AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Advisory: ಬೆಂಗಳೂರು ವೈಟ್ ಟಾಪಿಂಗ್ ಕಾಮಗಾರಿ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಬೆಂಗಳೂರಿನ 150 ಕಿಮೀಯಷ್ಟು ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ ಆರಂಭವಾಗಲಿದೆ. ಹೀಗಾಗಿ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ಲೆಲ್ಲಿ ಸಂಚಾರ ನಿರ್ಬಂಧವಿದೆ? ಪರ್ಯಾಯ ಮಾರ್ಗಗಳು ಯಾವುವು ಎಂಬ ವಿವರ ಇಲ್ಲಿದೆ.

Traffic Advisory: ಬೆಂಗಳೂರು ವೈಟ್ ಟಾಪಿಂಗ್ ಕಾಮಗಾರಿ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು ವೈಟ್ ಟಾಪಿಂಗ್ ಕಾಮಗಾರಿ, ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ (ಸಾಂದರ್ಭಿಕ ಚಿತ್ರ)
Ganapathi Sharma
|

Updated on: Jul 15, 2024 | 9:39 AM

Share

ಬೆಂಗಳೂರು, ಜುಲೈ 15: ಬೆಂಗಳೂರು ನಗರದ ಕೆಲವೆಡೆ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಸರ್ಕಾರ ಮುಂದಾಗಿದ್ದು, ಸುಮಾರು 150 ಕಿಮೀ ವ್ಯಾಪ್ತಿಯ ವೈಟ್ ಟಾಪಿಂಗ್ ಕಾಮಗಾರಿಗೆ ಇಂದು ಚಾಲನೆ ದೊರೆಯಲಿದೆ. ಕಾಮಗಾರಿ ನಡೆಯುವ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಟ್ರಾಫಿಕ್ ಅಡ್ವೈಸರಿ ಬಿಡುಗಡೆ ಮಾಡಿದ್ದು, ಮಾರ್ಗ ಬದಲಾವಣೆಯ ವಿವರ ಇಲ್ಲಿದೆ.

ಸಂಚಾರ ನಿರ್ಬಂಧ, ಪರ್ಯಾಯ ರಸ್ತೆಯ ಮಾಹಿತಿ

ಬಿಬಿಎಂಪಿ ಮೂಲಸೌಕರ್ಯ ಸುಧಾರಣೆ ಕಾರ್ಯದ ದೃಷ್ಟಿಯಿಂದ ಸೇತುರಾವ್ ಸ್ಟ್ರೀಟ್ ರಸ್ತೆ (ಮೈಸೂರು ರಸ್ತೆಯಿಂದ ಗುಂಡೋಪಂತ್ ಸ್ಟ್ರೀಟ್ ವರೆಗೆ) ಮತ್ತು ಪೊಲೀಸ್ ರಸ್ತೆ (ಸೇತುರಾವ್ ಸ್ಟ್ರೀಟ್ ರಸ್ತೆಯಿಂದ ಎ.ಎಸ್. ಚಾರ್ ಸ್ಟ್ರೀಟ್ ರಸ್ತೆವರೆಗೆ) ಮತ್ತು ಎಸ್.ಆರ್. ಕ್ರಾಸ್ ರಸ್ತೆ (ಮೆಟ್ರೊ ಬ್ಯಾಕ್ ರೋಡ್, ಮೆಟ್ರೊ ಬಿ ಗೇಟ್ ನಿಂದ ಎಸ್.ಆರ್. ರಸ್ತೆ) ಸಂಪೂರ್ಣ ಹದಗೆಟ್ಟಿದೆ. ಆದ್ದರಿಂದ, ಈ ರಸ್ತೆಗಳಲ್ಲಿ ಹೊಸ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸುವ ಸಲುವಾಗಿ, ಸುಗಮ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ ಬರಲಿವೆ ಹೆಚ್ಚುವರಿ 750 ಎಐ ಕ್ಯಾಮರಾ

ಮೊದಲ ಹಂತದಲ್ಲಿ, ಎಸ್‌ಆರ್ ರಸ್ತೆಯ ಸಮಯದಲ್ಲಿ (ಮೈಸೂರು ರಸ್ತೆಯಿಂದ ಜಿ.ಪಿ. ಜಂಕ್ಷನ್) ಕಾಮಗಾರಿ ನಡೆಯಲಿದ್ದು, ಎಸ್‌ಆರ್ ರಸ್ತೆ ಮೂಲಕ ಸಂಚರಿಸಿ ಜಿಪಿ ಸ್ಟ್ರೀಟ್‌ಗೆ ಸೇರುವ ವಾಹನಗಳು ಮೈಸೂರು ರಸ್ತೆಯಲ್ಲಿ ಮುಂದುವರಿಯಬೇಕು ಮತ್ತು ಮಾರ್ಕೆಟ್ ವೃತ್ತದಲ್ಲಿ ಎಡ ತಿರುವು ಪಡೆದು ಅವೆನ್ಯೂ ರಸ್ತೆ ಮೂಲಕ ಜಿಟಿ ಸ್ಟ್ರೀಟ್ ರಸ್ತೆಗೆ ತೆರಳಬೇಕು. ಜುಲೈ 29 ರಿಂದ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದ್ದು ಪೊಲೀಸ್ ರಸ್ತೆ ಮತ್ತು ಎಸ್.ಆರ್. ಕ್ರಾಸ್ ರೋಡ್, ಪೊಲೀಸ್ ರಸ್ತೆ ಮೂಲಕ ಸಾಗುವ ವಾಹನಗಳು ಎಸ್.ಆರ್. ಜಿಪಿ ಸ್ಟ್ರೀಟ್‌ವರೆಗೆ ರಸ್ತೆ ಮತ್ತು ಜಿಪಿ ಸ್ಟ್ರೀಟ್ ರಸ್ತೆಯಲ್ಲಿ ಎಡ ತಿರುವು ಪಡೆದು ಎ.ಎಸ್. ಎ.ಎಸ್ ಚಾರ್ ರಸ್ತೆಯನ್ನು ಸಂಪರ್ಕಿಸಬೇಕು. ಜುಲೈ 31 ರಿಂದ ಆಗಸ್ಟ್​ 16 ರ ವರೆಗೆ ಈ ಬದಲಿ ವ್ಯವಸ್ಥೆ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ