Kannada News Karnataka Bengaluru Bengaluru: Transport dept orders One city one rate for taxi services, how much is the rent now? Here is the detail
ಬೆಂಗಳೂರು: ಟ್ಯಾಕ್ಸಿಗಳಿಗೆ ಒಂದು ನಗರ ಒಂದು ದರ ಜಾರಿ, ಈಗೆಷ್ಟಿದೆ ಬಾಡಿಗೆ? ಇಲ್ಲಿದೆ ವಿವರ
ಒಂದು ನಗರ ಒಂದು ದರ ಜಾರಿಗೆ ಖಾಸಗಿ ವಾಹನಗಳ ಮಾಲೀಕರ ಒಕ್ಕೂಟ ಮಾಡಿರುವ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಒಂದೇ ರೀತಿಯ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಕರ್ನಾಟಕದ ಇತರ ನಗರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಟ್ಯಾಕ್ಸಿ ದರ ಒಂದೇ ಆಗಿರಲಿದೆ. ಆದೇಶ ಜಾರಿಯ ನಂತರ ಯಾವ ವಿಧದ ಟ್ಯಾಕ್ಸಿಗೆ ಎಷ್ಟು ದರ ನಿಗದಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆಗಳಿಗೆ ‘ಒಂದು ನಗರ ಒಂದು ದರ’ ಜಾರಿ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದರ ಪ್ರಕಾರ, ಕರ್ನಾಟಕದಾದ್ಯಂತ ಟ್ಯಾಕ್ಸಿಗಳಿಗೆ ನಿಗದಿಯಾಗಿರುವ ದರವೇ ಬೆಂಗಳೂರಿಗೂ ಅನ್ವಯವಾಗಲಿದೆ. ಒಂದು ನಗರ ಒಂದು ದರ ನೀತಿಗಾಗಿ ಖಾಸಗಿ ವಾಹನಗಳ ಮಾಲೀಕರ ಒಕ್ಕೂಟ ಮನವಿ ಸಲ್ಲಿಸಿತ್ತು. ಇದನ್ನು ಪರಿಗಣಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಸದ್ಯ ರಾಜ್ಯದ ಇತರ ಕಡೆಗಳಲ್ಲಿ ಕಾರ್ಯಾಚರಿಸವ ಟ್ಯಾಕ್ಸಿಗಳಿಗೆ ಹೊರಡಿಸಿದ್ದ ಆದೇಶವೇ ಬೆಂಗಳೂರಿಗೂ ಜಾರಿಯಾಗಿದೆ.
ಯಾವ ಟ್ಯಾಕ್ಸಿಗೆ ಎಷ್ಟು ದರ?
10 ಲಕ್ಷ ರೂ. ಒಳಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ ದರ 100 ರೂ. ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಮೀಗೆ 24 ರೂಪಾಯಿ ನಿಗದಿ ಮಾಡಲಾಗಿದೆ.
10ರಿಂದ 15 ಲಕ್ಷ ರೂ. ಮೌಲ್ಯದ ವಾಹನಗಳಿಗೆ 4 ಕಿಮೀವರೆಗೆ 115 ರೂ. ಬಾಡಿಗೆ ನಿಗದಿಯಾಗಿದೆ. ನಂತರದ ಪ್ರತಿ ಕಿಲೋ ಮೀಟರ್ಗೆ 28 ರೂಪಾಯಿ ದರ ನಿಗದಿಪಡಿಸಲಾಗಿದೆ.
15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಕ್ಕೆ 4 ಕಿಮೀ ವರೆಗೆ 130 ರೂ. ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ಗೆ 32 ರೂಪಾಯಿ ಇದೆ.
ಕಾಯುವಿಕೆ ಅಥವಾ ವೇಟಿಂಗ್ಗೆ ಮೊದಲ 5 ನಿಮಿಷ ಉಚಿತವಾಗಿದೆ. ಬಳಿಕ ಪ್ರತಿ ನಿಮಿಷಕ್ಕೆ 1 ರೂ. ನಿಗದಿಪಡಿಸಲಾಗಿದೆ. ಟ್ಯಾಕ್ಸಿಗಳು ಸಮಯದ ಆಧಾರದಲ್ಲಿ ದರ ಪಡೆಯುವಂತಿಲ್ಲ. ಕಿಲೋ ಮೀಟರ್ ಆಧಾರದಲ್ಲೇ ಶುಲ್ಕ ಪಡೆಯಬೇಕೆಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಶುಲ್ಕಗಳ ಹೊರತಾಗಿ ಬೇರೆ ಯಾವುದೇ ದರ ಪಡೆಯಬಾರದು ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ