ವಿಷಯ ತಿರುಚುವುದು ಬೇಡ, ಹಿಂದೆ ನಡೆದ ಘಟನೆಗಳನ್ನಷ್ಟೇ ಮತದಾರನ ಮುಂದಿಡೋಣ: ಡಿಕೆ ಶಿವಕುಮಾರ್
ನಾವು ಹೇಳಿದ್ದನ್ನೆಲ್ಲ ನಂಬಲು ಮತದಾರ ಮೂರ್ಖನಲ್ಲ, ಹಿಂದೆ ನಡೆದ ಘಟನೆಗಳನ್ನು ಯಥಾವತ್ತಾಗಿ ಅವನ ಮುಂದಿಡೋಣ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಬಿಡಿ, ಆದರೆ ಸಿದ್ಧಾಂತಗಳನ್ನೇ ಬಲಿಕೊಟ್ಟು ಮೈತ್ರಿ ಬೆಳಸಬೇಕಾದ ಸ್ಥಿತಿ ದೇವೇಗೌಡರಿಗೆ ಈ ವಯಸ್ಸಲ್ಲಿ ಬಂದಿದ್ದಕ್ಕೆ ವ್ಯಥೆಯೆನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಮಾತಿನ ಕಾಳಗ ಜೋರು ಹಿಡಿಯುತ್ತಿದೆ. ಒಕ್ಕಲಿಗರನ್ನು ಒಗ್ಗೂಡಿಸುವ ಬಗ್ಗೆ ಮಾತಾಡಿದ ನಗರದಲ್ಲಿಂದು ಮಾತಾಡಿದ ಶಿವಕುಮಾರ್ ಯಾರು ಯಾರನ್ನೂ ಒಗ್ಗೂಡಿಸುತ್ತಿಲ್ಲ ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಹೇಳಿದರು. ಕುಮಾರಸ್ವಾಮಿ ಅವರು ಮೂಲ ವಿಷಯವನ್ನೇ ಅರ್ಥಮಾಡಿಕೊಳ್ಳುತ್ತಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ (coalition government) ಮುಖ್ಯಮಂತ್ರಿಯಾಗಿದ್ದ ಅವರನ್ನು ಕೆಳಗಿಳಿಸಿದ ಜನರನ್ನೇ ಸ್ವಾಮೀಜಿಗಳ ಬಳಿ ಕರೆದೊಯ್ದು ಅವರ ಬೆಂಬಲ ಕೋರಿದರೆ ಅದನ್ನು ಅನುಕೂಲಸಿಂಧು ರಾಜಕಾರಣ ಅನ್ನಲ್ಲವೇ ಎಂದು ಶಿವಕುಮಾರ್ ಹೇಳಿದರು. ಯಾವುದನ್ನೂ ತಿರುಚುವುದು ಬೇಡ ಇತಿಹಾಸದಲ್ಲಿ ಏನು ನಡೆಯಿತು ಅನ್ನೋದನ್ನಷ್ಟೇ ಜನರ ಮುಂದೆ ಇಡೋಣ, ನಾವು ಹೇಳಿದ್ದನ್ನೆಲ್ಲ ನಂಬಲು ಮತದಾರ ಮೂರ್ಖನಲ್ಲ, ಹಿಂದೆ ನಡೆದ ಘಟನೆಗಳನ್ನು ಯಥಾವತ್ತಾಗಿ ಅವನ ಮುಂದಿಡೋಣ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಬಿಡಿ, ಆದರೆ ಸಿದ್ಧಾಂತಗಳನ್ನೇ ಬಲಿಕೊಟ್ಟು ಮೈತ್ರಿ ಬೆಳಸಬೇಕಾದ ಸ್ಥಿತಿ ದೇವೇಗೌಡರಿಗೆ ಈ ವಯಸ್ಸಲ್ಲಿ ಬಂದಿದ್ದಕ್ಕೆ ವ್ಯಥೆಯೆನಿಸುತ್ತದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಿಂದೂಗಳ ಹಬ್ಬಗಳ ಮೇಲೆಯೇ ಕಾಂಗ್ರೆಸ್ ಕಾಮಾಲೆ ಕಣ್ಣು: ಕುಮಾರಸ್ವಾಮಿ ತೋಟದ ಮನೆ ಮೇಲೆ ದಾಳಿಗೆ ಜೆಡಿಎಸ್ ಕಿಡಿ