ಕಾರ್ತಿಕ ಸೋಮವಾರ ಲಕ್ಷದೀಪೋತ್ಸವ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

|

Updated on: Nov 25, 2024 | 7:42 AM

ಬೆಂಗಳೂರಿನ ಬೇಗೂರಿನ ನಾಗಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಲಕ್ಷದೀಪೋತ್ಸವದಿಂದಾಗಿ, ಸಂಚಾರ ದಟ್ಟಣೆ ತಪ್ಪಿಸಲು ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಒದಗಿಸಿದ್ದಾರೆ.

ಕಾರ್ತಿಕ ಸೋಮವಾರ ಲಕ್ಷದೀಪೋತ್ಸವ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನವೆಂಬರ್​ 25: ಕಾರ್ತಿಕ ಮಾಸದ (Kartika Masa) ಕೊನೆ ಸೋಮವಾರ ಹಿನ್ನೆಲೆಯಲ್ಲಿ ಬೆಂಗಳೂರು ನಗರದ (Bengaluru) ಬೇಗೂರಿನ ನಾಗಲಿಂಗೇಶ್ವರ ದೇವಾಲಯದಲ್ಲಿ ಇಂದು (ನ.25) ಲಕ್ಷದೀಪೋತ್ಸವ ನಡೆಯಲಿದೆ. ಹೀಗಾಗಿ ದೇವಾಲಯಕ್ಕೆ ಸುಮಾರು 80,000 ರಿಂದ 90,000 ಸಾವಿರ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದಾರೆ. ಇದರಿಂದ ಬೇಗೂರಿನ ರಸ್ತೆಗಳಲ್ಲಿ ಹೆಚ್ಚಿನ ವಾಹನಸಂಚಾರ ದಟ್ಟಣೆ ಉಂಟಾಗಲಿದೆ. ಈ ಸಂಬಂಧ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧ

  • ಬೇಗೂರು ರಸ್ತೆಯ ಪಿ.ಕೆ ಕಲ್ಯಾಣ ಮಂಟಪ ಜಂಕ್ಷನ್‌ನಿಂದ ಬೇಗೂರು ಕೊಪ್ಪ ರಸ್ತೆಯ ಏಕನಾ ಆಸ್ಪತ್ರೆ ಜಂಕ್ಷನ್​ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
  • ಮಣಿಪಾಲ್ ಕೌಂಟಿ ರಸ್ತೆಯ ಪಾಲ್ಕನ್ ಮಾರ್ಕೆಟ್ ಜಂಕ್ಷನ್‌ನಿಂದ ಬೇಗೂರು ನಾಗಲಿಂಗೇಶ್ವರ ದೇವಸ್ಥಾನದವರೆಗೆ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ.
  • ಡಿಎಲ್‌ಎಫ್ ರಸ್ತೆಯ ಡಿಎಲ್‌ಎಫ್ ಜಂಕ್ಷನ್‌ನಿಂದ ಬೇಗೂರು ಕೆರೆಕಟ್ಟೆ ಜಂಕ್ಷನ್‌ವರೆಗೆ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚುಮು ಚುಮು ಚಳಿ: ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಾ?

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು

  • ಬೊಮ್ಮನಹಳ್ಳಿ-ಹೊಂಗಸಂದ್ರದಿಂದ ಬೇಗೂರು ಕೊಪ್ಪ ರಸ್ತೆ ಕಡೆಗೆ ಬರುವ ವಾಹನ ಸವಾರರು ಪಿ.ಕೆ ಕಲ್ಯಾಣ ಮಂಟಪದ ಜಂಕ್ಷನ್ ಕಡೆಯಿಂದ ಬಲತಿರುವ ಪಡೆದು, ದೇವರಚಿಕ್ಕನಹಳ್ಳಿ ರಸ್ತೆ ಮಾರ್ಗವಾಗಿ ಚಲಿಸಿ ಎಡತಿರುವು ಪಡೆದು, ಡಿಯೋ ಹೈಟ್ಸ್ ಮಾರ್ಗವಾಗಿ ನ್ಯಾನಪ್ಪನಹಳ್ಳಿ ರಸ್ತೆಗೆ ಸಂಚರಿಸಿ, ಡಿಎಲ್‌ಎಫ್ ಜಂಕ್ಷನ್ ತಲುಪಿ, ಎಲೇನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಬೇಗೂರು-ಕೊಪ್ಪ ರಸ್ತೆಯನ್ನು ತಲಪಬಹುದಾಗಿದೆ. ಹಾಗೂ ಮಣಿಪಾಲ್ ಕೌಂಟಿ ರಸ್ತೆ ಕಡೆಗೆ ಚಲಿಸುವವರು ವಿಶ್ವಪ್ರಿಯ ಲೇಔಟ್ ಮುಖ್ಯರಸ್ತೆ ಮೂಲಕ ಚಿಕ್ಕ ಬೇಗೂರು ಮಾರ್ಗವಾಗಿ ಮಣಿಪಾಲ್ ಕೌಂಟಿ ರಸ್ತೆ ಕಡೆಗೆ ಸಂಚರಿಸಬಹುದು.
  • ಹೊಸೂರು ಮುಖ್ಯ ರಸ್ತೆ ಮತ್ತು ಮಣಿಪಾಲ್ ಕೌಂಟಿ ರಸ್ತೆ ಮಾರ್ಗವಾಗಿ ಬರುವ ವಾಹನ ಸವಾರರು, ಪಾಲ್ಕನ್ ಮಾರ್ಕೆಟ್ ಬಳಿ ಎಡ ತಿರುವು ಪಡೆದುಕೊಂಡು, ಎಇಸಿಎಸ್​ಸಿ-ಬ್ಲಾಕ್ ಮಾರ್ಗವಾಗಿ ಮೈಲಸಂದ್ರ ಮೂಲಕ ಬೇಗೂರು ಕೊಪ್ಪ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯ ರಸ್ತೆ ತಲುಪಬಹುದು.
  • ಬೇಗೂರು ಕೊಪ್ಪ ರಸ್ತೆ ಮೂಲಕ ಬೇಗೂರು ಮಾರ್ಗವಾಗಿ ಬರುವ ವಾಹನ ಸವಾರರು, ಏಕನಾ ಆಸ್ಪತ್ರೆ ಜಂಕ್ಷನ್ ಬಳಿ ಎಡತಿರುವು ಪಡೆದು, ಡಿಎಲ್‌ಎಫ್ ರಸ್ತೆ ಮೂಲಕ ನ್ಯಾನಪ್ಪನಹಳ್ಳಿ ಮಾರ್ಗವಾಗಿ, ದೇವರಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಮತ್ತು ಹೊಂಗಸಂದ್ರ ಕಡೆಗೆ ಸಾಗಬಹುದಾಗಿದೆ.
  • ಡಿಎಲ್‌ಎಫ್ ಮಾರ್ಗವಾಗಿ ಬೇಗೂರು ಸರ್ಕಲ್ ಕಡೆಗೆ ಬರುವ ವಾಹನ ಸವಾರರು, ಡಿಎಲ್‌ಎಫ್ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಂಡು, ನ್ಯಾನಪ್ಪನಹಳ್ಳಿ ರಸ್ತೆ ಮೂಲಕ ಡಿಯೋಡೈಟ್ಸ್ ಲೇಔಟ್ ರಸ್ತೆ ಹಾಗೂ ದೇವರಚಿಕ್ಕನಹಳ್ಳಿ ರಸ್ತೆ ಮೂಲಕ ಹೊಂಗಸಂದ್ರ, ಬೊಮ್ಮನಹಳ್ಳಿ ಕಡೆಗೆ ಸಂಚರಿಸಬಹುದು

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ