10 ನಿಮಿಷದಲ್ಲಿ ಆಹಾರ ಡೆಲಿವೆರಿ ಮಾಡುತ್ತೆ ಬೆಂಗಳೂರಿನ ಸ್ವಿಶ್​ ಕಂಪನಿ

ಬೆಂಗಳೂರು ಮೂಲದ ಸ್ವಿಶ್ ಎಂಬ ಸ್ಟಾರ್ಟಪ್​​ ಕಂಪನಿಯೊಂದು 10 ನಿಮಿಷಗಳಲ್ಲಿ ಆಹಾರ ಡೆಲೆವರಿ ಮಾಡುವುದಾಗಿ​ ಭರವಸೆ ನೀಡಿದೆ. ಈ ಹೇಳಿಕೆಗೆ ಕಂಪನಿಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪರ-ವಿರೋಧದ ಕಾಮೆಂಟ್​ ಮಾಡಿದ್ದಾರೆ.

10 ನಿಮಿಷದಲ್ಲಿ ಆಹಾರ ಡೆಲಿವೆರಿ ಮಾಡುತ್ತೆ ಬೆಂಗಳೂರಿನ ಸ್ವಿಶ್​ ಕಂಪನಿ
ಸ್ವಿಶ್​ ಕಂಪನಿ ಸ್ಥಾಪಕ, ಸಹ ಸಂಸ್ಥಾಪಕರು

Updated on: Aug 07, 2024 | 12:30 PM

ಬೆಂಗಳೂರು (Bengaluru) ಮೂಲದ ಸ್ವಿಶ್ (Swish) ಎಂಬ ಸ್ಟಾರ್ಟ್ಅಪ್​ ಕಂಪನಿಯೊಂದು 10 ನಿಮಿಷಗಳಲ್ಲಿ ಆಹಾರ ಡೆಲಿವರಿ ಮಾಡುವುದಾಗಿ​ ಭರವಸೆ ನೀಡಿದೆ. ಈ ಹೇಳಿಕೆಗೆ ಕಂಪನಿಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪರ-ವಿರೋಧದ ಕಾಮೆಂಟ್​ ಮಾಡಿದ್ದಾರೆ. ಸ್ವೀಶ್​ ಎಂಬ ಆಹಾರ ಡೆಲೆವೆರಿ ಕಂಪನಿ ಸದ್ಯ ಹೆಚ್​ಎಸ್​ಆರ್​ ಲೇಔಟ್​​ನಲ್ಲಿ ಮಾತ್ರ ಕಾರ್ಯಪ್ರವೃತ್ತವಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮೀರಿ 10 ನಿಮಿಷಗಳಲ್ಲಿ ಆಹಾರ ಡೆಲಿವರಿ ಮಾಡುವುದಾಗಿ ಭರಸವೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

ಸ್ವಿಶ್​ ಸಹ ಸಂಸ್ಥಾಪಕ ಉಜ್ವಲ್​ ಸುಖೇಜ್​ ಮಾತನಾಡಿ, ಅನೇಕ ಯುವಕರು ಆಹಾರ ಆರ್ಡರ್​​ ಮಾಡಿ ಸುಮಾರು ಹೊತ್ತು ಕಾಯುತ್ತಾರೆ. ಹೆಚ್​ಎಸ್​ ಆರ್​ ಲೇಔಟ್​ನಲ್ಲಿನ ಹೊಟೇಲ್​ಗಳಲ್ಲಿ ದೋಸೆ ಕೆಲವೇ ನಿಮಿಷಗಳಲ್ಲಿ ದೊರೆಯುತ್ತದೆ. ಆದರೆ, ಅದೇ ದೋಸೆಯನ್ನು ಆನ್​ಲೈನ್​​ನಲ್ಲಿ ಆ​​ರ್ಡರ್​​ ಮಾಡಿ, ಅದು ನಿಮ್ಮ ಕೈ ಸೇರುವಷ್ಟರಲ್ಲಿ ಸುಮಾರು ಹೊತ್ತು ಆಗಿರುತ್ತದೆ. ಈ ಸಮಸ್ಯೆ ಬಹುತೇಕ ಯುವಕರು ಎದರಿಸುತ್ತಾರೆ. ಹೀಗಾಗಿ ಅವರ ಅನುಕೂಲಕ್ಕೆ ಸ್ವಿಶ್​​ ಆ್ಯಪ್​ ಆರಂಭಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಎಣ್ಣೆ ಹೊಡೆಯುತ್ತಾ ತ್ರಿಬಲ್​ ರೈಡಿಂಗ್​: ಬೆಂಗಳೂರಿನಲ್ಲಿ ಯುವಕರ ಜಾಲಿ ರೈಡ್​​ ​​

10 ನಿಮಿಷಗಳ ದಿನಸಿ ಅಥವಾ ಮನೆಯ ಅಗತ್ಯ ವಸ್ತುಗಳನ್ನು ವಿತರಿಸುವ ತ್ವರಿತ ವಾಣಿಜ್ಯ ವೇದಿಕೆಗಳು ಕಳೆದ ಕೆಲವು ತಿಂಗಳುಗಳಲ್ಲಿ ಅಭೂತಪೂರ್ವ ಜನಪ್ರಿಯತೆ ಗಳಿಸಿವೆ. ಆದರೆ ತ್ವರಿತಗತಿಯಲ್ಲಿ ಆಹಾರ ವಿತರಣಾ ವೇದಿಕೆಯ ಕಲ್ಪನೆಯು ಇನ್ನೂ ಅನೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ.

10 ನಿಮಿಷಗಳಲ್ಲಿ ವಿತರಿಸುವ ಆಹಾರ ಏಕೆ ಬೇಕು? ಅಷ್ಟು ಬೇಗ ವಿತರಿಸುವ ಆಹಾರವನ್ನು ಸರಿಯಾಗಿ ಬೇಯಿಸಲಾಗಿರುತ್ತದೆಯೇ? 10 ನಿಮಿಷದಲ್ಲಿ ಆಹಾರ ವಿತರಿಸುವ ದಾವಂತದಲ್ಲಿ ಡೆಲಿವರಿ ಏಜೆಂಟ್‌ಗಳು ವೇಗವಾಗಿ ಚಾಲನೆ ಮಾಡುವ ಸಾಧ್ಯತೆ ಇದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

2-3 ನಿಮಿಷಗಳಲ್ಲಿ ಆರೋಗ್ಯಕರವಾದ ಯಾವುದನ್ನೂ ಬೇಯಿಸಲಾಗುವುದಿಲ್ಲ ಅಂತ ತಿಳಿದಿರುವ ನಾನು ಇಂತಹ ಸೌಲಭ್ಯವನ್ನು ಎಂದಿಗೂ ಪಡೆಯುವುದಿಲ್ಲ ಎಂದು ಎಕ್ಸ್ ಬಳಕೆದಾರ ಆದಿತ್ಯ ಪಸುಮಾರ್ಥಿ ಕಾಮೆಂಟ್​ ಮಾಡಿದ್ದಾರೆ. ಕೆಲವು ಎಕ್ಸ್​ ಬಳಕೆದಾರರು 10 ನಿಮಿಷಗಳಲ್ಲಿ ಆಹಾರವು ಯಾರೂ ಕೇಳದ ವಿಷಯ ಎಂದರು. ಇತರರು ಇದನ್ನು ಕಾರ್ಮಿಕರ ಶೋಷಣೆ ಎಂದು ವಾಗ್ದಾಳಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

Published On - 12:21 pm, Wed, 7 August 24