರಿನ ನಿಖಿಲ್ ಸೇಠ್ ಎಂಬ ಟ್ವಿಟ್ಟರ್ ಬಳಕೆದಾರರು ತಮ್ಮ ಬೆಂಗಳೂರಿನ ಜೀವನದಲ್ಲಿನ ಒಂದು ವಿಚಿತ್ರ ಘಟನೆಯನ್ನು ಹಂಚಿಕೊಂಡಿದ್ದಾರೆ. ನೀವು ಬೆಂಗಳೂರಿನಲ್ಲಿ ವಾಸವಾಗಿಲ್ಲ ಎಂದರೆ ಜನರು ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಒಂದುವೇಳೆ ನೀವು ಈಗಾಗಲೇ ಬೆಂಗಳೂರಿನಲ್ಲಿ ವಾಸವಾಗಿದ್ದರೆ ಅದೇನೂ ದೊಡ್ಡ ವಿಷಯವಲ್ಲ ಎಂದು ಜನ ಭಾವಿಸುತ್ತಾರೆ. ಈಗಂತೂ ಯಾರನ್ನು ಕೇಳಿದರೂ ಬೆಂಗಳೂರಿನಲ್ಲಿ ಇದ್ದೇವೆ ಎಂದು ಹೇಳುವವರೇ ಜಾಸ್ತಿ. ಹೀಗಾಗಿ, ಬೆಂಗಳೂರೆಂಬುದು ಕೋಟ್ಯಂತರ ಉದ್ಯೋಗಿಗಳ ವಲಸೆ ನಗರವಾಗಿದೆ.
ಇದನ್ನೂ ಓದಿ: Viral News: ತಮ್ಮ 600 ಕೋಟಿ ರೂ. ಆಸ್ತಿಯನ್ನು ಸರ್ಕಾರದ ಹೆಸರಿಗೆ ಬರೆದ ವೈದ್ಯ; ಯಾರಿವರು?
ಈ ನಿಖಿಲ್ ಸೇಠ್ ಇತ್ತೀಚೆಗೆ ತಮಗೆ ಬೇಕಾದ ಸ್ಥಳಕ್ಕೆ ಹೋಗಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಆ ಚಾಲಕನೊಂದಿಗೆ ಮಾತನಾಡುವಾಗ ಆತ ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂಬುದು ತಿಳಿದು ಶಾಕ್ ಆದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುವವರು ಹೀಗೆ ಯಾಕೆ ರ್ಯಾಪಿಡೋ ಬೈಕ್ ಓಡಿಸುತ್ತಿದ್ದಾರೆ? ಎಂಬುದು ಅವರಿಗೆ ಆಶ್ಚರ್ಯವಾಯಿತು. ಈ ಬಗ್ಗೆ ನಿಖಿಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
My Rapido Driver today was an SDET at Microsoft & he told me that he drives just to talk to people and as a hobby on weekends. @peakbengaluru
— Nikhil Seth (@NikhilSSeth) July 24, 2022
ಆ ರ್ಯಾಪಿಡೋ ಬೈಕ್ ಡ್ರೈವರ್ ವಾರದ 5 ದಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವೀಕೆಂಡ್ನ 2 ದಿನ ಹವ್ಯಾಸವಾಗಿ ರ್ಯಾಪಿಡೋ ಓಡಿಸುತ್ತಿದ್ದಾರೆ. ವಾರವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಅವರು ವೀಕೆಂಡ್ನಲ್ಲಿ ರ್ಯಾಪಿಡೋ ಓಡಿಸಿದರೆ ಜನರೊಂದಿಗೆ ಬರೆಯಬಹುದು, ಅವರೊಂದಿಗೆ ಮಾತನಾಡಬಹುದು ಎಂಬ ಕಾರಣಕ್ಕೆ ಇಷ್ಟಪಟ್ಟು ಈ ಕೆಲಸ ಮಾಡುತ್ತಿದ್ದಾರೆ.
Once my cab driver said he is a businessman and drives 3-4times a week just because his kids are too busy to talk to him!
Damn!! I was speechless
— Saloni Mittal (@whysaloni) July 24, 2022
ಈ ಟ್ವಿಟ್ಟರ್ ಪೋಸ್ಟ್ ಸುಮಾರು 1 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಕೆಲವರು ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದರೆ ಇನ್ನು ಕೆಲವರು ಇದನ್ನು ಓವರ್ ಬಿಹೇವಿಯರ್ ಎಂದು ಟೀಕಿಸಿದ್ದಾರೆ. ನೀವೇನಂತೀರಿ?