ಬೆಂಗಳೂರು, ಏ.10: ದಿನಸಿ ವಸ್ತುಗಳ ಸರಬರಾಜು ಮಾಡುವ ಕಂಪನಿಗೆ ಡೆಲಿವರಿ ಬಾಯ್(Delivery Boy)ಗಳೇ ಸೇರಿಕೊಂಡು ದೋಖಾ ಮಾಡಿದ್ದಾರೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ. ಹೌದು, ಡೆಲಿವರಿ ಬಾಯ್ಗಳ ಕಳ್ಳಾಟಕ್ಕೆ ಕಂಪನಿಯ ಸೆಕ್ಯೂರಿಟಿಗಾರ್ಡ್ ಸಹ ಸಾಥ್ ನೀಡಿದ್ದಾನೆ. ಕಂಪನಿಯಿಂದ ಅನುಮಾನ ಬಂದು ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ಇನ್ನು ಈ ಘಟನೆ ಸಿನಿಮಾವೊಂದರ ಕಥೆಯಲ್ಲಿ ದೊಡ್ಡಣ್ಣನಿಗೆ ಕೊಮಲ್ ಮಾಡಿದ್ದ ಬೆಣ್ಣೆ ಮೋಸದಂತಿದೆ. ಡೆಲಿವರಿ ವೇಳೆ ನಿಗದಿತ ವಸ್ತುಗಳಿಗಿಂತ ಕಡಿಮೆ ಐಟಂಗಳನ್ನು ಡೆಲಿವರಿ ಮಾಡುತ್ತಿದ್ದ ಖದೀಮರು, ಬಳಿಕ ಕಳ್ಳಾಟದಲ್ಲಿ ಇಟ್ಟುಕೊಂಡ ವಸ್ತುಗಳನ್ನ ಬೇರೆ ಅಂಗಡಿಗೆ ಮಾರುತಿದ್ದರು.
ಈ ಕುರಿತು ಕಂಪನಿ ನೀಡಿದ ದೂರು ಹಿನ್ನಲೆ ತನಿಖೆ ನಡೆಸಿದ ಬ್ಯಾಟರಾಯನಪುರ ಪೊಲೀಸರು,ಇದೀಗ ನಾಲ್ವರನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್ಗಳಾದ ಸತೀಶ್, ಈಶ್ವರ್ ಹಾಗೂ ಸೆಕ್ಯೂರಿಟಿ ಲಕ್ಷ್ಮಣ್ ಸೇರಿದಂತೆ ನಾಲ್ವರು ಬಂಧಿತ ಆರೋಪಿಗಳು. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಕೊಡಗು ಬಿಜೆಪಿ ಸಮಾವೇಶದಲ್ಲಿ ಮಾಜಿ ಶಾಸಕರು ಸೇರಿದಂತೆ ಹಲವರ ಪರ್ಸ್ ಕಳ್ಳತನ: 13 ಬಂಧನ ಬಂಧನ
ವಿದ್ಯಾರಣ್ಯಪುರ ಹಾಗೂ ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ಗಾಗಿ ಬೈಕ್ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆಸಾಮಿಗಳನ್ನು ಬಂಧಿಸಲಾಗಿದೆ. ರಾತ್ರಿ ವೇಳೆ ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ ಗಳನ್ನ ಇಬ್ಬರು ಅಪ್ರಾಪ್ತ ಬಾಲಕರನ್ನ ಬಳಸಿಕೊಂಡು ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿ ಮದನ್ ಎಂಬಾತನನ್ನು ಬಂಧಿಸಲಾಗಿದೆ.
ವ್ಹೀಲಿಂಗ್ ಹುಚ್ಚಿಗಾಗಿ ಅಪ್ರಾಪ್ತರಿಂದ ಬೈಕ್ ಕಳ್ಳತನ ಮಾಡಿಸಿ, ಕದ್ದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿ ಬಳಿಕ ಮಾರಾಟ ಮಾಡುತ್ತಿದ್ದ. ಬಹುತೇಕ ಡಿಯೋ ಬೈಕ್ಗಳನ್ನೇ ವ್ಹೀಲಿಂಗ್ಗಾಗಿ ಖದೀಯಲಾಗುತ್ತಿತ್ತು. ಇನ್ನು ಇವರು ಬೆಂಗಳೂರು ಗ್ರಾಮಾಂತರ ಭಾಗ ಸೇರಿದಂತೆ ನಗರದಲ್ಲಿ ಸಾಕಷ್ಟು ಕಡೆ ಕಳ್ಳತನ ಮಾಡಿದ್ದರು. ಸ್ವಲ್ಪ ಹಣವನ್ನು ಅಪ್ರಾಪ್ತರಿಗೆ ಕೊಟ್ಟು, ಉಳಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ಆರೋಪಿಯಿಂದ ಬರೊಬ್ಬರಿ 22 ಲಕ್ಷ ಮೌಲ್ಯದ 29 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎರಡು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ