ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್​ ಪತ್ತೆ, ಸಿಸಿಬಿ ಶಾಕ್

| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2023 | 6:19 AM

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣದ 5ನೇ ಆರೋಪಿ ಮನೆಯಲ್ಲಿ 4 ಗ್ರೆನೇಡ್ ಪತ್ತೆಯಾಗಿದೆ. ಉಗ್ರನ ಮನೆಯಲ್ಲಿ ಗ್ರೆನೇಡ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್​ ಪತ್ತೆ, ಸಿಸಿಬಿ ಶಾಕ್
ಬಂಧಿತ ಶಂಕಿತ ಉಗ್ರರು
Follow us on

ಬೆಂಗಳೂರು, (ಜುಲೈ 20): ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ(suspected terrorist)ಬಂಧನ ಪ್ರಕರಣದ 5ನೇ ಆರೋಪಿ ಮನೆಯಲ್ಲಿ 4 ಗ್ರೆನೇಡ್ ಪತ್ತೆಯಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರು ತಮ್ಮ ಮನೆಯಲ್ಲಿ ಬಂಧಿತ ಶಂಕಿತ ಉಗ್ರ ಜಾಹೀದ್ ಗ್ರನೇಡ್​ ಸಂಗ್ರಹಿಸಿಟ್ಟಿರುವುದನ್ನು ಸಿಸಿಬಿ ಪತ್ತೆ ಮಾಡಿದೆ. ಕೆಮಿಕಲ್​ ಮತ್ತು ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್​ ಇಟ್ಟಿಕೊಂಡಿದ್ದು, ಈತ ಜುನೈದ್​ ಮಾತಿನಂತೆ ಪಾರ್ಸಲ್​ ಮೂಲಕ ಬಂದಿದ್ದ ಗ್ರೆನೇಡ್​ಅನ್ನು ಸೇಫ್​ ಆಗಿ ಇಟ್ಟುಕೊಂಡಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. ಜಾಹೀದ್​ಗೆ  ವಿದೇಶದಲ್ಲಿದ್ದುಕೊಂಡು ಜುನೈದ್, ಅಪರಿಚಿತ ವ್ಯಕ್ತಿಯ ಪರಿಚಯ ಮಾಡಿಸಿದ್ದು, ಆತನಿಂದಲೇ ಈ ಗ್ರೆನೇಡ್​ ಪೂರೈಕೆ ಮಾಡಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಮತ್ತೊಬ್ಬ ಶಂಕಿತ ಉಗ್ರನ ಬಗ್ಗೆ ಸಿಸಿಬಿಗೆ ಸುಳಿವು, ವಿಧ್ವಂಸಕ ಕೃತ್ಯಕ್ಕೆ ಬೇಕು ಬೇಡಗಳನ್ನು ಪೂರೈಸಿದ್ದ ಯಾರವನು?

ಇನ್ನು ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಮಾತನಾಡಿದ್ದು, ಐವರು ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದೇವೆ. 5ನೇ ಆರೋಪಿ ತಲೆಮರೆಸಿಕೊಂಡಿರುವ ಆರೋಪಿ ಜತೆ ಸಂಪರ್ಕದಲ್ಲಿದ್ದ. ಪ್ರಮುಖ ಆರೋಪಿ ನೀಡಿದ್ದ ಗ್ರೆನೇಡ್​ ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದ. ನಮ್ಮ ತಂಡ ಮನೆಗೆ ತೆರಳಿ ಪರಿಶೀಲಿಸಿದ ವೇಳೆ 4 ಗ್ರೆನೇಡ್​ ಸಿಕ್ಕಿದೆ. ಆರೋಪಿ ನೀಡಿದ ಮಾಹಿತಿ ಮೇರೆಗೆ 4 ಜೀವಂತ ಗ್ರೆನೇಡ್​ ಸಿಕ್ಕಿದೆ. 5ನೇ ಆರೋಪಿ ಮನೆಯ ಬೀರುವಿನಲ್ಲಿ ಗ್ರೆನೇಡ್​​ಗಳನ್ನು ಬಟ್ಟೆಯಲ್ಲಿ ಸುತ್ತಿ​ ಸುರಕ್ಷಿತವಾಗಿಟ್ಟಿದ್ದ. ಯಾವುದೇ ಕ್ಷಣದಲ್ಲಿ ಬೇಕಾದರೂ ಬಳಸಬಹುದಾದ 4 ಗ್ರೆನೇಡ್​ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಾಹಿತಿ ಮೇರೆಗೆ ಬಾಂಬ್ ಸ್ಕ್ವಾಡ್ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಾಗಿದೆ. ನಂತರ ಮನೆಯಲ್ಲಿ ನಾಲ್ಕು ಜೀವಂತ ಗ್ರನೇಡ್ ಸಿಕ್ಕಿದೆ. ಬೇರೊಬ್ಬ ವ್ಯಕ್ತಿಯ ಮೂಲಕ ಪಾರ್ಸಲ್ ನೀಡಲಾಗಿದೆ. ಆದು ಯಾರು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ. ಯಾವ ದಿನ ಪಾರ್ಸೆಲ್ ನೀಡಿದ್ದ ಎಂಬುದರ ಬಗ್ಗೆ ತನಿಖೆ ನಡೆದಿದ್ದು, ಸಿಸಿಬಿ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ. ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಹಿನ್ನೆಲೆ ದಾಳಿ ಮಾಡಲಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿ ಅಬ್ರಾಡ್​ನಲ್ಲಿರುವ ಮಾಹಿತಿ ಇದ್ದು, ಆರೋಪಿ ಪತ್ತೆಗಾಗಿ ಬೇರೆ ಬೇರೆ ತನಿಖಾ ಸಂಸ್ಥೆಗಳ ಸಂಪರ್ಕಿಸಿದ್ದೇವೆ ಎಂದು ತಿಳಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:10 pm, Thu, 20 July 23