Cybercrimes: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕ್ಯೂಆರ್ ಕೋಡ್ ಸ್ಕ್ಯಾಮ್; ಹೇಗೆಲ್ಲಾ ಯಾಮಾರಿಸ್ತಾರೆ ನೋಡಿ..!

QR Code Scams In Bengaluru: ಬೆಂಗಳೂರಿನಲ್ಲಿ ಕಳೆದ ಐದಾರು ವರ್ಷಗಳಲ್ಲಿ ಸೈಬರ್ ಕ್ರೈಮ್ ಘಟನೆಗಳು ಗಣನೀಯವಾಗಿ ಹೆಚ್ಚಿದೆ. ಕಾರ್ಡ್, ಒಟಿಪಿ, ಕ್ಯೂಆರ್ ಕೋಡ್ ಸಂಬಂಧಿತ ಅಪರಾಧ ಘಟನೆಗಳೇ ಹೆಚ್ಚು. ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನ ಪ್ರೊಫೆಸರ್​ವೊಬ್ಬರು ಇಂಥ ಕ್ಯುಆರ್ ಕೋಡ್ ಸ್ಕ್ಯಾಮ್​ವೊಂದಕ್ಕೆ ಬಲಿಯಾಗಿ ಹಣ ಕಳೆದುಕೊಂಡ ಘಟನೆಯೂ ಇದರಲ್ಲಿದೆ.

Cybercrimes: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕ್ಯೂಆರ್ ಕೋಡ್ ಸ್ಕ್ಯಾಮ್; ಹೇಗೆಲ್ಲಾ ಯಾಮಾರಿಸ್ತಾರೆ ನೋಡಿ..!
ಕ್ಯೂಆರ್ ಕೋಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 23, 2023 | 11:20 AM

ಬೆಂಗಳೂರು, ಆಗಸ್ಟ್ 23: ತಂತ್ರಜ್ಞಾನ ಉನ್ನತಿಗೊಂಡಂತೆಲ್ಲಾ ಅಪರಾಧಗಳ ಮಟ್ಟವೂ ಮೇಲೇರುತ್ತಿದೆ. ಬಹುತೇಕ ಚಟುವಟಕೆ ಆನ್​ಲೈನ್ ಆಗಿರುವುದರಿಂದ ಸೈಬರ್ ಅಪರಾಧಗಳ ಪ್ರಮಾಣ ಮತ್ತು ವ್ಯಾಪ್ತಿ ಹೆಚ್ಚುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಹೊಸ ರೀತಿಯ ಸೈಬರ್ ಕ್ರೈಮ್​ಗಳು ಜರುಗುತ್ತಿರುವುದು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯುಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳು (QR Code Related Crimes) ಹೆಚ್ಚು ನಡೆದಿರುವುದು ಪೊಲೀಸರಿಗೆ (Bangalore Police) ತಲೆನೋವು ತರಿಸಿದೆ. ಪೊಲೀಸರೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2017ರಿಂದ ಈಚೆಗೆ 50,000 ಸೈಬರ್ ಅಪರಾಧ ಘಟನೆಗಳು ದಾಖಲಾಗಿವೆ. ಈ ಪೈಕಿ 20,662 ಪ್ರಕರಣಗಳು ಕ್ಯುಆರ್ ಕೋಡ್ ಸ್ಕ್ಯಾಮ್​ಗಳು, ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ ಇತ್ಯಾದಿ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಅಂದರೆ ಸೈಬರ್ ಕೇಸ್​ಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಇಂಥ ಪ್ರಕರಣಗಳೇ ಇವೆ.

ಬೆಂಗಳೂರು ಪೊಲೀಸರ ವಾರದ ಸಭೆಗಳಲ್ಲಿ ಕ್ಯೂಆರ್ ಕೋಡ್ ಹಗರಣಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದಂತೆ. ಅಂತೆಯೇ ನಗರದ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಆಗಾಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಕೂಡ (ಆಗಸ್ಟ್ 22) ಬೆಂಗಳೂರು ನಗರ ಪೊಲೀಸರು ಒಟಿಪಿ ಇತ್ಯಾದಿಯನ್ನು ಮೊಬೈಲ್​ಗಳಲ್ಲಿ ಶೇರ್ ಮಾಡದಿರಿ ಎಂದು ಟ್ವಿಟ್ಟರ್​ನಲ್ಲಿ ಪೋಸ್ಟ್ ಹಾಕಿದ್ದಾರೆ.

ಏನಿದು ಕ್ಯುಆರ್ ಕೋಡ್ ಸ್ಕ್ಯಾಮ್?

ದುಷ್ಕರ್ಮಿಗಳು ನಿಮ್ಮೊಂದಿಗೆ ಹಣದ ವಹಿವಾಟು ನಡೆಸುವ ನೆವದಲ್ಲಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಅದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಿಂದ ಹಣವನ್ನು ಎಗರಿಸುತ್ತಾರೆ ಈ ಅಪರಾಧಿಗಳು.

ಇದನ್ನೂ ಓದಿ: Aadhaar Updates: ಇಮೇಲ್, ವಾಟ್ಸಾಪ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ

ಐಐಎಸ್​ಸಿ ಪ್ರೊಫೆಸರ್ ಕ್ಯುಆರ್ ಕೋಡ್ ಸ್ಕ್ಯಾಮ್​ಗೆ ಬಲಿಯಾಗಿದ್ದು ಹೇಗೆ?

ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ 30 ವರ್ಷದ ವ್ಯಕ್ತಿಯೊಬ್ಬರು ಇಂಥ ಕ್ಯುಆರ್ ಕೋಡ್ ಸ್ಕ್ಯಾಮ್​​ಗೆ 63,000 ರೂ ಕಳೆದುಕೊಂಡಿದ್ದಾರೆ. ಆಗಸ್ಟ್ 11ರಂದು ಅವರು ಆನ್​ಲೈನ್ ಪ್ಲಾಟ್​ಫಾರ್ಮ್​ವೊಂದರಲ್ಲಿ ತಮ್ಮ ಹಳೆಯ ವಾಷಿಂಗ್ ಮೆಷಿನ್ ಅನ್ನು ಮಾರಲು ಯತ್ನಿಸಿದ್ದರು. ವ್ಯಕ್ತಿಯೊಬ್ಬ ಇದನ್ನು ಖರೀದಿಸಲು ಮುಂದೆ ಬಂದಿದ್ದ. ತತ್​ಕ್ಷಣವೇ ಹಣ ಪಾವತಿಸುವುದಾಗಿ ಹೇಳಿ ಕ್ಯುಆರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದ. ವಂಚನೆಯ ಅರಿವಿಲ್ಲದೇ ಪ್ರೊಫೆಸರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ. ದುಷ್ಕರ್ಮಿಗಳು ಬಹಳ ಬೇಗನೇ ಹಣವನ್ನು ಎಗರಿಸುತ್ತಾರೆ.

ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ
ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ
ಹೋಳ್ಕರ್ ಮೈದಾನದಲ್ಲಿ ಯಾರ ಬ್ಯಾಟ್ ಹೆಚ್ಚು ಸದ್ದು ಮಾಡಿದೆ ಗೊತ್ತಾ?
ಹೋಳ್ಕರ್ ಮೈದಾನದಲ್ಲಿ ಯಾರ ಬ್ಯಾಟ್ ಹೆಚ್ಚು ಸದ್ದು ಮಾಡಿದೆ ಗೊತ್ತಾ?
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ

ಹಾಗೆಯೇ, 30 ವರ್ಷದ ಗೃಹಿಣಿಯೊಬ್ಬರೂ ಕೂಡ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ತಮ್ಮ ವೀಣೆಯನ್ನು ಮಾರಲು ಇಟ್ಟಿರುತ್ತಾರೆ. ವೀಣೆ ಖರೀದಿಸುವ ಆಸಕ್ತಿ ತೋರಿದ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ನಂಬರ್​ಗೆ ಒಂದು ಲಿಂಕ್ ಕಳುಹಿಸುತ್ತಾನೆ. ಹಣ ಪಾವತಿಯಾಗುತ್ತದೆ ಎಂದು ನಂಬಿ ಆಕೆ ಆ ಲಿಂಕ್ ಕ್ಲಿಕ್ ಮಾಡುತ್ತಾರೆ. ನೋಡನೋಡುತ್ತಿದ್ದಂತೆಯೇ ಆಕೆಯ ಖಾತೆಯಿಂದ 20,000 ರೂ ಮಾಯವಾಗಿಹೋಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Wed, 23 August 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್