Bengaluru RTO: ಶಾರ್ಟ್ಸ್​ ಧರಿಸಿ ಹೋಗಿದ್ದಕ್ಕೆ ಆರ್​ಟಿಒ ಅಧಿಕಾರಿಯಿಂದ ಬೆಂಗಳೂರಿನ ಟೆಕ್ಕಿಗೆ ಕಿರುಕುಳ

| Updated By: ಸುಷ್ಮಾ ಚಕ್ರೆ

Updated on: Jan 19, 2022 | 5:26 PM

Bangalore News: ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಹೀಗೆ ಕಿರುಕುಳಕ್ಕೊಳಗಾದ ವ್ಯಕ್ತಿಯನ್ನು ನಾಗರಬಾವಿಯಲ್ಲಿ ವಾಸವಾಗಿರುವ ನಿತೀಶ್ ರಾವ್ ಎಂದು ಗುರುತಿಸಲಾಗಿದೆ.

Bengaluru RTO: ಶಾರ್ಟ್ಸ್​ ಧರಿಸಿ ಹೋಗಿದ್ದಕ್ಕೆ ಆರ್​ಟಿಒ ಅಧಿಕಾರಿಯಿಂದ ಬೆಂಗಳೂರಿನ ಟೆಕ್ಕಿಗೆ ಕಿರುಕುಳ
ಬೆಂಗಳೂರಿನ ಟೆಕ್ಕಿ ನಿತೀಶ್ ರಾವ್
Follow us on

ಬೆಂಗಳೂರು: ಬೆಂಗಳೂರಿನಲ್ಲಿ ತನ್ನ ವಾಹನ ಚಾಲನಾ ಲೈಸೆನ್ಸ್​ (Driving Licence) ಬಗ್ಗೆ ವಿಚಾರಿಸಲು ಶಾರ್ಟ್ಸ್‌ ಧರಿಸಿ ಆರ್​ಟಿಒ ಕಚೇರಿಗೆ ಭೇಟಿ ನೀಡಿದ ಸಾಫ್ಟ್​ವೇರ್ ಇಂಜಿನಿಯರ್​ಗೆ ಆರ್‌ಟಿಒ (RTO) ಅಧಿಕಾರಿಯೊಬ್ಬರು ಕಿರುಕುಳ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಮಂಗಳವಾರ ಈ ಘಟನೆ ನಡೆದಿದೆ. ಹೀಗೆ ಕಿರುಕುಳಕ್ಕೊಳಗಾದ ವ್ಯಕ್ತಿಯನ್ನು ನಾಗರಬಾವಿಯಲ್ಲಿ ವಾಸವಾಗಿರುವ ನಿತೀಶ್ ರಾವ್ ಎಂದು ಗುರುತಿಸಲಾಗಿದೆ.

‘ಟೈಮ್ಸ್ ಆಫ್ ಇಂಡಿಯಾ’ದ ವರದಿಯ ಪ್ರಕಾರ, ಆರ್​ಟಿಓ ಕಚೇರಿಗೆ ಶಾರ್ಟ್ಸ್ ಧರಿಸಿ ಬಂದ ಆ ವ್ಯಕ್ತಿಯ ಪ್ರಕರಣವನ್ನು ನೋಡುವುದಿಲ್ಲ ಎಂದು ಆರ್‌ಟಿಒ ಹೇಳಿದರು ಎಂದು ರಾವ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

“ಆಧಾರ್ ಆಧಾರಿತ ದೃಢೀಕರಣದಲ್ಲಿ ಕೆಲವು ಸಮಸ್ಯೆ ಇದ್ದ ಕಾರಣ ನಾನು ನನ್ನ ಡ್ರೈವಿಂಗ್ ಲೈಸೆನ್ಸ್​ ಪರಿಶೀಲಿಸಲು ಆರ್‌ಟಿಒ ಕಚೇರಿಗೆ ಹೋಗಿದ್ದೆ. ಆರ್‌ಟಿಒ ಅಧಿಕಾರಿಗಳು ನನ್ನನ್ನು ಶಾರ್ಟ್ಸ್‌ನಲ್ಲಿ ನೋಡಿದಾಗ ಕೋಪಗೊಂಡರು. ಅಲ್ಲದೆ, ನನ್ನೊಂದಿಗೆ ಜಗಳವಾಡಿದರು. ನಾನು ಶಾರ್ಟ್ಸ್ ಧರಿಸಿದ್ದೆ ಎಂಬ ಕಾರಣಕ್ಕೆ ಅವರು ನನ್ನ ಕೇಸಿನ ಬಗ್ಗೆ ಯಾವುದೇ ವಿವರಗಳನ್ನು ತಿಳಿಸಲು ನಿರಾಕರಿಸಿದರು” ಎಂದು ನಿತೀಶ್ ರಾವ್ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಸಾರಿಗೆ ಆಯುಕ್ತ ಎನ್. ಶಿವಕುಮಾರ್ ಮಾತನಾಡಿ, ಆರ್​ಟಿಓದಲ್ಲಿ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದರೆ, ಇಲ್ಲಿಗೆ ಬರುವವರು ಸರಿಯಾದ ಉಡುಗೆ ಧರಿಸಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕೆಂಬುದು ನಮ್ಮ ನಿರೀಕ್ಷೆ. ಈ ಬಗ್ಗೆ ಯಾವುದೇ ಲಿಖಿತ ನಿಯಮಗಳಿಲ್ಲ. ಆದರೆ, ಸರಿಯಾದ ಬಟ್ಟೆ ಧರಿಸದವರನ್ನು ನಾವು ಎಂಟರ್​ಟೇನ್ ಮಾಡುವುದಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

ಆರ್​ಟಿಓದಲ್ಲಿ ಲೈಸೆನ್ಸ್​ ಅರ್ಜಿದಾರರಿಗೆ ಡ್ರೆಸ್ ಕೋಡ್ ಇಲ್ಲದಿರುವಾಗ ಅವರಿಗೆ ಸೇವೆಯನ್ನು ನಿರಾಕರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ನಿತೀಶ್ ರಾವ್ ಪ್ರಶ್ನಿಸಿದ್ದಾರೆ. ಆರ್‌ಟಿಒ ಸೇವೆಗಳನ್ನು ಪಡೆಯಲು ಕಚೇರಿಯಲ್ಲಿ ಯಾವುದೇ ಹೆಲ್ಪ್ ಡೆಸ್ಕ್ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ 2016ರಲ್ಲಿ ಡ್ರೈವಿಂಗ್ ಲೈಸೆನ್ಸ್ ಅರ್ಜಿದಾರರೊಬ್ಬರು ಕೋರಮಂಗಲ ಆರ್‌ಟಿಒ ಕಚೇರಿಗೆ ಶಾರ್ಟ್ಸ್‌ನಲ್ಲಿ ಭೇಟಿ ನೀಡಿದಾಗ ಇದೇ ರೀತಿಯ ಘಟನೆ ಸಂಭವಿಸಿತ್ತು.

ಇದನ್ನೂ ಓದಿ: ಬೆಂಗಳೂರಿನ ಎಂಟು ವಲಯಗಳಲ್ಲಿ ಕೊವಿಡ್ ನಿಯಂತ್ರಣಾ ಕೊಠಡಿಗಳು ಲಭ್ಯ ಬಿಬಿಎಂಪಿ ಪ್ರಕಟಣೆ

Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!