ಕರ್ನಾಟಕದಲ್ಲಿ ಕೇವಲ ಮೂರು ತಿಂಗಳಲ್ಲಿ ಟ್ರ್ಯಾಕ್​ಗಿಳಿಯಲಿದೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು

ದೇಶದಲ್ಲಿ ಇದೇ ಮೊದಲ ಬಾರಿಗೆ ವಂದೇ ಭಾರತ್ ಎಸಿ ಸ್ಲೀಪರ್ ಕೋಚ್ ಗಳನ್ನು ಬೆಂಗಳೂರಿನ ಬೆಮಲ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಆ ರೈಲಿನ ಟ್ರಯಲ್ ರನ್ ಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ ಸೋಮಣ್ಣ ಚಾಲನೆ ನೀಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗಿಳಿಯಲಿವೆ.

ಕರ್ನಾಟಕದಲ್ಲಿ ಕೇವಲ ಮೂರು ತಿಂಗಳಲ್ಲಿ ಟ್ರ್ಯಾಕ್​ಗಿಳಿಯಲಿದೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು
ವಂದೇ ಭಾರತ್ ಸ್ಲೀಪರ್ ಕೋಚ್
Follow us
| Updated By: ಆಯೇಷಾ ಬಾನು

Updated on:Sep 02, 2024 | 11:31 AM

ಬೆಂಗಳೂರು, ಸೆಪ್ಟೆಂಬರ್.02: ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳು (Vande Bharat Sleeper Train) ಹಳಿಗಿಳಿಯಲಿವೆ. ಈವರೆಗೂ ವಂದೇ ಭಾರತ್‌ ನಲ್ಲಿ ಕುಳಿತು ಕೊಳ್ಳುವ, 360 ಡಿಗ್ರಿ ತಿರುಗುವಾಸನಗಳಿದ್ದವು. ಆದರೆ ಇನ್ಮುಂದೆ ದೂರದ ಪ್ರಯಾಣಕ್ಕೆ ಸಹಕಾರಿಯಾಗುವ ಹಾಗೆ ಸ್ಲೀಪರ್ ಕೋಚ್‌ಗಳೂ ಸಹ ಇರಲಿದೆ. ಈ ಕೋಚ್‌ಗಳು ಬೆಂಗಳೂರಿನ ಬಿಇಎಂಎಲ್‌ನಲ್ಲಿ ತಯಾರಾಗುತ್ತಿವೆ. ರೈಲ್ವೆ ಖಾತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಸಹಾಯಕ ಖಾತೆ ಸಚಿವ ವಿ ಸೋಮಣ್ಣ ಭಾನುವಾರ ಹೊಸ ಕೋಚ್‌ಗಳ ಪರಿಶೀಲನೆ ನಡೆಸಿ ಟ್ರಯಲ್ ರನ್ ಗೆ ಚಾಲನೆ ನೀಡಿದರು.

ಈ ರೈಲಿನಲ್ಲಿ ​ವಿಶಾಲವಾದ ಸ್ಥಳಾವಾಕಾಶ ಹೊಂದಿರಲಿರುವ ಸ್ಲೀಪರ್‌ ಕೋಚ್‌ಗಳಲ್ಲಿಅರಾಮದಾಯಕ ಸೀಟ್‌ಗಳು ಇರಲಿವೆ. ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳಲ್ಲಿ 16 ಬೋಗಿಗಳು, 823 ಸೀಟುಗಳು ಇರಲಿವೆ. 3ಎಸಿ ದರ್ಜೆಯ 11 ಬೋಗಿ (611 ಆಸನ), 2ಎಸಿ ದರ್ಜೆಯ 4 ಬೋಗಿ (188 ಆಸನ), ಒಂದು 1 ಎಸಿ ದರ್ಜೆಯ ಕೋಚ್‌ (24 ಆಸನ) ಇರಲಿವೆ.

ಇನ್ನು ಈ ರೈಲಿನಲ್ಲಿ ಅರಾಮದಾಯಕ ಸೀಟ್, ಅಂಗವಿಕಲರಿಗಾಗಿ ವಿಶೇಷ ಶೌಚಾಲಯ ಮತ್ತು ಮಕ್ಕಳಿಗೆ ಡೈಪರ್ ಹಾಕಲು ಟೇಬಲ್ ವ್ಯವಸ್ಥೆ ಇದೆ. ಅಪಘಾತ ನಿಯಂತ್ರಕ ಕವಚ ವ್ಯವಸ್ಥೆ, ಗಂಟೆಗೆ 160 ಕಿ.ಮೀ. ವೇಗದಲ್ಲಿ ರೈಲು ಸಂಚಾರ ಮಾಡಲಿದೆ. ರಾಜಧಾನಿ ರೈಲುಗಳ ದರಕ್ಕೆ ಹತ್ತಿರದಲ್ಲೇ ಇದರ ಟಿಕೆಟ್‌ ದರ ಇರಲಿದೆ. ಎಸಿ, ಆಮ್ಲಜನಕದ ಸೂಕ್ತ ಸಂಚಾರಕ್ಕೆ ಅನುಕೂಲ​ ವಿಶ್ವದರ್ಜೆಯ ರೈಲು ಪ್ರಯಾಣ ಅನುಭವ ಕೊಡುತ್ತವೆ‌. ಮೊಬೈಲ್‌ ಹೋಲ್ಡರ್‌, ಚಾರ್ಜ್‌ ಪಾಯಿಂಟ್‌, ಸ್ನ್ಯಾಕ್‌ ಟೇಬಲ್‌, ಕೋಚ್ ಗಳಲ್ಲಿ ಮುಂದಿನ ಸ್ಟೇಷನ್ ಗಳ ಸಂಪೂರ್ಣ ಡಿಜಿಟಲ್ ಬೋರ್ಡ್ ಗಳ ಮೂಲಕ ಮಾಹಿತಿ. ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್‌, ನೈಟ್ ರಿಡೀಂಗ್ ಲೈಟ್ ಗಳು, ಯುಎಸ್ಬಿ, ಸಿ ಟೈಪ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಬೆಂಗಳೂರು: BEML​ನಲ್ಲಿ ವಂದೇ ಭಾರತ್​ ಸ್ಲೀಪರ್ ಕೋಚ್ ಪರಿಶೀಲಿಸಿದ ಅಶ್ವಿನಿ ವೈಷ್ಣವ್​​

ಪ್ರತಿ ಬೋಗಿಯಲ್ಲೂ ಎರಡು ಸಿಸಿ ಕ್ಯಾಮರಾಗಳ ವ್ಯವಸ್ಥೆ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ, ಟಾಕ್ ಬ್ಯಾಕ್ ವ್ಯವಸ್ಥೆ, ರಾತ್ರಿ ವೇಳೆ ಪ್ರಯಾಣಿಕರು ಗಲಾಟೆ ಮಾಡಿದ್ರೆ ಅದನ್ನು ಕಂಟ್ರೋಲ್ ಮಾಡಲು ಕೋಚ್ ಗಳಲ್ಲಿ ಸ್ಪೀಕರ್ ಗಳ ವ್ಯವಸ್ಥೆ ಹೀಗೆ ಸಾಕಷ್ಟು ಹೊಚ್ಚ ಹೊಸ ತಂತ್ರಜ್ಞಾನವನ್ನು ಬಳಸಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಬೋಗಿ ನಿರ್ಮಾಣ ಮಾಡಲು ನಾಲ್ಕು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಾಡಿ ತಿಳಿಸಿದರು.

ಒಟ್ನಲ್ಲಿ ಈಗಾಗಲೇ ವಂದೇ ಭಾರತ್ ಚೇರ್ ರೈಲಿನಲ್ಲಿ ನೀವೆಲ್ಲ ಪ್ರಯಾಣ ಮಾಡಿದ್ದೀರಾ. ಆದರೆ ಆ ರೈಲೇ ಪ್ರಯಾಣಿಕರಿಗೆ ವಿಮಾನದ ರೀತಿಯಲ್ಲಿ ಅನುಭವ ನೀಡಿದ್ರೆ, ಈ ಸ್ಲೀಪರ್ ಕೋಚ್ ಗಳಂತು ಮತ್ತೊಂದು ರೀತಿಯ ಅದ್ಬುತ ಅನುಭವ ನೀಡುವುದರಲ್ಲಿ ನೋ ಡೌಟ್ ಅಂತಿದ್ದಾರೆ ರೈಲ್ವೆ ಅಧಿಕಾರಿಗಳು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:01 am, Mon, 2 September 24

ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್