Bengaluru Airport: ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳ ಷೇರು ಮಾರಾಟಕ್ಕೆ ಸರ್ಕಾರ ನಿರ್ಧಾರ

TV9 Digital Desk

| Edited By: Sushma Chakre

Updated on: Sep 25, 2021 | 4:48 PM

Bangalore International Airport | ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ತಲಾ ಶೇ. 13ರಷ್ಟು ಷೇರನ್ನು ಹೊಂದಿದೆ.

Bengaluru Airport: ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳ ಷೇರು ಮಾರಾಟಕ್ಕೆ ಸರ್ಕಾರ ನಿರ್ಧಾರ
ಬೆಂಗಳೂರು ವಿಮಾನ ನಿಲ್ದಾಣ
Follow us

ಬೆಂಗಳೂರು: ಬೆಂಗಳೂರು (Bangalore Airport) ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ (Hyderabad Airport) ತನ್ನ ಪಾಲಿನ ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಶೀಘ್ರದಲ್ಲಿಯೇ ಬೆಂಗಳೂರು ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ತನ್ನ ಪಾಲನ್ನು ಹಿಂತೆಗೆದುಕೊಳ್ಳಲಿದೆ. ಮೂಲಗಳ ಪ್ರಕಾರ, ಕೇಂದ್ರ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣಗಳ ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಸಚಿವ ಸಂಪುಟದ ಗಮನಕ್ಕೆ ತಂದಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ತಲಾ ಶೇ. 13ರಷ್ಟು ಷೇರನ್ನು ಹೊಂದಿದೆ. ಈ ಎರಡು ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ಇನ್ನೂ ಕೆಲವು ವಿಮಾನ ನಿಲ್ದಾಣಗಳಲ್ಲಿರುವ ತನ್ನ ಷೇರುಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾರಾಟ ಮಾಡಲಿದೆ. ಇದಕ್ಕಾಗಿ ಸದ್ಯದಲ್ಲೇ ವಿಮಾನಯಾನ ಸಚಿವಾಲಯ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಶೇ. 26ರಷ್ಟು ಷೇರುಗಳನ್ನು ಹೊಂದಿದೆ. ಬೆಂಗಳೂರು ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ತಲಾ ಶೇ. 13ರಷ್ಟು ಷೇರುಗಳನ್ನು ಹೊಂದಿದೆ. ಮೊದಲು ಬೆಂಗಳೂರು ಮತ್ತು ಹೈದರಾಬಾದ್‌ ನಿಲ್ದಾಣದಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಪಾಲನ್ನು ಹಿಂತೆಗೆದುಕೊಳ್ಳಲಿದೆ. ನಂತರ ಉಳಿದ ವಿಮಾನ ನಿಲ್ದಾಣಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಸರ್ಕಾರದ ಎನ್​ಎಂಪಿ ಭಾಗವಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಂಡಳಿಯು ಇತ್ತೀಚೆಗೆ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಒಪ್ಪಿಗೆ ನೀಡಿತ್ತು. 6 ದೊಡ್ಡ ಏರ್‌ಪೋರ್ಟ್‌ಗಳಾದ ಭುವನೇಶ್ವರ, ವಾರಾಣಸಿ, ಅಮೃತಸರ, ತಿರುಚ್ಚಿ, ಇಂದೋರ್, ರಾಯ್ಪುರ ಹಾಗೂ 7 ಸಣ್ಣ ವಿಮಾನ ನಿಲ್ದಾಣಗಳಾದ ಜರ್ಸುಗುಡ, ಗಯಾ, ಖುಷಿನಗರ, ಕಾಂಗ್ರಾ, ತಿರುಪತಿ, ಜಬಲ್ಪುರ, ಜಲಗಾಂವ್ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ: Bengaluru Fire Accident: ಬೆಂಗಳೂರು ಅಪಾರ್ಟ್​ಮೆಂಟ್​ನಲ್ಲಿ ನಡೆದ ಬೆಂಕಿ ದುರಂತಕ್ಕೆ ದೇವರ ದೀಪವೇ ಕಾರಣವಾ?

20 ಸಾವಿರ ಕೋಟಿ ರೂ. ಮೌಲ್ಯದ 56 ಏರ್ ಬಸ್ C295MW ವಿಮಾನ ಖರೀದಿ ಅಧಿಕೃತಗೊಳಿಸಿದ ಭಾರತ

(Government Aviation Ministry decided to divest the stakes of Bengaluru Airport and Hyderabad airport)

ತಾಜಾ ಸುದ್ದಿ

Related Stories

Click on your DTH Provider to Add TV9 Kannada