ಬೆಂಗಳೂರು, ಆ.23: ಬೆಂಗಳೂರಿನ ಹಲವೆಡೆ ಇಂದು ಟ್ರಾಫಿಕ್ ಸಮಸ್ಯೆ(Traffic) ಎದುರಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ(Bengaluru Traffic Police) ನಗರದ ಹಲವೆಡೆ ಎದುರಾದ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಕೆಟ್ಟು ಹೋದ ವಾಹನ, ಜಲಾವೃತಗೊಂಡ ರಸ್ತೆ ಸೇರಿದಂತೆ ಅನೇಕ ಕಾರಣಗಳಿಂದ ನಿನ್ನೆ ಸಂಜೆ ಹಾಗೂ ಇಂದು ಬೆಳಿಗ್ಗೆ ನಗರದಲ್ಲಿ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅದರ ಮಾಹಿತಿ ಇಲ್ಲಿದೆ.
ಸೀಗೇಹಳ್ಳಿ ಭಾಗದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಬುಧವಾರ ಬೆಳಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ‘ಸಂಚಾರ ಸಲಹೆ’: ಸೀಗೇಹಳ್ಳಿಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿಧಾನಗತಿಯ ಸಂಚಾರ ಇದೆ. ಅದನ್ನು ಶೀಘ್ರದಲ್ಲೇ ಕ್ಲಿಯರ್ ಮಾಡಲಾಗುತ್ತೆ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘Traffic Advisory’
Slow moving traffic due to vehicle breakdown at seegehalli, . It will be moved soon. Kindly Co-operate.@CPBlr @Jointcptraffic @DCPTrEastBCP @acpwfieldtrf @blrcitytraffic pic.twitter.com/q2Nw7lXorL— WHITEFIELD TRAFFIC PS BTP (@wftrps) August 23, 2023
ಇದನ್ನೂ ಓದಿ: Chandrayaan 3 Moon Landing Live: ಚಂದ್ರಯಾನ3 ಯಶಸ್ಸಿಗೆ ಶ್ರೀಶೈಲ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ
ಸದಾಶಿವನಗರ ಸಮೀಪದ ಬಾಷ್ಯಂ ವೃತ್ತದಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಸಂಜೆ ಸೂಚನೆ ನೀಡಿದ್ದರು. ದಟ್ಟಣೆ ತಪ್ಪಿಸಲು ಪೊಲೀಸರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಮತ್ತು ಪರ್ಯಾಯ ರಸ್ತೆಗಳನ್ನು ಬಳಸಲು ಪ್ರಯಾಣಿಕರಿಗೆ ಮನವಿ ಮಾಡಿದ್ದರು. ಸದ್ಯ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ.
Traffic advisory :
Slow-moving traffic in Bashyam Circle Sadshiva nagar due to water logging. Drive carefully and use alternative roads to avoid congestion. pic.twitter.com/CugBHWltPc— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 22, 2023
ಹೊರ ವರ್ತುಲ ರಸ್ತೆಯಲ್ಲಿ ವೋಲ್ವೋ ಬಸ್ ಕೆಟ್ಟು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ ಎಂದು ಎಚ್‌ಎಎಲ್ ಸಂಚಾರ ಪೊಲೀಸ್ ಠಾಣೆ ಪೊಲೀಸರು ಟ್ವೀಟ್ ಮಾಡಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ವೆಲ್ಸ್ ಫಾರ್ಗೋ ಬಳಿ ವೋಲ್ವೋ ಬಸ್ ಕೆಟ್ಟು ನೀಂತಿದೆ. ಬೆಳ್ಳಂದೂರು ಕಡೆಗೆ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಪ್ರಯಾಣಿಕರು ಸಹಕರಿಸಿ ಎಂದು ಪೊಲೀಸರು ಟ್ವೀಟ್ ಮಾಡಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ