Aadhaar Updates: ಇಮೇಲ್, ವಾಟ್ಸಾಪ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ

UIDAI tweets: ಆಧಾರ್ ಅಪ್​ಡೇಟ್ ಮಾಡುತ್ತೇವೆಂದು ಹೇಳಿ ಕೆಲ ದುಷ್ಕರ್ಮಿಗಳು ಅಡ್ರೆಸ್ ಪ್ರೂಫ್, ಐಡಿ ಪ್ರೂಫ್ ದಾಖಲೆಗಳನ್ನು ವಾಟ್ಸಾಪ್, ಇಮೇಲ್ ಮೂಲಕ ಕೇಳುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿಗೆ ಅಲರ್ಟ್ ಮೆಸೇಜ್ ಹಾಕಿದೆ.

Aadhaar Updates: ಇಮೇಲ್, ವಾಟ್ಸಾಪ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ದಾಖಲೆ ಕಳುಹಿಸದಿರಿ: ಯುಐಡಿಎಐ ಎಚ್ಚರ
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2023 | 2:39 PM

ಆಧಾರ್ ಕಾರ್ಡ್ ಭಾರತದಲ್ಲಿ ಒಂದು ಪ್ರಮುಖ ದಾಖಲೆ ಎನಿಸಿದೆ. ಇದು ನಾಗರಿಕರಿಗೆ ಗುರುತಿನ ಚೀಟಿಯೂ ಹೌದು, ಅಡ್ರೆಸ್ ಪ್ರೂಫ್ ಕೂಡ ಹೌದು. ಸರ್ಕಾರದ ಯೋಜನೆಗಳ ಫಲ ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಯೂ ಹೌದು. ವ್ಯಕ್ತಿಯ ಬೆರಳಚ್ಚು, ಕಣ್ಣಿನ ಗುರುತಿನ ಬಯೋಮೆಟ್ರಿಕ್​ಗಳಂತಹ ಸೂಕ್ಷ್ಮ ಮಾಹಿತಿ ಆಧಾರ್​ನಲ್ಲಿ ಇರುತ್ತವೆ. ಯುಐಡಿಎಐನಿಂದ ನಿರ್ವಹಿಸಲಾಗುವ ಆಧಾರ್ ಕಾರ್ಡ್ ಅನ್ನು ದುಷ್ಕರ್ಮಿಗಳು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಈಗ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದ್ದರಿಂದ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಿವೆ. ಯುಐಡಿಎಐ (UIDAI) ಆಗಾಗ್ಗೆ ಜನರಿಗೆ ಈ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುತ್ತದೆ. ಈಗ ವಂಚಕರು ಇಮೇಲ್ ಮತ್ತು ವಾಟ್ಸಾಪ್ ಮೂಲಕ ಆಧಾರ್ ಪ್ರೂಫ್​ಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಆಧಾರ್ ಪ್ರಾಧಿಕಾರ ಸೋಷಿಯಲ್ ಮೀಡಿಯಾದಲ್ಲಿ ಅಲರ್ಟ್ ಮೆಸೇಜ್ ಪೋಸ್ಟ್ ಮಾಡಿದೆ.

‘ಆಧಾರ್ ಅನ್ನು ಅಪ್​ಡೇಟ್ ಮಾಡಲು ಐಡಿ ಪ್ರೂಫ್ ಅಥವಾ ವಿಳಾಸ ಪ್ರೂಫ್ ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಯುಐಡಿಎಐ ಯಾವತ್ತೂ ಕೇಳುವುದಿಲ್ಲ. ವಂಚಕರ ಬಗ್ಗೆ ಹುಷಾರ್. ಮೈ ಆಧಾರ್​ನ ಪೋರ್ಟಲ್ ಮೂಲಕ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಿ. ಅಥವಾ ನಿಮಗೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಅಪ್​ಡೇಟ್ ಮಾಡಿ,’ ಎಂದು ಯುಐಡಿಎಐ ಹೇಳುತ್ತಿದೆ.

ಆಧಾರ್ ಅನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ಕ್ರಮಗಳು

  • ಯುಐಡಿಎಐ ವೆಬ್​ಸೈಟ್​ನಲ್ಲಿ ಮೈ ಆಧಾರ್ ಪೋರ್ಟಲ್​ಗೆ ಹೋಗಿ: myaadhaar.uidai.gov.in
  • ನಿಮ್ಮ ಆಧಾರ್ ನಂಬರ್ ಬಳಸಿ ಪೋರ್ಟಲ್​ಗೆ ಲಾಗಿನ್ ಆಗಿ
  • ಡಾಕ್ಯುಮೆಂಟ್ ಅಪ್​ಡೇಟ್ ಸೆಕ್ಷನ್​ಗೆ ಹೋಗಿ ಅಲ್ಲಿರುವ ವಿವರಗಳು ನಿಖರವಾಗಿವೆಯಾ ಪರಿಶೀಲಿಸಿ.
  • ಡ್ರಾಪ್ ಡೌನ್ ಲಿಸ್ಟ್​ನಲ್ಲಿ ಯಾವ ಡಾಕ್ಯುಮೆಂಟ್ ಅಪ್​ಡೇಟ್ ಆಗಬೇಕು ಎಂಬುದನ್ನು ಅರಿಸಿ. ಮೂಲ ದಾಖಲೆಯ ಸ್ಕ್ಯಾನ್ಡ್ ಕಾಪಿಯನ್ನು ವೆರಿಫಿಕೇಶನ್​ಗಾಗಿ ಅಪ್​ಲೋಡ್ ಮಾಡಿ.
  • ಇದಾದ ಬಳಿಕ ನಿಮಗೆ ಎಸ್​ಆರ್​ಎನ್ ಸಂಖ್ಯೆ ಅಥವಾ ಸರ್ವಿಸ್ ರಿಕ್ವೆಸ್ಟ್ ನಂಬರ್ ಕಾಣುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ಮುಂದಿನ ಪ್ರಕ್ರಿಯೆ ಬೇಕಾದಾಗ ರೆಫರೆನ್ಸ್​ಗೆ ಈ ನಂಬರ್ ಬೇಕಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?

ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಆಗದೇ ಇರಲು ಕಾರಣಗಳು?

ಆನ್​ಲೈನ್ ಮೂಲಕ ನಾವು ಆಧಾರ್ ಅಪ್​ಡೇಟ್ ಮಾಡಲು ಯತ್ನಿಸುವಾಗ ಕೆಲವೊಮ್ಮೆ ವಿಫಲವಾಗಬಹುದು. ಸರಿಯಾದ ದಾಖಲೆಗಳನ್ನು ಅಪ್​ಲೋಡ್ ಮಾಡದೇ ಇದ್ದಾಗ ಹೀಗಾಗಬಹುದು. ದಾಖಲೆಯ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್​ಲೋಡ್ ಮಾಡಬೇಕು. ಹಾಗೆ ಮಾಡಿರದಿದ್ದರೆ ಅಪ್​ಡೇಟ್ ಆಗದೇ ಇರಬಹುದು. ಹಾಗೆಯೇ, ಪ್ರೂಫ್ ದಾಖಲೆಗಳು ನಿಮ್ಮ ಹೆಸರಿನಲ್ಲಿ ಇಲ್ಲದೇ ಇದ್ದಾಗಲೂ ಹೀಗಾಗಬಹುದು.

ಆಧಾರ್ ಸೆಂಟರ್​ಗೆ ಹೋಗಿ ಅಪ್​ಡೇಟ್ ಮಾಡಿ

ಸಮೀಪದ ಆಧಾರ್ ಕೇಂದ್ರವೊಂದಕ್ಕೆ ಹೋಗಿಯೂ ಆಧಾರ್ ಅಪ್​ಡೇಶನ್ ಮಾಡಬಹುದು. ಹೋಗುವಾಗ ಜೊತೆಯಲ್ಲಿ ವಿಳಾಸ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸಹಾಯಕ ಸಿಬ್ಬಂದಿಗೆ ನಿರ್ದಿಷ್ಟ ಶುಲ್ಕ ಪಾವತಿಸಿ ಆಧಾರ್ ಅಪ್​ಡೇಟ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ