Bangalore Power Cut: ಬೆಂಗಳೂರು ಹಲವು ನಗರಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನವೆಂಬರ್ 26 ಮತ್ತು 27 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾರ್ಯಕ್ಕಾಗಿ ವಿದ್ಯುತ್ ವ್ಯತ್ಯಯ ಘೋಷಿಸಿದೆ.ವಿದ್ಯುತ್ ಕಡಿತವಾಗುವ ಪ್ರದೇಶ ಮತ್ತು ಸಮಯ ಬೆಸ್ಕಾಂ ತಿಳಿಸಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಬೆಂಗಳೂರು, ನವೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ (ನವೆಂಬರ್ 26 ಮತ್ತು 27) ರಂದು ಬೆಂಗಳೂರಿನ (Bengaluru) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಕುರಿತು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವಿದ್ಯುತ್ ವ್ಯತ್ಯಯ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮತ್ತು ಕೆಲವು ಪ್ರದೇಶಗಳಲ್ಲಿ ಸಂಜೆಯವರೆಗೆ ವಿದ್ಯುತ್ ಕಡಿತವಾಗಲಿದೆ.
ಮಂಗಳವಾರ (ನ.26) ವಿದ್ಯುತ್ ವ್ಯತ್ಯಯ
ಆರ್ಪಿಸಿ ಲೇಔಟ್, 7ನೇ ಮುಖ್ಯ ಅಂಚೆ ಕಚೇರಿ ರಸ್ತೆ, ವಿಜಯ ಮ್ಯಾನ್ಷನ್, ಹೊಸಹಳ್ಳಿ ಮತ್ತು ವಿಜಯನಗರದಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ತಡಿಕವಾಗಿಲು, ಕುರುಬರಹಳ್ಳಿ ಮತ್ತು ಜಾಲಮಂಗಲದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಕಟ್ ಆಗಲಿದೆ. ಇನ್ನು, ಪುಳಿಗಾಳ, ಸೀತಾರೆಡ್ಡಿಪಲ್ಲಿ, ವೆಂಕಟೇಶಪಲ್ಲಿ, ರಾಮನಪಾಡಿ, ಸಜ್ಜಲಪಲ್ಲಿ ಮತ್ತು ಬೂದಲವಾರಿಪಲ್ಲಿಯಲ್ಲಿ ಮಧ್ಯಾಹ್ನ 12:30 ರಿಂದ 2:30ರವರೆಗೆ ವಿದ್ಯುತ್ ಕಡಿತವಾಗಲಿದೆ.
ಇದನ್ನೂ ಓದಿ: ಕಾರ್ತಿಕ ಸೋಮವಾರ ಲಕ್ಷದೀಪೋತ್ಸವ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಬುಧವಾರ (ನ.27) ವಿದ್ಯುತ್ ವ್ಯತ್ಯಯ
ಎಂಸಿ ಲೇಔಟ್ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ (3 ಗಂಟೆಗಳು) ವಿದ್ಯುತ್ ವ್ಯತ್ಯಯವಾಗಲಿದೆ. ತಿರುಮಲೇಗೌಡನದೊಡ್ಡಿ, ಕಂಚಿದೊಡ್ಡಿ, ನಿಜಪ್ಪನದೊಡ್ಡಿ, ಆದಿಶಕ್ತಿಹಳ್ಳಿ, ಚನ್ನೇಗೌಡನದೊಡ್ಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ (2 ಗಂಟೆಗಳು) ವಿದ್ಯುತ್ ಕಡಿತವಾಗಲಿದೆ.
ಮಡ್ಲಾಖಾನ, ಮರಸನಪಲ್ಲಿ, ದೋರನಾಳಪಲ್ಲಿ, ಬ್ರಾಹ್ಮಣಹಳ್ಳಿ, ತಿಮ್ಮಂಪಲ್ಲಿ, ಗುಂಡ್ಲಪಲ್ಲಿ, ಕೊತ್ತೂರು, ಮಡಕವಾರಿಪಲ್ಲಿ, ಮತ್ತು ಕಮರಪಲ್ಲಿಯಲ್ಲಿ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ (2 ಗಂಟೆಗಳು) ವಿದ್ಯುತ್ ಇರುವುದಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Mon, 25 November 24