ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ಇದ್ದ ದಂಡವನ್ನು 50% ಆಫರ್​ನೊಂದಿಗೆ 14,500 ರೂ. ಪಾವತಿಸಿ ಕೇಸ್ ಕ್ಲಿಯರ್ ಮಾಡಿಕೊಂಡ ಮಹಾಶಯ

| Updated By: ರಮೇಶ್ ಬಿ. ಜವಳಗೇರಾ

Updated on: Feb 04, 2023 | 9:44 PM

50% ಡಿಸ್ಕೌಂಟ್ ಬೋರ್ಡನ್ನ ದೊಡ್ಡ ದೊಡ್ಡ ಮಾಲ್‌ಗಳು, ಬಟ್ಟೆ ಅಂಗಡಿಗಳಲ್ಲಿ ಮಾತ್ರ ನೋಡಿರ್ತೀರಾ. ಆದ್ರೆ ಸರ್ಕಾರದ‌ ಮಟ್ಟದಲ್ಲೂ 50% ಡಿಸ್ಕೌಂಟ್ ಸಿಗ್ತಿದೆ ಅಂದ್ರೆ ನೀವು ನಂಬ್ತೀರಾ? ಖಂಡಿತ ನಂಬಲೇ ಬೇಕು.ಇದೇ 50% ಆಫರ್ ಲಾಭ ಪಡೆಯಲು ಜನ ಮುಗಿಬಿದ್ದಿದ್ದಾರೆ.

ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ಇದ್ದ ದಂಡವನ್ನು 50% ಆಫರ್​ನೊಂದಿಗೆ 14,500 ರೂ. ಪಾವತಿಸಿ ಕೇಸ್ ಕ್ಲಿಯರ್ ಮಾಡಿಕೊಂಡ ಮಹಾಶಯ
Follow us on

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ (Bengaluru Traffic Fines) ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಆದೇಶ ಹೊರಡಿಸಿದೆ. ಸಾವಿರಾರು ರೂಪಾಯಿ ದಂಡ ಮೊತ್ತ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು (ಫೆಬ್ರವರಿ 04) ಸಹ ಮುಗಿಬಿದ್ದಿದ್ದಾರೆ. ಅದರಲ್ಲೂ ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ದಂಡ ಹೊಂದಿದ್ದ ವ್ಯಕ್ತಿಯೋರ್ವ 50 ಪರ್ಸೆಂಟ್ ಆಫರ್ ಸದುಪಯೋಗಪಡಿಸಿಕೊಂಡಿದ್ದಾರೆ. ಹೌದು..ಬರೋಬ್ಬರಿ 29 ಸಾವಿರ ಮೊತ್ತದಷ್ಟು ದಂಡದ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ್ದ ಬೈಕ್​ ಸವಾರನೋರ್ವ, ರಿಯಾಯಿತಿ ನೀಡಿದ್ದರಿಂದ 14,500 ರೂ. ಮಾತ್ರ ದಂಡ ಕಟ್ಟಿ ಕ್ಲಿಯರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ದ್ವಿಚಕ್ರ ವಾಹನ ಸವಾರನೋರ್ವ ಸಿಗ್ನಲ್ ಜಂಪ್, ಹೆಲ್ಮೇಟ್ ಧರಿಸದಿರುವುದು ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಹಲವು ವರ್ಷಗಳಿಂದ ದಂಡವನ್ನು ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಸಂಚಾರಿ ಪೊಲೀಸರು ಬರೋಬ್ಬರಿ 29 ಸಾವಿರ ದಂಡ ಹಾಕಿದ್ದರು. ಇದೀಗ 50 ರಿಯಾಯಿತಿ ನೀಡಿದ್ದರಿಂದ ಬೈಕ್ ಸವಾರ ಸಿಕ್ಕಿದ್ದೇ ಚಾನ್ಸ್ ಅಂತ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಠಾಣೆ ಪೊಲೀಸರಿಗೆ (Bengaluru Traffic Police) 14,500 ರೂ. ದಂಡ ಪಾವತಿಸಿ ಎಲ್ಲಾ ಕೇಸ್ ಕ್ಲಿಯರ್ ಮಾಡಿಕೊಂಡರು. ಪೊಲೀಸರು ಈ ಬೈಕ್​ ಸವಾರನ ದಂಡ ಬಿಲ್ ಹರಿದಿರುವುದು​ ಮಾರುದ್ದ ಇದೆ. ಈ ಫೋಟೋವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

2 ದಿನದಲ್ಲಿ 13 ಕೋಟಿ ರೂ. ಹೆಚ್ಚು ದಂಡ ಪಾವತಿ

ಹೌದು…50% ಡಿಸ್ಕೌಂಟ್ ಬೋರ್ಡನ್ನ ದೊಡ್ಡ ದೊಡ್ಡ ಮಾಲ್‌ಗಳು, ಬಟ್ಟೆ ಅಂಗಡಿಗಳಲ್ಲಿ ಮಾತ್ರ ನೋಡಿರ್ತೀರಾ. ಆದ್ರೆ ಸರ್ಕಾರದ‌ ಮಟ್ಟದಲ್ಲೂ 50% ಡಿಸ್ಕೌಂಟ್ ಸಿಗ್ತಿದೆ ಅಂದ್ರೆ ನೀವು ನಂಬ್ತೀರಾ? ಖಂಡಿತ ನಂಬಲೇ ಬೇಕು.ಇದೇ 50% ಆಫರ್ ಲಾಭ ಪಡೆಯಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಟ್ರಾಫಿಕ್​ ಪೊಲೀಸರಿಂದ ಕಣ್ತಪ್ಪಿಸಿ ಹೋಗ್ತಿದ್ದವರು ಈಗ ರಾಜಾರೋಷವಾಗಿ ಅವರ ಮುಂದೆಯೇ ನಿಂತಿ ದಂಡ ಪಾವತಿಸಿಸಲು ಮುಗಿಬಿದ್ದಿದ್ದಾರೆ.

ಎರಡು ದಿನದಲ್ಲಿ ವಾಹನ ಸವಾರರಿಂದ ಬರೋಬ್ಬರಿ 13 ಕೋಟಿ 81 ಲಕ್ಷ 13 ಸಾವಿರದ 621 ರೂಪಾಯಿ ಟ್ರಾಫಿಕ್ ದಂಡ ಸಂಗ್ರಹವಾಗಿದೆ. ಎರಡೇ ದಿನದಲ್ಲಿ ಬಾಕಿ ಉಳಿದಿದ್ದ 4 ಲಕ್ಷ 77 ಸಾವಿರದ 298 ಸಂಚಾರ ನಿಯಮ ಉಲ್ಲಂಘನೆ ಕೇಸ್ ಕ್ಲಿಯರ್ ಆಗಿವೆ. ಪೇಟಿಎಂ, ಬೆಂಗಳೂರು ಒನ್, ಸಂಚಾರ ಠಾಣೆ ಗಳಲ್ಲಿ ಟ್ರಾಫಿಕ್ ದಂಡವನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ 2 ದಿನಗಳಿಂದ 13,81,13,621 ರೂಪಾಯಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಪಾವತಿಯಾಗಿದೆ. ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ. ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಮೊದಲ ದಿನ 5.61 ಕೋಟಿ ರೂಪಾಯಿ ಸಂಗ್ರಹ

ಒಟ್ಟು 2 ಕೋಟಿ 35 ಲಕ್ಷದ ಸಂಚಾರಿ ನಿಯಮ ಉಲ್ಲಂಘನೆ ಕೇಸ್​​ಗಳಿವೆ. ಸಂಚಾರಿ ಪೊಲೀಸರಿಗೆ ಇದರಿಂದ 1144 ಕೋಟಿ ರೂ. ದಂಡ ಕಲೆಕ್ಟ್ ಆಗಬೇಕಿದೆ. ಡಿಸ್ಕೌಂಟ್ ಸಿಗುತ್ತಿದ್ದಂತೆಯೇ ದಂಡ ಪಾವತಿಸಲು ಸವಾರರು ಮುಗಿ ಬೀಳುತ್ತಿದ್ದಾರೆ. ಆಫರ್ ಕೊಟ್ಟ ಮೊದಲ ದಿನವೇ (ಜನವರಿ 03) 5.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಇನ್ನು ಮೊದಲ ದಿನ 2 ಲಕ್ಷಕ್ಕೂ ಅಧಿಕ ಟ್ರಾಫಿಕ್​ ಉಲ್ಲಂಘನೆ ಕೇಸ್ ಕ್ಲಿಯರ್ ಆಗಿವೆ.

ಏನೇ ಹೇಳಿ, ಸಿಗ್ನಲ್ ಕ್ರಾಸ್, ಹೆಲ್ಮೆಟ್, ನೋ ಪಾರ್ಕಿಂಗ್, ತ್ರಿಬಲ್ ರೈಡಿಂಗ್ ಅಂತೆಲ್ಲ ಏಳೆಂಟು ಕೇಸ್​ಗಳನ್ನ ಹಾಕಿಸಿಕೊಂಡವರು ಇದೀಗ ಸಿಕ್ಕಿದ್ದೇ ಚಾನ್ಸ್ ಅಂತ ರಿಯಾಯಿತಿಯಲ್ಲಿ ದಂಡ ಕಟ್ಟಿ ನಿಟ್ಟುಸಿರು ಬಿಟ್ಟಿದ್ದಾರೆ.