Bengaluru: ಬೆಂಗಳೂರಿನಲ್ಲಿ 11 ಫ್ಲೈ ಓವರ್​ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ: ಬೊಮ್ಮಾಯಿ ಮಾಹಿತಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 10, 2023 | 4:14 PM

ಕರ್ನಾಟಕ ಸರ್ಕಾರವು ಒಟ್ಟು 11 ಫ್ಲೈಓವರ್ ಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಬೆಂಗಳೂರಿನ ಇಟ್ಟಮಡು ಜಂಕ್ಷನ್, ಮಿನಿರ್ವಾ ವೃತ್ತ, ಸಾರಕ್ಕಿ ಸಿಗ್ನಲ್, ನಾಯಂಡಹಳ್ಳಿ-ತುಮಕೂರು ರಸ್ತೆ ಸೇರಿ ಇನ್ನು ಹಲವು ಕಡೆ ಫ್ಲೈಓವರ್ ಗಳು ಬರಲಿವೆ.

Bengaluru: ಬೆಂಗಳೂರಿನಲ್ಲಿ 11 ಫ್ಲೈ ಓವರ್​ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ: ಬೊಮ್ಮಾಯಿ ಮಾಹಿತಿ
ಬೆಂಗಳೂರು ಫ್ಲೈ ಓವರ್
Image Credit source: Deccan Chronicle
Follow us on

ಬೆಂಗಳೂರು: ಬೆಂಗಳೂರಿನಲ್ಲಿ(Bengaluru) ಹೊಸದಾಗಿ 11 ಫ್ಲೈಓವರ್ ನಿರ್ಮಿಸಲು (flyovers) ರಾಜ್ಯ ಸರ್ಕಾರ ಒಪ್ಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಫೆಬ್ರವರಿ 9ರಂದು ಸುರಂಜನ್ ದಾಸ್ ಅಂಡರ್ ಪಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಹಿಸಿ ಮಾತನಾಡಿದ ಬೊಮ್ಮಾಯಿ, ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 11 ಫ್ಲೈಓವರ್​ಗಳು ನಿರ್ಮಾಣವಾಗುತ್ತಿವೆ. ಈ ಫ್ಲೈಓವರ್ ಗಳ ನಿರ್ಮಾಣದಿಂದ ಜನರಿಗೆ ಬಹಳ ಸಹಾಯವಾಗುತ್ತದೆ. ಎಷ್ಟೋ ವರ್ಷಗಳ ಸಮಸ್ಯೆ ಈ ಫ್ಲೈಓವರ್​ಗಳಿಂದ ಪರಿಹಾರವಾಗುತ್ತದೆ ಎಂದರು.

ಟ್ರಾಫಿಕ್ ತೊಂದರೆಗಳನ್ನು ನಿವಾರಿಸಲು ಫ್ಲೈಓವರ್‌ ಮತ್ತು ಅಂಡರ್‌ಪಾಸ್‌ಗಳು ಪರ್ಯಾಯ ಮಾರ್ಗ . ಹೀಗಾಗಿ ಕರ್ನಾಟಕ ಸರ್ಕಾರವು ಒಟ್ಟು 11 ಫ್ಲೈಓವರ್​ಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಬೆಂಗಳೂರಿನ ಇಟ್ಟಮಡು ಜಂಕ್ಷನ್, ಮಿನರ್ವಾ ವೃತ್ತ, ಸಾರಕ್ಕಿ ಸಿಗ್ನಲ್, ನಾಯಂಡಹಳ್ಳಿ-ತುಮಕೂರು ರಸ್ತೆ ಸೇರಿ ಇನ್ನು ಹಲವು ಕಡೆ ಫ್ಲೈಓವರ್​ಗಳು ನಿರ್ಮಾಣವಾಗಲಿವೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ಮಿನರ್ವ ಸರ್ಕಲ್, ಇಟ್ಟಮಡು ಜಂಕ್ಷನ್, ಸಾರಕ್ಕಿ ಸಿಗ್ನಲ್, ನಾಯಂಡಹಳ್ಳಿ-ತುಮಕೂರು ರಸ್ತೆ, ಸ್ಯಾಂಕಿ ರಸ್ತೆ, ಹೊಸೂರು ರಸ್ತೆ, ಫೋರಂ ಮಾಲ್, ಸೇಂಟ್ ಜಾನ್ಸ್ ಆಸ್ಪತ್ರೆ, ಯೆಲಹಂಕ ಮತ್ತು ಹೂಡಿಯಲ್ಲಿ ಫ್ಲೈಓವರ್‌ಗಳನ್ನು ನಿರ್ಮಿಸಲು ಪ್ರಸ್ತಾಪಿಸಿದರ. ಆದ್ರೆ,  ಯಾವ ಜಂಕ್ಷನ್‌ಗಳಲ್ಲಿ ಫ್ಲೈಓವರ್​ ನಿರ್ಮಿಸಲಾಗುತ್ತದೆ ಎನ್ನುವುದನ್ನು  ಎಂದು ಬೊಮ್ಮಾಯಿ ತಿಳಿಸಲಿಲ್ಲ.

ಬೆಂಗಳೂರಿನಲ್ಲಿ ಪ್ರತಿ ದಿನ 5000 ಹೊಸ ಗಾಡಿಗಳು ರಸ್ತೆಗಿಳಿಯುತ್ತವೆ. ಇದರಿಂದಾಗಿ ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಟ್ರಾಫಿಕ್ ತೊಂದರೆಗಳನ್ನು ಎದುರಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ ಬೊಮ್ಮಾಯಿ ಹೇಳಿದರು.

Published On - 3:47 pm, Fri, 10 February 23