ಬೆಂಗಳೂರು: ಇತ್ತೀಚಿಗೆ ಟೋಯಿಂಗ್ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ವಿಭಾಗದ ಪೊಲೀಸರು ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ.
ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು. ಓರ್ವ ASI ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ವಾಹನಗಳ ಟೋಯಿಂಗ್ಗೂ ಮುನ್ನ ಅನೌನ್ಸ್ ಮಾಡಬೇಕು. ವಾಹನದ ನಾಲ್ಕು ಭಾಗಗಳಿಂದ ಫೋಟೋ ತೆಗೆದುಕೊಳ್ಳಬೇಕು. ಬಳಿಕ ವಾಹನವನ್ನ ಟೋಯಿಂಗ್ ಮಾಡಬೇಕು. ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು. ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು. ಟೋಯಿಂಗ್ ಮಾಡಿದ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು. ಈ ನಿಯಮಗಳನ್ನ ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದುವರೆಗೂ ನಿಯಮಗಳನ್ನ ಪಾಲಿಸದ ಐವರು ಟೋಯಿಂಗ್ ಸಿಬ್ಬಂದಿಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗ ಮಾಹಿತಿ ನೀಡಿದೆ.
ಇದನ್ನೂ ಓದಿ:
ಟೋಯಿಂಗ್ ಸಿಬ್ಬಂದಿ ಜೊತೆ ಕಾರು ಮಾಲಕಿ ಮಾತಿನ ಚಕಮಕಿ; ಟೋಯಿಂಗ್ ವಾಹನ ಹತ್ತಿ ಪ್ರತಿಭಟನೆ
(Bengaluru Towing official Rules is announced by police )
Published On - 6:08 pm, Sat, 25 September 21