Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬಕ್ಕೆ ಊರಿಗೆ ಹೋಗಬೇಕೆಂದು ರೈಲು ಟಿಕೆಟ್ ಬುಕಿಂಗ್ ವೇಳೆ ಯಡವಟ್ಟು ಬೇಡ; ದಳ್ಳಾಳಿಗಳ ಬಗ್ಗೆ ಹುಷಾರ್

Tips To Avoid Touts When Booking Tickets: ಹಬ್ಬದ ಸೀಸನ್​ನಲ್ಲಿ ಜನರು ಊರುಗಳಿಗೆ ಹೋಗುವುದು ಸಾಮಾನ್ಯ. ಅಂತೆಯೇ ರೈಲು ಮತ್ತು ಬಸ್ಸುಗಳಲ್ಲಿ ಟಿಕೆಟ್ ಸಿಗುವುದು ಕಷ್ಟ. ಈ ಸಂದರ್ಭದಲ್ಲಿ ದಳ್ಳಾಳಿಗಳು ಅಮಾಯಕ ಪ್ರಯಾಣಿಕರನ್ನು ಯಾಮಾರಿಸುವ ಕೆಲಸ ಮಾಡುತ್ತಾರೆ. ಈ ಬಗ್ಗೆ ಏನೇನು ಎಚ್ಚರವಹಿಸಬೇಕು ಎಂಬ ವಿವರ ಇಲ್ಲಿದೆ...

ಹಬ್ಬಕ್ಕೆ ಊರಿಗೆ ಹೋಗಬೇಕೆಂದು ರೈಲು ಟಿಕೆಟ್ ಬುಕಿಂಗ್ ವೇಳೆ ಯಡವಟ್ಟು ಬೇಡ; ದಳ್ಳಾಳಿಗಳ ಬಗ್ಗೆ ಹುಷಾರ್
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 12:40 PM

ಬೆಂಗಳೂರು, ಆಗಸ್ಟ್ 23: ಹಬ್ಬದ ಸೀಸನ್ ಸಮೀಪಿಸುತ್ತಿದೆ. ಸೆಪ್ಟೆಂಬರ್​ನಿಂದ ನವೆಂಬರ್​ವರೆಗೂ ನಾನಾ ಹಬ್ಬಗಳಿವೆ. ಒಂದಲ್ಲ ಒಂದು ಹಬ್ಬಕ್ಕೆ ಊರಿಗೆ ಹೋಗುವ ಸಂದರ್ಭ ಇದ್ದೇ ಇರುತ್ತದೆ. ದೂರದ ಊರುಗಳಲ್ಲಿ ಕೆಲಸದಲ್ಲಿ ಇರುವ ಜನರು ಹಬ್ಬಕ್ಕೆ ತಮ್ಮ ಊರಿಗೆ ಹೋಗುವುದಿದೆ. ಅಂತೆಯೇ ಈ ಮೂರು ತಿಂಗಳು ರೈಲು, ಬಸ್ಸು, ವಿಮಾನಗಳಿಗೆ ಬಹಳ ಬೇಡಿಕೆ ಇರುತ್ತದೆ. ಇಂಥ ಸಂದರ್ಭಗಳನ್ನು ದಳ್ಳಾಳಿಗಳು (Touts) ಬಹಳ ದುರುಪಯೋಗಿಸಿಕೊಳ್ಳುತ್ತಾರೆ. ರೈಲ್ವೆ ನಿಲ್ದಾಣದ ಬಳಿಯೋ, ಬಸ್ ನಿಲ್ದಾಣದ ಬಳಿಯೂ ಸುಳಿದಾಡುವ ಈ ಮಧ್ಯವರ್ತಿಗಳು ಗ್ರಾಹಕರಿಗೆ ಸುಲಭವಾಗಿ ಟಿಕೆಟ್ (ticket booking) ಕೊಡಿಸುತ್ತೇವೆಂದು ಪುಸಲಾಯಿಸಿ ಹೆಚ್ಚು ಹಣ ವಸೂಲಿ ಮಾಡುವ ಘಟನೆಗಳು ತೀರಾ ಸಾಮಾನ್ಯ.

ನೀವು ಹಬ್ಬದ ಸಂದರ್ಭದಲ್ಲಿ ಟಿಕೆಟ್ ಬುಕ್ ಮಾಡದೇ, ನಿಲ್ದಾಣಗಳಲ್ಲಿ ನೇರವಾಗಿ ಟಿಕೆಟ್ ಬುಕ್ ಮಾಡುವ ಇರಾದೆಯಲ್ಲಿ ಹೋದರೆ ಇಂಥ ದಳ್ಳಾಳಿಗಳ ಕೈಗೆ ಸಿಲುಕಬೇಕಾದೀತು. ಎಲ್ಲಿಯೂ ಟಿಕೆಟ್ ಸಿಕ್ಕೋದಿಲ್ಲ, ತಮ್ಮ ಬಳಿ ಮಾತ್ರ ಟಿಕೆಟ್ ಇರೋದು ಎಂದು ನಂಬಿಸಿ ನಿಮ್ಮನ್ನು ಇವರು ಯಾಮಾರಿಸಬಹುದು. ಹೆಚ್ಚಿನ ಬೆಲೆ ಪಡೆದು ಟಿಕೆಟ್ ಕೊಟ್ಟರೆ ನಿಮ್ಮ ಅದೃಷ್ಟ. ಕೆಲ ದಳ್ಳಾಳಿಗಳು ಟಿಕೆಟ್ ತರುವುದಾಗಿ ಹೇಳಿ ನಿಮ್ಮಿಂದ ದುಡ್ಡು ಪಡೆದು ಮಾಯವಾಗಬಹುದು.

ಇದನ್ನೂ ಓದಿ: Cybercrimes: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕ್ಯೂಆರ್ ಕೋಡ್ ಸ್ಕ್ಯಾಮ್; ಹೇಗೆಲ್ಲಾ ಯಾಮಾರಿಸ್ತಾರೆ ನೋಡಿ..!

ನೀವು ರೈಲು ಪ್ರಯಾಣಿಕರಾಗಿದ್ದು ದಳ್ಳಾಳಿಗಳ ಕೈಗೆ ಸಿಲುಕದೇ ಪಾರಾಗುವ ಉಪಾಯ ಇಲ್ಲಿದೆ:

  • ರೈಲ್ವೆ ಇಲಾಖೆಯ ಅಧಿಕೃತ ಟಿಕೆಟ್ ಬುಕಿಂಗ್ ಸೈಟ್ ಆದ ಐಆರ್​ಸಿಟಿಸಿಯಲ್ಲಿ ಟಿಕೆಟ್ ಬುಕ್ ಮಾಡಿ.
  • ಅಥವಾ ಐಆರ್​ಸಿಟಿಸಿ ಜೊತೆ ಜೋಡಿತವಾದ ಇತರ ಅಧಿಕೃತ ಟಿಕೆಟ್ ಏಜೆಂಟ್​ಗಳ ಆ್ಯಪ್​ಗಳಲ್ಲಿ ರೈಲು ಟಿಕೆಟ್ ಬುಕ್ ಮಾಡಿ.
  • ಯಾವುದೇ ಕಾರಣಕ್ಕೂ ದಳ್ಳಾಳಿಗಳ ಮಾತಿಗೆ ಮರುಳಾಗಬೇಡಿ.
  • ರೈಲು ನಿಲ್ದಾಣದಲ್ಲಿ ಯಾವುದೇ ದಳ್ಳಾಳಿ ನಿಮ್ಮನ್ನು ಪುಸಲಾಯಿಸಲು ಬಂದು, ಆತನ ವರ್ತನೆ ನಿಮಗೆ ಸಂಶಯಾಸ್ಪದ ಎನಿಸಿದರೆ ಕೂಡಲೇ ರೈಲ್ವೆ ಅಧಿಕಾರಿಗಳ ಗಮನಕ್ಕೆ ತನ್ನಿ.
  • ನೀವು ಊರಿಗೆ ಹೋಗುವ ಪ್ಲಾನ್ ಮೊದಲೇ ಹಾಕಿಕೊಂಡಿದ್ದರೆ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ. ನಿಲ್ದಾಣಕ್ಕೆ ಹೋಗಿ ಟಿಕೆಟ್ ಬುಕ್ ಮಾಡುತ್ತೇನೆಂದರೆ ಅದು ಅದೃಷ್ಟಪರೀಕ್ಷೆ ಆಗುತ್ತದೆ ಅಷ್ಟೆ.

ಸರ್ಕಾರದಿಂದ ದಳ್ಳಾಳಿಗಳ ನಿಯಂತ್ರಣಕ್ಕೆ ಕ್ರಮ

ಇ-ಟಿಕೆಟ್ ಕೊಡಿಸುವ ಜಾಲವನ್ನು ಭೇದಿಸಲು ರೈಲ್ವೆ ರಕ್ಷಣಾ ಪಡೆ (ಆರ್​ಪಿಎಫ್) ಆಪರೇಷನ್ ಉಪಲಬ್ಧ್ ಕಾರ್ಯಾರಣೆ ನಡೆಸುತ್ತದೆ. ಇತ್ತೀಚೆಗೆ ಈ ಕಾರ್ಯಾಚರಣೆಯಲ್ಲಿ 1,000ಕ್ಕೂ ಹೆಚ್ಚು ಅಕ್ರಮ ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: eRupee App: ಒಂದೇ ಆ್ಯಪ್​ನಲ್ಲಿ ಇ-ರುಪೀ ಮತ್ತು ಯುಪಿಐ; ಕೆನರಾ ಬ್ಯಾಂಕ್​ನಿಂದ ಡಿಜಿಟಲ್ ರುಪೀ ಅಪ್ಲಿಕೇಶನ್

ರೈಲು ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರ ಐಡಿ ಕಾರ್ಡ್ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ದಳ್ಳಾಳಿಗಳು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುವುದು ಕಷ್ಟವಾಗುತ್ತದೆ.

ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಆ್ಯಪ್ ಎರಡೂ ಕಡೆ ರೈಲು ಟಿಕೆಟ್ ಬುಕ್ ಮಾಡಬಹುದು. ಇಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಬಹಳ ಸರಳ ಇರುವಂತೆ ನೋಡಿಕೊಳ್ಳಲಾಗಿದೆ. ಪ್ರಯಾಣಿಕರು ಸುಲಭವಾಗಿ ಇಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್