ಯಶವಂತಪುರ – ಹೊಸೂರು ಮೆಮು ರೈಲು ಸಂಚಾರಕ್ಕೆ ಗ್ರೀನ್​ ಸಿಗ್ನಲ್​

ಯಶವಂತಪುರದಿಂದ ಹೊಸೂರಿಗೆ ಹೋಗಲು ಗಂಟೆಗಟ್ಟಲೇ ಪ್ರಯಾಣಿಸಬೇಕು. ಆದರೆ, ಇನ್ಮುಂದೆ ಇದಕ್ಕೆ ಬ್ರೇಕ್ ಬೀಳಲಿದೆ. ಯಶವಂತಪುರ-ಹೊಸೂರು ಮಧ್ಯೆ ಮೆಮು ರೈಲು ಸಂಚಾರಕ್ಕೆ ಭಾರತೀಯ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ರೈಲು ಓಡಾಟ ಸಮಯ ಇಲ್ಲಿದೆ.

ಯಶವಂತಪುರ - ಹೊಸೂರು ಮೆಮು ರೈಲು ಸಂಚಾರಕ್ಕೆ ಗ್ರೀನ್​ ಸಿಗ್ನಲ್​
ಮೆಮು ರೈಲು
Follow us
| Updated By: ವಿವೇಕ ಬಿರಾದಾರ

Updated on:Sep 03, 2024 | 11:14 AM

ಬೆಂಗಳೂರು, ಸೆಪ್ಟೆಂಬರ್​​ 03: ಯಶವಂತಪುರ-ಹೊಸೂರು (Yeshwanthpur – Hosur MEMU Train) , ತುಮಕೂರು-ಯಶವಂತಪುರ (TumakurYeshwanthpur) ಮಾರ್ಗವಾಗಿ ಮೆಮು ರೈಲು ಓಡಾಟಕ್ಕೆ ಓಡಾಟಕ್ಕೆ ಭಾರತೀಯ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.

ಯಶವಂತಪುರ – ಹೊಸೂರು ಮೆಮು ರೈಲು

ರೈಲು ಸಂಖ್ಯೆ 06203 (66563) ಯಶವಂತಪುರ – ಹೊಸೂರು ಮೆಮು ರೈಲು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ರೈಲು ಸಂಖ್ಯೆ 06204 (66564) ಹೊಸೂರು – ಯಶವಂತಪುರ ಮೆಮು ರೈಲು ಮಧ್ಯಾಹ್ನ 3.20ಕ್ಕೆ ಹೊಸೂರಿನಿಂದ ಹೊರಟು ಸಂಜೆ 5.15ಕ್ಕೆ ಯಶವಶವಂತಪುರ ತಲುಪಲಿದೆ.

ರೈಲು ನಿಲುಗಡೆ ನಿಲ್ದಾಣಗಳು

ಹೊಸೂರು – ಯಶವಂತಪುರ ಮೆಮು ರೈಲು ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್ ರಸ್ತೆಯಲ್ಲಿ ನಿಲ್ಲುತ್ತದೆ.

ತುಮಕೂರು-ಯಶವಂತಪುರ ಮೆಮು ರೈಲು

ರೈಲು ಸಂಖ್ಯೆ 06201 (66561) ತುಮಕೂರು-ಯಶವಂತಪುರ ಮೆಮು ರೈಲು ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06202 (66562) ತುಮಕೂರು-ಯಶವಂತಪುರ ಮೆಮು ರೈಲು ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ.

ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ 06205 (6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ.

ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ 06206 (66566) ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.

ರೈಲು ನಿಲುಗಡೆ ಸ್ಥಳಗಳು

ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ ನಿಲ್ದಾಣಗಳ ನಡುವೆ ನಿಲ್ಲುತ್ತದೆ.

ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ.

ಇದನ್ನೂ ಓದಿ: ಆಂಧ್ರ ಪ್ರವಾಹ: ಬೆಂಗಳೂರು, ಮೈಸೂರಿನಿಂದ ತೆರಳುವ ಹಲವು ರೈಲುಗಳು ರದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ

ರೈಲು ರದ್ದು, ಭಾಗಶಃ ರದ್ದು

ಬೆಂಗಳೂರು ವಿಭಾಗದ ಪೆನುಕೊಂಡ-ಮಕ್ಕಾಜಿಪಲ್ಲಿ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲ ರೈಲುಗಳು ಭಾಗಶಃ ರದ್ದು ಮತ್ತು ಬದಲಾದ ಮಾರ್ಗದ ಮೂಲಕ ಸಂಚರಿಸಲಾಗುತ್ತದೆ.

ಭಾಗಶಃ ರದ್ದು

ರೈಲು ಸಂಖ್ಯೆ 06515 ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೆಮು ವಿಶೇಷ ರೈಲು ಸೆಪ್ಟೆಂಬ‌ರ್ 5, 10, 11 ಮತ್ತು 12, 2024 ರಂದು ಹಿಂದೂಪುರ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಿಂದೂಪುರದಲ್ಲಿ ಕೊನೆಗೊಳ್ಳುತ್ತದೆ.

  • ರೈಲು ಸಂಖ್ಯೆ 06516 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆಎಸ್‌ಆರ್ ಬೆಂಗಳೂರು ಮಮು ವಿಶೇಷ ರೈಲು ಸೆಪ್ಟೆಂಬ‌ರ್ 5, 10, 11 ಮತ್ತು 12, 2024 ರಂದು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಬದಲು ಹಿಂದೂಪುರದಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.
  • ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ಡೆಮು ವಿಶೇಷ ರೈಲು ಸೆಪ್ಟೆಂಬರ್ 9 ರಿಂದ 11, 2024 ರವರೆಗೆ ಧರ್ಮಾವರಂ-ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಧರ್ಮಾವರಂನಲ್ಲಿ ಕೊನೆಗೊಳ್ಳುತ್ತದೆ.
  • ರೈಲು ಸಂಖ್ಯೆ 07694 ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲು ಸೆಪ್ಟೆಂಬರ್ 10 ರಿಂದ 12, 2024 ರವರೆಗೆ ಹಿಂದೂಪುರ ನಿಲ್ದಾಣದ ಬದಲು ಧರ್ಮಾವರಂನಿಂದ ನಿಗದಿತ ನಿರ್ಗಮನ ಸಮಯದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಹೀಗಾಗಿ ಹಿಂದೂಪುರ ಧರ್ಮಾವರಂ ನಿಲ್ದಾಣಗಳ ನಡುವೆ ರದ್ದುಗೊಂಡಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Tue, 3 September 24