AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಕಾರಿನಲ್ಲಿ ತಡರಾತ್ರಿ ಜಾಲಿ ರೈಡ್ ಮಾಡುತ್ತಿದ್ದವರಿಂದ ಕ್ಯಾಬ್‌ಗೆ ಡಿಕ್ಕಿ, ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್‌ ವಶಕ್ಕೆ

ತಡರಾತ್ರಿ ಜಾಲಿ ರೈಡ್ ಮಾಡುತ್ತಿದ್ದ ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್‌ ಕಾರು ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಱಶ್ ಡ್ರೈವಿಂಗ್, ನಿರ್ಲಕ್ಷ್ಯ, ಅಪಾಯಕಾರಿ ಚಾಲನೆ ಪ್ರಕರಣ ದಾಖಲಾಗಿದ್ದು ಅಪಘಾತವೆಸಗಿದ ಕಾರು ಚಾಲಕ ಜವೇರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಷಾರಾಮಿ ಕಾರಿನಲ್ಲಿ ತಡರಾತ್ರಿ ಜಾಲಿ ರೈಡ್ ಮಾಡುತ್ತಿದ್ದವರಿಂದ ಕ್ಯಾಬ್‌ಗೆ ಡಿಕ್ಕಿ, ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್‌ ವಶಕ್ಕೆ
ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್‌
TV9 Web
| Edited By: |

Updated on:Sep 26, 2021 | 12:47 PM

Share

ಬೆಂಗಳೂರು: ಐಷಾರಾಮಿ ಕಾರಿನಲ್ಲಿ ತಡರಾತ್ರಿ ಜಾಲಿ ರೈಡ್ ಮಾಡುತ್ತಿದ್ದ ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್‌ ಕಾರು ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕ್ಯಾಬ್ ಸಂಪೂರ್ಣ ಜಖಂ ಆಗಿದೆ. ಬೆಂಗಳೂರಿನ ಕಮಾಂಡೊ ಆಸ್ಪತ್ರೆಯ ಬಳಿ ಅಪಘಾತ ನಡೆದಿದೆ.

ಇಂದಿರಾನಗರದಲ್ಲಿ ಪಾರ್ಟಿ ಮಾಡಿದ್ದ ಜವೇರ್ ಮತ್ತು ಆತನ ಸ್ನೇಹಿತರು ರಾತ್ರಿ ಪಾರ್ಟಿ ಮಾಡಿ 3 ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು. ಉದ್ಯಮಿ ಕರೀಮ್ ಮೆವಾನಿ ಮಗ ಜವೇರ್, ಸೊಸೆ ಶ್ರೇಯಾ, ಜವೇರ್ ಸ್ನೇಹಿತರು 3 ಕಾರಿನಲ್ಲಿ ಜಾಲಿ ರೈಡ್‌ಗೆ ತೆರಳಿದ್ದರು. ಈ ವೇಳೆ ಜವೇರ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಕೇಶವಮೂರ್ತಿ ಎಂಬುವರ ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕ್ಯಾಬ್ ಸಂಪೂರ್ಣ ಜಖಂ ಆಗಿದೆ.

ಇನ್ನು ಕೇಶವಮೂರ್ತಿ ಕ್ಯಾಬ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅಪಘಾತ ಸ್ಥಳದಲ್ಲಿ ಜವೇರ್ ಸ್ನೇಹಿತರ ಮದ್ಯದ ಅಮಲಿನಲ್ಲಿ ಯಜೂರ್ ಮೆಗ್ಲಾನಿಯಿಂದ ಹೈಡ್ರಾಮಾ ಕೂಡ ಮಾಡಿದ್ದಾರೆ. ಸದ್ಯ ಗಾಯಾಳು ಕೇಶವಮೂರ್ತಿ ಹಲಸೂರು ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಱಶ್ ಡ್ರೈವಿಂಗ್, ನಿರ್ಲಕ್ಷ್ಯ, ಅಪಾಯಕಾರಿ ಚಾಲನೆ ಪ್ರಕರಣ ದಾಖಲಾಗಿದ್ದು ಅಪಘಾತವೆಸಗಿದ ಕಾರು ಚಾಲಕ ಜವೇರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತವಾದ ಜವೇರ್‌ನ ಐಷಾರಾಮಿ ಕಾರು, ಕ್ಯಾಬ್ ವಶಕ್ಕೆ ಪಡೆಯಲಾಗಿದೆ.

ಮದ್ಯಪಾನ ಮಾಡಿ ಐಷಾರಾಮಿ ಕಾರು ಚಲಾಯಿಸಿದ್ದ ಜುವೇರ್ ಈ ಪ್ರಕರಣ ಸಂಬಂಧ ಉದ್ಯಮಿ ಮಗ ಜುವೇರ್​ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಜುವೇರ್ ಮದ್ಯ ಸೇವಿಸಿದ್ದು ವರದಿಯಲ್ಲಿ ದೃಢಪಟ್ಟಿದೆ. ವೈದ್ಯಕೀಯ ಪರೀಕ್ಷಾ ವರದಿಯನ್ನು ಸಂಚಾರಿ ಪೊಲೀಸರು ಪಡೆದಿದ್ದಾರೆ. ತನಿಖೆ ವೇಳೆ ಉದ್ಯಮಿ ಮಗ ಜುವೇರ್ ಬಳಿ ಎಲ್ಲ ದಾಖಲೆ ಇತ್ತು. ಡಿಎಲ್‌, ಆರ್‌ಸಿ, ಇನ್ಶುರೆನ್ಸ್‌ ಸೇರಿ ಎಲ್ಲವೂ ಚಾಲ್ತಿಯಲ್ಲಿದ್ದವು.

ಇದನ್ನೂ ಓದಿ: Madhya Pradesh: ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಾಪಸ್​ ಬರುತ್ತಿದ್ದಾಗ ಭೀಕರ ಅಪಘಾತ; ನಾಲ್ವರು ಸಾವು

ಸರಳ ಆಡಳಿತ ನಡೆಸಬೇಕೆನ್ನುವ ಮುಖ್ಯಮಂತ್ರಿಗಳೇ, ನಿಮ್ಮ ಸುಖಕರ ಪ್ರಯಾಣಕ್ಕಾಗಿ ಶಾಲೆಗಳ ಮುಂದಿನ ಹಂಪ್​ಗಳನ್ನು ತೆರವುಗೊಳಿಸಲಾಗಿದೆ!

Published On - 7:05 am, Sun, 26 September 21