ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ಪೊಲೀಸರಿಗೆ ದೂರು ಕೊಟ್ಟವನೇ ಸಿಕ್ಕಿಬಿದ್ದ, ವಿಕೃತ ಕಾಮಿಯ ನವರಂಗಿ ಆಟ ಬಯಲು

ಈ ಆರೋಪಿಯ ಕಾಮಚೇಷ್ಟೆ ತಿಳಿದರೆ ಎಂತವರು ಕೂಡ ಅಸಹ್ಯ ಎನ್ನದೆ ಸುಮ್ಮನಿರಲಾರರು. ಏಕೆಂದರೆ ಇವನು ಖಾಸಗಿ ಫೋಟೋಗಳನ್ನು ಫೋಸ್ಟ್ ಮಾಡಿ ಅದಕ್ಕೆ ಬರುವ ಕಮೆಂಟ್ ನಿಂದ ಸುಖ ಪಡುತ್ತಿದ್ದನಂತೆ. ಸದ್ಯ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ಪೊಲೀಸರಿಗೆ ದೂರು ಕೊಟ್ಟವನೇ ಸಿಕ್ಕಿಬಿದ್ದ, ವಿಕೃತ ಕಾಮಿಯ ನವರಂಗಿ ಆಟ ಬಯಲು
ಅಂಜಯ್ ಬಂಧಿತ ಆರೋಪಿ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Oct 11, 2023 | 9:04 AM

ಬೆಂಗಳೂರು, ಅ.11: ತನ್ನ ಪ್ರಿಯತಮೆಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲಾಗಿದೆ. ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ (Arrest). ಈ ಆರೋಪಿಯ ಕಾಮಚೇಷ್ಟೆ ತಿಳಿದರೆ ಎಂತವರು ಕೂಡ ಅಸಹ್ಯ ಎನ್ನದೆ ಸುಮ್ಮನಿರಲಾರರು. ಏಕೆಂದರೆ ಇವನು ಖಾಸಗಿ ಫೋಟೋಗಳನ್ನು ಫೋಸ್ಟ್ ಮಾಡಿ ಅದಕ್ಕೆ ಬರುವ ಕಮೆಂಟ್ ನಿಂದ ಸುಖ ಪಡುತ್ತಿದ್ದನಂತೆ. ಸದ್ಯ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿ ಜೊತೆಗೆ ಈತನ 12 ಜನ ಸ್ನೇಹಿತರು ಕೂಡ ಇದೇ ಮನಸ್ಸಿನವರು. ಇವರೆಲ್ಲ ಟೆಲಿಗ್ರಾಮ್​ನಲ್ಲಿ d3vil-official ಮತ್ತು discord ಎಂಬ ಹೆಸರಿನ ಗ್ರೂಪ್ ಮಾಡಿಕೊಂಡಿದ್ದರು. ಆ ಗ್ರೂಪ್​ನಲ್ಲಿ ತಮ್ಮ ತಮ್ಮ ಪ್ರಿಯತಮೆ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಹಾಕುತ್ತಿದ್ದರು. ಹೀಗೆ ಸುಮಾರು ನೂರಕ್ಕು ಹೆಚ್ಚು ಯುವತಿಯರ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ @thediyahouse, @denofd3vil, @houseofd3vil, @heavenbyd3vil2 ಹೆಸರಿನ ಇನ್ಸ್ಟಾಗ್ರಾಮ್ ಖಾತೆ ತೆಗೆದು ಅದರಲ್ಲೂ ಅಪ್ಲೋಡ್ ಮಾಡಿದ್ದಾರೆ. ಫೋಟೋಗಳಿಗೆ ಬರುತ್ತಿದ್ದ ಅಸಹ್ಯ ಕಮೆಂಟ್​ಗಳನ್ನು ಓದಿ ಈ ಕಾಮುಕರು ಸುಖಿಸುತ್ತಿದ್ದರು ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಿಯಕರನ ನವರಂಗಿ ಆಟಕ್ಕೆ ಮೋಸ ಹೋದ ಯುವತಿ

ಇನ್ನೇನು ಆರೋಪಿ ಅಂಜಯ್ ಜೊತೆ ಮದುವೆ ಆಗಬೇಕು ಎಂಬ ಯೋಚನೆಯಲ್ಲಿದ್ದಾಗಲೇ ಪ್ರಿಯತಮೆಗೆ ತನ್ನ ಪ್ರೀಮಿಯ ನವರಂಗಿ ಆಟ ಗೊತ್ತಾಗಿದೆ. ತಮಿಳುನಾಡು ವೆಲ್ಲೂರು ಮೂಲದ ಅಂಜಯ್ ಹಾಗೂ ಯುವತಿ ಇಬ್ಬರೂ ಒಂದೇ ಊರಿನವರಾಗಿದ್ದರು. 10ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ರು. ಬಿ.ಪ್ಲಾನಿಂಗ್ ಅನ್ನೋ ಕೋರ್ಸ್ ಮಾಡಿದ್ದ ಇವರು ನಂತರ ಬೆಂಗಳೂರಿಗೆ ಬಂದು ಒಟ್ಟಿಗೆ ವಾಸವಾಗಿದ್ದರು. ಇವರ ಪ್ರೀತಿ ವಿಚಾರ ಎರಡು ಕುಟುಂಬಸ್ಥರಿಗೂ ಗೊತ್ತಿತ್ತು. ಅಲ್ಲದೇ ಮದುವೆ ಮಾಡಿಸುವ ತಯಾರಿ ಕೂಡ ಮಾಡಿಕೊಂಡಿದ್ರು.

ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ರೇಡ್ ಮಾಡುವ ಬೆದರಿಕೆ: ಹಣಕ್ಕೆ ಬೇಡಿಕೆ ಇಟ್ಟ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸ್ರು

2021ರಲ್ಲಿಯೂ ಇನ್ಸ್ಟಾಗ್ರಾಮ್​ನಲ್ಲಿ ಯುವತಿ ಫೋಟೋ ಷೇರ್ ಆಗಿತ್ತು. ಆಗ ರಿಪೋರ್ಟ್ ಮಾಡಿ ಫೋಟೋ ತೆಗಿಸಲಾಗಿತ್ತು. ಮತ್ತೆ 2023 ಜೂನ್ ನಲ್ಲಿ ಯುವತಿಯ ಫೋಟೋ ಷೇರ್ ಆಗಿತ್ತು. ಆಗ ಈ ವಿಚಾರವನ್ನು ಯುವತಿ ತನ್ನ ಪ್ರಿಯತಮ ಅಂಜಯ್​ಗೆ ಹೇಳಿದ್ದಳು. ಯುವತಿ ಜೊತೆಗೆ CEN ಪೊಲೀಸ್ ಠಾಣೆಗೆ ಬಂದು ಆರೋಪಿ ಪತ್ತೆ ಮಾಡಿ ಫೋಟೋ ಡಿಲಿಟ್ ಮಾಡಿಸಿ ಎಂದು ಆರೋಪಿ ಅಂಜಯ್ ಪರಿ ಪರಿಯಾಗಿ ಪೊಲೀಸರ ಬಳಿ ಬೇಡಿಕೊಂಡಿದ್ದ. ಆತನ ಡ್ರಾಮಾ ನೋಡಿ ಯುವತಿ ಕಣ್ಣೀರು ಹಾಕಿದ್ದಳು. ತನ್ನ ಪ್ರಿಯಕರನಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ ಎಂದು ಖುಷಿ ಪಟ್ಟಿದ್ದಳು. ಆದರೆ ಈಗ ಕಾಮುಕನ ನವರಂಗಿ ಆಟ ಬಯಲಾಗಿದೆ.

ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ದ ಆಗ್ನೇಯ ವಿಭಾಗ ಸೆನ್ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಯ ವಿಕೃತ ಕಾಮ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಂಧಿಸಿ ಜೈಲಿಗಟ್ಟಲಾಗಿದೆ. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಾಗಿದ್ದು ಆರೋಪಿ BOT ಅನ್ನುವ ಅಪ್ಲಿಕೇಶನ್ ಡೆವಲಪ್ ಮಾಡ್ತಿದ್ದನಂತೆ. ಆ ಅಪ್ಲಿಕೇಶನ್​ನಲ್ಲಿ ಯಾರದ್ದೇ ಫೋಟೋ ಹಾಕಿದ್ರು ಬೆತ್ತಲೆಯಾಗಿ ತೋರಿಸುತ್ತಂತೆ. ಅದೇ ರೀತಿ ಸ್ನೇಹಿತೆ, ಸಂಬಂಧಿಕರ ಫೋಟೋ ಹಾಕಿ ಬೆತ್ತಲೆ ಚಿತ್ರ ನೋಡಿ‌ ವಿಚಿತ್ರ ಸುಖ ಪಡ್ತಿದ್ದ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್